/newsfirstlive-kannada/media/post_attachments/wp-content/uploads/2024/10/CP_YOGESHWAR.jpg)
ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಚಿತ್ರಣವೇ ಬದಲಾಗಿದೆ. ಬಿಜೆಪಿ ತೊರೆದು ಸೈನಿಕ ‘ಕೈ’ ಹಿಡಿದಿದ್ದಾರೆ. ಇದರ ಬೆನ್ನಲ್ಲೇ ಬೊಂಬೆನಾಡಿನ ಟಿಕೆಟ್ ಯೋಗೇಶ್ವರ್‌ಗೆ ಕೊಟ್ಟು ಡಿ.ಕೆ ಶಿವಕುಮಾರ್ ಸಹೋದರರು ದೋಸ್ತಿಗೆ ಚೆಕ್ ಮೇಟ್ ಇಟ್ಟಿದ್ದಾರೆ. ಇತ್ತ ಸಂಡೂರಿಗೆ ಇ ತುಕಾರಂ ಪತ್ನಿಗೆ ಹಸ್ತಪಡೆ ಮಣೆ ಹಾಕಿದೆ. ಶಿಗ್ಗಾಂವಿ ಕ್ಷೇತ್ರವನ್ನ ಉಳಿಸಿಕೊಂಡು ಜಾತಿ ಲೆಕ್ಕಾಚಾರದಲ್ಲಿ ತೊಡಗಿದೆ.
ರಾಜಕೀಯದಲ್ಲಿ ಅದಲು ಬದಲು ಆಟ. ಆಪರೇಷನ್​ ಎಲ್ಲವೂ ಕಾಮನ್​. ಇವತ್ತು ಜೊತೆಗೆ ಇದ್ದವರು ವಿರೋಧಿಗಳೂ ಆಗಬಹುದು. ಶತ್ರುಗಳು ಸ್ನೇಹಿತರೂ ಆಗಬಹುದು. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ಅದೇ ರೀತಿ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಚನ್ನಪಟ್ಟಣದ ರಾಜಕೀಯ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದರ ಬೆನ್ನಲ್ಲೇ ಸಿಪಿ ಯೋಗೇಶ್ವರ್​ಗೆ ಉಪ ಕದನದ ಯೋಗ ಕೂಡಿ ಬಂದಿದೆ.
ಇದನ್ನೂ ಓದಿ: ಬಾಬುಸಾಪಾಳ್ಯದಲ್ಲಿ ಆರಂತಸ್ತಿನ ಕಟ್ಟಡ ಕುಸಿತ; ಹೇಗಿತ್ತು ಆಮೇಲೇನಾಯ್ತು? ದುರಂತಕ್ಕೆ ಅಸಲಿ ಕಾರಣ ಏನು?
/newsfirstlive-kannada/media/post_attachments/wp-content/uploads/2024/10/CP-yogeshwar-Join-Congress.jpg)
ಚನ್ನಪಟ್ಟಣಕ್ಕೆ ಯೋಗೇಶ್ವರ್, ಇವತ್ತು ನಾಮಪತ್ರ ಸಲ್ಲಿಕೆ
ಬಿಜೆಪಿಯಲ್ಲಿದ್ದ ಸೈನಿಕ, ಕಾಂಗ್ರೆಸ್​​​ನ ಶಸ್ತ್ರ ಹಿಡಿದಿದ್ದಾನೆ. ಕೈಬಿಟ್ಟು ಹೋದ ನಾಯಕನಿಗಾಗಿ ಬಿಜೆಪಿ ಹಲುಬುತ್ತಿದೆ. ಸೈನಿಕನ ಬಂಡಾಯದ ಸುಳಿವು ಅರಿತರೂ ಸರಿಯಾದ ಮದ್ದೆರೆಯದೆ ಕೈಚೆಲ್ಲಿದೆ. ಮೂವರ ಆಟದಲ್ಲಿ ಬಿಜೆಪಿ ಬಡಬಡಿಸ್ತಿದ್ರೆ, ಇಬ್ಬರ ನಡುವಿನ ಜಗಳ 3ನೇ ವ್ಯಕ್ತಿಗೆ ಲಾಭವಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಿ.ಪಿ. ಯೋಗೇಶ್ವರ್‌ಗೆ ಬೈ ಎಲೆಕ್ಷನ್ ಯೋಗ ಕೂಡಿ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಯೋಗೇಶ್ವರ್‌ಗೆ ಟಿಕೆಟ್ ನೀಡಿದೆ. ಈ ಮೂಲಕ ಸೈನಿಕ ಮಿನಿಯುದ್ಧದ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ. ಇವತ್ತು ಬೆಳಗ್ಗೆ 11 ಗಂಟೆಗೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೈ ಎಲೆಕ್ಷನ್‌ಗೆ ಯೋಗೇಶ್ವರ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಸಂಡೂರಲ್ಲಿ ತುಕಾರಾಂ ಪತ್ನಿ ಅನ್ನಪೂರ್ಣಗೆ ‘ಕೈ’ ಟಿಕೆಟ್!
