newsfirstkannada.com

ಡಿಕೆಶಿಗೆ ನಾನೇ ಎದುರಾಳಿ.. ಚನ್ನಪಟ್ಟಣ ಬೈಎಲೆಕ್ಷನ್‌ಗೆ ತೊಡೆ ತಟ್ಟಿದ C.P ಯೋಗೇಶ್ವರ್; ಏನಂದ್ರು?

Share :

Published July 5, 2024 at 5:17pm

Update July 5, 2024 at 5:18pm

  ಚನ್ನಪಟ್ಟಣ ಬೈಎಲೆಕ್ಷನ್‌ಗೆ ನಾನೇ ಅಭ್ಯರ್ಥಿ ಎಂದ ಸಿ.ಪಿ ಯೋಗೇಶ್ವರ್‌

  ಡಿಕೆ ಶಿವಕುಮಾರ್‌ ಸರ್ಕಾರದ ಹಣದಲ್ಲಿ ಉಪಚುನಾವಣೆ ಮಾಡ್ತಿದ್ದಾರೆ

  ಉಪಚುನಾವಣೆ ಗೆಲ್ಲಲು ಹೆಚ್‌.ಡಿ ಕುಮಾರಸ್ವಾಮಿ ಜೊತೆ ಸಿಪಿವೈ ರಣತಂತ್ರ

ರಾಮನಗರ: ಚನ್ನಪಟ್ಟಣ ಉಪಚುನಾವಣಾ ಕಣದಲ್ಲಿ ನೀನಾ, ನಾನಾ ಅನ್ನೋ ಯುದ್ಧ ಶುರುವಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‌ ಪಂಥಾಹ್ವಾನ ಕೊಟ್ಟು, ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಗುಡುಗಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯೋಗೇಶ್ವರ್ ಅವರು ಕಳೆದ ವಾರ ನಾನು ಕೇಂದ್ರ ಸಚಿವ ಹೆಚ್.​​​ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇನೆ. ಬೈಎಲೆಕ್ಷನ್​ನಲ್ಲಿ ಹೆಚ್​​ಡಿಕೆ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ ಎಂದ ಸಿಪಿವೈ ಹೇಳಿದ್ದಾರೆ.

ಡಿಕೆಶಿಗೆ ಸಿಪಿವೈ ಸವಾಲು!
ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ತರಾಟೆ ತೆಗೆದುಕೊಂಡ ಯೋಗೇಶ್ವರ್ ಅವರು, ರಾಜ್ಯ ಸರ್ಕಾರದ ಹಣದಲ್ಲಿ ಉಪಚುನಾವಣೆ ಮಾಡ್ತಿದ್ದಾರೆ. ಡಿಕೆಶಿ ಕನಕಪುರದಿಂದ ಗೆದ್ದು ರಾಮನಗರ ಉಸ್ತುವಾರಿ ತೆಗೆದುಕೊಂಡಿಲ್ಲ. ಹೋಗಿ ಬೆಂಗಳೂರು ಉಸ್ತುವಾರಿ ತೆಗೆದುಕೊಂಡಿರೋದು ಯಾಕೆ? ಈಗ ಚುನಾವಣೆ ಸಮಯದಲ್ಲಿ ಮಾತ್ರ ಚನ್ನಪಟ್ಟಣ ನೆನಪಾಗಿರೋದಾ. ಚನ್ನಪಟ್ಟಣದ ಜನ ಬುದ್ಧಿವಂತರಿದ್ದಾರೆ. ಇಂತಹ ನಾಟಕಗಳಿಗೆ ನಮ್ಮ ಜನ ಉತ್ತರ ಕೊಡ್ತಾರೆ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಮಂಡ್ಯ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು; ರಾಜ್ಯ ಸರ್ಕಾರದ ಮೇಲೆ ಸಿಡಿದೆದ್ದ HDK; ಹೇಳಿದ್ದೇನು? 

ಕಳೆದ ವಾರ ಡಿಕೆ ಶಿವಕುಮಾರ್ ಅವರು ಮೂರು ದಿನ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದಾರೆ. ಇದು ಉಪಚುನಾವಣೆ ದೃಷ್ಟಿಯಲ್ಲಿ ಮಾಡಿರೋ ಸರ್ಕಾರಿ ಸಂತೆ. ಯಾವುದೇ ಗುರಿ ಇಲ್ಲದೇ, ಯೋಜನೆ ಇಲ್ಲದೇ ಮಾಡಿರೋ ಕಾರ್ಯಕ್ರಮ. ಸರ್ಕಾರ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಬಂದಿರಲಿಲ್ಲ. ಈಗ ಚನ್ನಪಟ್ಟಣ ಖಾಲಿ ಇದೆ, ಬಂದಿದ್ದೇನೆ ಅಂತ ಸುಳ್ಳು ಹೇಳ್ತಿದ್ದಾರೆ. ಜನರಿಗೆ ಮನೆ ಕೊಡ್ತೀನಿ, ಸೈಟ್ ಕೊಡ್ತೀನಿ ಅಂತ ಸುಳ್ಳು ಆಶ್ವಾಸನೆ ಕೊಡ್ತಿದ್ದಾರೆ. ಟೌನ್ ವ್ಯಾಪ್ತಿ ಬಿಟ್ಟರೆ ಬಹುತೇಕ ತಾಲೂಕಿನ ಜನತೆಗೆ ಮನೆ ಸಮಸ್ಯೆ ಇಲ್ಲ. ಚುನಾವಣೆ ಟೈಂನಲ್ಲಿ ಮನೆ ಕೊಡ್ತೀವಿ ಅನ್ನೋದು ಸುಳ್ಳು. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಒನ್ ಮ್ಯಾನ್ ಶೋ ಮಾಡಿದ್ದಾರೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಸೈಟ್‌ ಅಕ್ರಮ ಆರೋಪ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಚ್ಚಿಟ್ರು ಅಸಲಿ ವಿಷ್ಯ; ಏನದು? 

ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆಶಿ ಅವರ ಕೊಡುಗೆ ಏನೂ ಇಲ್ಲ. ಚನ್ನಪಟ್ಟಣದಿಂದಲೇ ರಾಜಕೀಯ ಜೀವನ ಆರಂಭಿಸಿದ್ರೂ ಅವರ 40ವರ್ಷದ ಅವಧಿಯಲ್ಲಿ ಅವರ ಕೊಡುಗೆ ಶೂನ್ಯ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಜಾತ್ರೆ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮುಂದುವರಿದ್ರೆ ಆ ಕಾರ್ಯಕ್ರಮಕ್ಕೆ ಹೋಗಿ ಖಂಡಿಸುತ್ತೇವೆ. ಪ್ರೋಟೋಕಾಲ್ ಫಾಲೋ ಮಾಡಲಿಲ್ಲ ಅಂದ್ರೆ ಮೈತ್ರಿ ಪಕ್ಷದ ನಾಯಕರು ಮುಂದಿನ ಕಾರ್ಯಕ್ರಮಗಳಿಗೆ ಪ್ರತಿಭಟನೆ ಮಾಡ್ತೀವಿ ಎಂದು ಸಿಪಿವೈ ಎಚ್ಚರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆಶಿಗೆ ನಾನೇ ಎದುರಾಳಿ.. ಚನ್ನಪಟ್ಟಣ ಬೈಎಲೆಕ್ಷನ್‌ಗೆ ತೊಡೆ ತಟ್ಟಿದ C.P ಯೋಗೇಶ್ವರ್; ಏನಂದ್ರು?

https://newsfirstlive.com/wp-content/uploads/2024/07/DkShi-Cpyogeshwar.jpg

Load More