/newsfirstlive-kannada/media/post_attachments/wp-content/uploads/2024/10/HDK-DKSHI-CPY.jpg)
ಚನ್ನಪಟ್ಟಣದಲ್ಲಿ ಟಿಕೆಟ್ ಅನೌನ್ಸ್​ಗೂ ಮೊದಲೇ ಆಂತರಿಕ ಯುದ್ಧ ಆರಂಭವಾಗಿದೆ. ದಳದೊಳಗೆ ಟಿಕೆಟ್ ಟೆನ್ಷನ್ ಆದ್ರೆ, ಸಿ.ಪಿ ಯೋಗೇಶ್ವರ್ ಬಂಡಾಯದ ಬಾವುಟ ಹಾರಿಸ್ತಿದ್ದಾರೆ. ಚನ್ನಪಟ್ಟಣದ ಮೂಲಕ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿರೋ ಡಿ.ಕೆ ಬ್ರದರ್ಸ್ ಬಂಡಾಯದ ಬೇಗದಿಯಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಚನ್ನಪಟ್ಟಣ ಟಿಕೆಟ್ ಜೆಡಿಎಸ್​ಗೆ ಅಂತಾ ಬಿಜೆಪಿ ಹೈಕಮಾಂಡ್ ಹೇಳಿಯಾಗಿದೆ. ಹೀಗಾಗಿ ಯಾರಿಗೆ ಟಿಕೆಟ್ ಕೊಡೋದು ಅನ್ನೋದೇ ಕುಮಾರಸ್ವಾಮಿ ಟೆನ್ಷನ್​ ಆಗ್ಬಿಟ್ಟಿದೆ. ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿ ಅನ್ನೋ ಆಫರ್ ನಿರಾಕರಿಸಿರೋ ಸೈನಿಕ ಬಂಡಾಯದ ಬಾಣ ಹಿಡಿದು ಯುದ್ಧಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅಖಾಡಕ್ಕಿಳಿದು ಅಭ್ಯರ್ಥಿ ಅಂತಿಮಗೊಳಿಸಲು ಪ್ಲಾನ್ ರೂಪಿಸಿದ್ದಾರೆ.
ಇವತ್ತೇ ಫೈನಲ್
ಯಾರಿಗೆ ಟಿಕೆಟ್ ನೀಡೋದು ಅನ್ನೋ ನಿಟ್ಟಿನಲ್ಲಿ ದೇವೇಗೌಡರ ನಿವಾಸದಲ್ಲಿ ಸುಮಾರು 2 ಗಂಟೆಗಳ ಕಾಲ ಕುಮಾರಸ್ವಾಮಿ ಚರ್ಚೆ ನಡೆಸಿದ್ರು. ಇಂದು ಚನ್ನಪಟ್ಟಣ ಕಾರ್ಯಕರ್ತರ,ಮುಖಂಡರ ಸಭೆ ನಡೆಸಲಿರೋ ಹೆಚ್​ಡಿಕೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಆ ಬಳಿಕ ಕುಮಾರಸ್ವಾಮಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಿದ್ದಾರೆ.
ದೋಸ್ತಿ ಟಿಕೆಟ್ ಇಲ್ಲ!
ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ಮೇಲೆ ಸಿಪಿವೈ ನಡೆ ಯಾವ ಕಡೆ ಅನ್ನೋ ಪ್ರಶ್ನೆ ಎದ್ದಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಕ್ಕೆ ಸಿ.ಪಿ.ಯೋಗೇಶ್ವರ್ ಒಲವಿದ್ದಂತೆ ಕಾಣ್ತಿದೆ. ಆದ್ರೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಬಳಿಕ ಯೋಗೇಶ್ವರ್ ಏನ್ಮಾಡ್ತಾರೆ ಅನ್ನೋದು ಗೊತ್ತಾಗಲಿದೆ. ಇದೇ ವಿಚಾರವಾಗಿ ಡಿ.ಕೆ ಶಿವಕುಮಾರ್​ರನ್ನ ಪ್ರಶ್ನೆ ಮಾಡಿದ್ರೆ, ನಂಗೇನೂ ಗೊತ್ತಿಲ್ಲ! ರಾಜೀನಾಮೆ ಕೊಟ್ಟಿರೋದು ಹೌದಾ ಅಂತಾ ಮರಳಿ ಪ್ರಶ್ನೆ ಮಾಡಿದ್ದಾರೆ. ಡಿಕೆಶಿ ಚನ್ನಪಟ್ಟಣಕ್ಕೆ ಕ್ಯಾಂಡಿಡೇಟ್ ಆಗಲ್ಲ. ಆದ್ರೂ ನಾನೇ ಅಭ್ಯರ್ಥಿ ಅನ್ನೋ ಹೇಳಿಕೆಯ ಹಿಂದೆ ಸಾಕಷ್ಟು ರಹಸ್ಯ ತಂತ್ರಗಳು ನಡೀತಿರೋದನ್ನ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:TB Dam: ಕ್ರಸ್ಟ್ ಗೇಟ್ ಅಳವಡಿಸಿದವರನ್ನು ಮರೆಯಿತೇ ಸರ್ಕಾರ? ಆರ್ಥಿಕ ಸಂಕಷ್ಟದಲ್ಲಿ ಕನ್ನಯ್ಯ ನಾಯ್ಡು ತಂಡ
ಒಟ್ಟಾರೆ ಚನ್ನಪಟ್ಟಣ ಬೈ-ಎಲೆಕ್ಷನ್ ಅಖಾಡಕ್ಕೆ ಇವತ್ತು ಮಹತ್ವದ ದಿನ. ದೋಸ್ತಿ ಅಭ್ಯರ್ಥಿಯೂ ಇಂದೇ ಫೈನಲ್ ಆಗಲಿದೆ. ಸಿ.ಪಿ ಯೋಗೇಶ್ವರ್ ನಡೆ ಎತ್ತ ಅನ್ನೋದು ಇವತ್ತೇ ತಿಳಿಯಲಿದೆ. ಅಂತ ಕಾಂಗ್ರೆಸ್ ಪ್ಲಾನ್ ಏನು ಅನ್ನೋದಕ್ಕೆ ಇಂದು ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗಾಗಿ ಈ ಮಂಗಳವಾರ ಯಾರಿಗೆ ಮಂಗಳಕರ ಅನ್ನೋದನ್ನು ಕಾದುನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us