/newsfirstlive-kannada/media/post_attachments/wp-content/uploads/2024/07/DK_SHIVAKUMAR-2.jpg)
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ರಂಗೇರಿದೆ. ಜಿದ್ದಾಜಿದ್ದಿನ ಕಣವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವರ್ಸಸ್ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಎನ್ನುವಂತಾಗಿದ್ದು, ಇಬ್ಬರು ನಾಯಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಸಿ.ಪಿ.ಯೋಗೇಶ್ವರ್ ಅಸ್ತ್ರದೊಂದಿಗೆ ಡಿಸಿಎಂ ಶಿವಕುಮಾರ್ ತಂತ್ರಗಾರಿಕೆ ರೂಪಿಸಿದ್ರೆ, ಇತ್ತ ಹೆಚ್​​ಡಿಕೆ ಪುತ್ರ ನಿಖಿಲ್​ ಕುಮಾರಸ್ವಾಮಿಯನ್ನ ಕಣಕ್ಕಿಳಿಸಿದ್ದಾರೆ. ಇಬ್ಬರೂ ನಾಯಕರಿಗೂ ಚನ್ನಪಟ್ಟಣ ಕ್ಷೇತ್ರದ ಗೆಲುವು ಅನಿರ್ವಾಯವಾಗಿದೆ. ಹೀಗಾಗಿ ಡಿಕೆ ಶಿವಕುಮಾರ್, ನಿನ್ನೆ ರಾತ್ರಿ ಕಾಂಗ್ರೆಸ್​ ಮುಖಂಡರ ಸಭೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ ಯೋಗೇಶ್ವರ್​ ಗೆಲ್ಲಿಸಲು ಶ್ರಮಿಸುವಂತೆ ಮುಖಂಡರಿಗೆ ಸೂಚಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಅಸಮಾಧಾನ ಬೇಡ, ಅಸಮಾಧಾನ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಮುಖಂಡರಿಗೆ ಸೂಚಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯೇ ಯಾಕೆ? ಬಿ.ಎಸ್ ಯಡಿಯೂರಪ್ಪ ಹೇಳಿದ್ದು ನಿಜವಾಗುತ್ತಾ?
ಚನ್ನಪಟ್ಟಣಕ್ಕಾಗಿ ಡಿಕೆಶಿ ಚಕ್ರವ್ಯೂಹ!
ಚನ್ನಪಟ್ಟಣ ಉಪಚುನಾವಣೆಯಲ್ಲಿ ಹಿನ್ನಡೆಯಾಬಾರದು. ಯಾವ ಕಾರಣಕ್ಕೂ ಚನ್ನಪಟ್ಟಣದಲ್ಲಿ ಸೋಲಾಗಬಾರದು. ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರನ್ನ ಪಕ್ಷಕ್ಕೆ ಸೆಳೆಯಿರಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಟಾಸ್ಕ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಚನ್ನಪಟ್ಟಣದಲ್ಲಿ ಡಿಕೆಶಿ ಗಣಿತ
ಲೆಕ್ಕಾಚಾರ 01 : ಸ್ಥಳೀಯ ನಾಯಕರನ್ನ ಸೆಳೆದರೆ ಕಾಂಗ್ರೆಸ್​ಗೆ ಮತ್ತಷ್ಟು ಬಲ
ಲೆಕ್ಕಾಚಾರ 02: ಜೆಡಿಎಸ್​ಗೆ ಕ್ಷೇತ್ರದಲ್ಲಿ ಶಕ್ತಿ ಇಲ್ಲ ಎಂಬ ಟ್ರೆಂಡ್ ಸೃಷ್ಟಿಗೆ ಯತ್ನ
ಲೆಕ್ಕಾಚಾರ 03: ಕುಮಾರಸ್ವಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಲಾಭ ತರುವ ಪ್ಲಾನ್
ಲೆಕ್ಕಾಚಾರ 04: ಲೋಕಸಭಾ ಎಲೆಕ್ಷನ್ ಸೋಲಿನ ಸೇಡನ್ನ ತೀರಿಸಿಕೊಳ್ಳೋದು
ಲೆಕ್ಕಾಚಾರ 05: ಒಕ್ಕಲಿಗ ಸಮುದಾಯದ ಪ್ರಬಲ ನಾಯಕನಾಗಲು ಅವಕಾಶ
ಇದನ್ನೂ ಓದಿ: ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್.. ಜೆಡಿಎಸ್, BJP ನಾಯಕರಿಂದ ಮಹತ್ವದ ತೀರ್ಮಾನ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us