ನಿರೀಕ್ಷೆಯಂತೆ ಸಂಡೂರು ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಟಿಕೆಟ್‌ನ ಸಂಸದ ಇ. ತುಕಾರಾಂ ಪತ್ನಿ ಅನ್ನಪೂರ್ಣಗೆ ನೀಡಲಾಗಿದೆ. ಈ ಮೂಲಕ ವಿಧಾನಸಭೆ. ಲೋಕಸಭೆಯಲ್ಲಿ ಗೆದ್ದುಬೀಗಿದ್ದ ತುಕಾರಾಂ ಕುಟುಂಬಕ್ಕೆ ಕಾಂಗ್ರೆಸ್ ಮಣೆ ಹಾಕಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ. ಇವತ್ತು ಸಂಡೂರು ಅಭ್ಯರ್ಥಿಯಾಗಿ ಅನ್ನಪೂರ್ಣ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
/newsfirstlive-kannada/media/post_attachments/wp-content/uploads/2024/10/BY-ELECTION-CONGRESS-TICKET.jpg)
ಶಿಗ್ಗಾಂವಿ ಸಸ್ಪೆನ್ಸ್.. ಕ್ಷೇತ್ರ ಬಾಕಿ ಉಳಿಸಿಕೊಂಡ ಕಾಂಗ್ರೆಸ್
ಚನ್ನಪಟ್ಟಣ, ಸಂಡೂರು ಅಭ್ಯರ್ಥಿಯನ್ನ ಘೋಷಣೆ ಮಾಡಿರೋ ಕಾಂಗ್ರೆಸ್ ಶಿಗ್ಗಾಂವಿ ಕ್ಷೇತ್ರವನ್ನ ಬಾಕಿ ಉಳಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್​ ನೀಡಬೇಕು ಎಂಬ ಗೊಂದಲವಿದ್ದು. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಒಂದ್ಕಡೆ ಮುಸ್ಲಿಂ ಸಮುದಾಯ, ಮತ್ತೊಂದೆಡೆ ಲಿಂಗಾಯತ, ಈ ಮಧ್ಯೆ ಕುರುಬ ಸಮುದಾಯವೂ ಟಿಕೆಟ್ ಬೇಡಿಕೆ ಇಟ್ಟಿದೆ.
ಕಾಂಗ್ರೆಸ್ ಶಿಗ್ಗಾಂವಿ ಬಾಕಿ ಉಳಿಸಿಕೊಂಡಿದ್ರೆ, ದೋಸ್ತಿ ಪಡೆ ಚನ್ನಪಟ್ಟಣ ಉಳಿಸಿಕೊಂಡಿದೆ. ಇದ್ರ ಮಧ್ಯೆ ಬೊಂಬೆನಾಡಲ್ಲಿ ಸೈನಿಕ ವರ್ಸಸ್ ದಳಪತಿ ಕಾಳಗ ಫಿಕ್ಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us