newsfirstkannada.com

ಸರ್ಕಾರದ ವಿರುದ್ಧ ಕಾಂಗ್ರೆಸ್​ ಶಾಸಕ ಪ್ರತಿಭಟನೆ.. ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ

Share :

16-07-2023

    ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಚನ್ನಗಿರಿ ಶಾಸಕ

    ರಾಜಕೀಯ ಪ್ರೇರಿತವಾಗಿ ದೂರು ದಾಖಲು ಆರೋಪ..!

    ಚನ್ನಗಿರಿ ಸಿಪಿಐ ಮಧು ವರ್ಗಾವಣೆಗೆ ಆಗ್ರಹಿಸಿದ ಶಾಸಕ

ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವರ್ಗಾವಣೆ ಬಾಂಬ್ ಸಿಡಿಸಿದ್ದಾರೆ. ಈ ಬಾಂಬ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅದರಲ್ಲೂ ಹಸ್ತ ಪಾಳಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಹೀಗಿರುವಾಗ ಆಡಳಿತದಲ್ಲಿನ ಕಾಂಗ್ರೆಸ್ ಶಾಸಕರೆ ನ್ಯಾಯಕ್ಕಾಗಿ ಪ್ರತಿಭಟನೆಗೆ ಇಳಿದಿದ್ದಾರೆ.

ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ಬಾಂಬ್ ಸಿಡಿಸಿ ಸದನದ ಹೊರಗೆ ಒಳಗೆ ಭಾರೀ ಮಲ್ಲಯುದ್ಧ ಮಾಡ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡ ಇಕ್ಕಟ್ಟಿನಲ್ಲಿ ಸಿಲುಕಿದೆ. ಹೀಗಿರೋವಾಗ ಸರ್ಕಾರದ ಭಾಗವಾಗಿರೋ ಶಾಸಕರೇ ಪ್ರತಿಭಟನೆಗೆಳಿದಿದ್ದಾರೆ.

ಪೊಲೀಸ್ ಠಾಣೆ ಎದುರು ಅಹೋರಾತ್ರಿ ಧರಣಿ ಕುಳಿತ ಶಾಸಕ

ಪೊಲೀಸ್ ಠಾಣೆ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರೋರು ಜನಸಾಮನ್ಯರಲ್ಲ. ಬದಲಾಗಿ ಜನರ ಪರವಾಗಿ ಕೆಲಸ ಮಾಡೋ ಶಾಸಕರು. ನ್ಯಾಯಕ್ಕಾಗಿ ಆಗ್ರಹಿಸಿ ದಾವಣಗೆರೆಯ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಪೊಲೀಸ್ ಠಾಣೆ ಮುಂದೆ ಅಹೋರಾತ್ರಿ ಧರಣಿ ಕುಳಿತಿದ್ದಾರೆ.

ಚನ್ನಗಿರಿ ಸಿಪಿಐ ಮಧು ವಿರುದ್ಧ ಶಾಸಕನಿಂದ ಪ್ರತಿಭಟನೆ

ಜಿಲ್ಲೆಯ ಚನ್ನಗಿರಿ ಸಿಪಿಐ ಮಧು ವಿರುದ್ಧ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕುಳಿತಿದ್ದಾರೆ. ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಲಾಗ್ತಿದೆ. ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ಅಲ್ಲದೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನ್ಯಾಯಕ್ಕಾಗಿ ಆಗ್ರಹಿಸಿ ಶಾಸಕರೇ ಪ್ರತಿಭಟನೆ ನಡೆಸ್ತಿದ್ದಾರೆ. ಅದು ಕೂಡ ತಮ್ಮದೇ ಸರ್ಕಾರವಿರುವಾಗ ಒಬ್ಬ ಶಾಸಕ ಧರಣಿ ಕುಳಿತಿದ್ದಾರೆ. ಇವರದೇ ಪರಿಸ್ಥಿತಿ ಹೀಗಾದ್ರೆ ಇನ್ನು ಜನಸಮಾನ್ಯರ ಪಾಡೇನು ಅನ್ನೋದೇ ಸದ್ಯ ಎಲ್ಲರ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದ ವಿರುದ್ಧ ಕಾಂಗ್ರೆಸ್​ ಶಾಸಕ ಪ್ರತಿಭಟನೆ.. ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ

https://newsfirstlive.com/wp-content/uploads/2023/07/CM_SIDDARAMIAH_DK_SHIVAKUMAR.jpg

Load More