newsfirstkannada.com

ದೇಶದ 12 ನಗರಗಳಲ್ಲೂ ಮಹೇಂದ್ರನ ಜಪ..ಮಾಹಿ ವಿಶ್ವಮಾನವ ಆಗಿದ್ದೇ ಬಲು ರೋಚಕ

Share :

01-06-2023

  ಮಾಹಿ ಅಂದ್ರೆ ಅಭಿಮಾನಗಳ ಅಭಿಮಾನ

  ಧೋನಿ ಬಂದ್ರೆ ಸಾಕು ಸೌಂಡ್​ ಜೋರು

  IPLನಲ್ಲಿ ತಮಿಳಿರ ಆರಾಧ್ಯ ದೈವ ಧೋನಿ

ಕ್ರೀಡೆಗೆ ಯಾವುದೇ ಗಡಿ ಇಲ್ಲ. ಅದು ಎಲ್ಲವನ್ನೂ ಮೀರಿದ್ದು..ಇನ್ನೂ ಪ್ರೀತಿನೂ ಹಾಗೇ. ಇದಕ್ಕೆ ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲ. ಅದು ಅನಂತ. ಹೌದು, ನಾವ್ಯಾಕೆ ಇಷ್ಟೊಂದು ಫಿಲೋಸಫಿ ಮಾಡ್ತಿದ್ದೀವಿ ಅಂತೀರಾ ? ಡೆಫಿನೆಟ್ಲಿ ರೀಸನ್​​​ ಇದೆ. ಅದೇನ್ ಅನ್ನೋದು ಗೊತ್ತಾಗಬಬೇಕಾದ್ರೆ ಈ ಸ್ಟೋರಿ ನೋಡಿ.

ಪ್ರೀತಿಗೆ ಗಡಿ ಇಲ್ಲ ಅಂತಾರೆ..! ಈ ಪದಕ್ಕೆ ಇನ್ನೊಂದು ಅರ್ಥನೇ ಮಹೇಂದ್ರ ಸಿಂಗ್ ಧೋನಿ. ನಿಜ ಮಾಹಿ ಪ್ರಿನ್ಸ್ ಆಫ್​​​​​​ ಲವ್​​​​​​. ಅಬ್ಬಬ್ಬಾ, ಈ ಮಿಸ್ಟರ್​ ಕೂಲ್ ಅಂದ್ರೆ ಅದೇನ್​ ಪ್ರೀತಿ ಅಂತೀರಾ? ಅದನ್ನ ವರ್ಣಿಸಲು ಪದಗಳೇ ಸಾಲದು ಬಿಡಿ..! ಧೋನಿಗೆ ಸಿಗ್ತಿರೋ ಪ್ರೀತಿ ಅಪರಿಮಿತ. ಈ ಪ್ರೀತಿ ನೋಡಿ ಪ್ರೀತಿ ಅನ್ನೋ ಪದಕ್ಕೆ ಹೊಟ್ಟೆಕಿಚ್ಚು ಬಂದಿರಬೇಕು. ಅಂತಹ ಅನಂತ ಪ್ರೀತಿಯನ್ನ ವಿಶ್ವಮೆಚ್ಚಿದ ಧೋನಿ ಸಂಪಾದಿಸಿದ್ದಾರೆ.

ಹಿಂದೆಯೂ ನೋಡಿದ್ದೇವೆ..ದಿಗ್ಗಜ ಕ್ರಿಕೆಟರ್ಸ್​ಗೆ ಒಂದು ಫ್ಯಾಂಡಮ್ ಇರುತ್ತೆ. ಆದ್ರೆ ಉಳಿದೆಲ್ಲರಿಗೆ ಹೋಲಿಸಿದ್ರೆ ಮಾಹಿ ಒಂದು ಕೈ ಮೇಲು. ಚಿಕ್ಕ ಮಕ್ಕಳಿಂದು ಹಿಡಿದು ವೃದ್ಧರಿಗೆ ತಲಾ ಇಷ್ಟ..! ತಲಾ ಪಂಚಪ್ರಾಣ..ನಿಜಕ್ಕೂ ಪ್ರೀತಿ ಪಡೆಯುವಿಕೆಯಲ್ಲಿ ಧೋನಿ ವಿಶ್ವಮಾನವ ಸೈ.

ಧೋನಿ ಅಂದ್ರೆ ಅಭಿಮಾನಿಗಳ ಒಡೆಯ, ಪ್ರೀತಿಯ ರಾಜ‘..!

ರಾಂಚಿಯಲ್ಲಿ ಹುಟ್ಟಿದ ಮಹೇಂದ್ರ ಸಿಂಗ್ ಧೋನಿ ಇಂದು ಬರೀ ರಾಂಚಿ ಹುಡುಗನಾಗಿ ಉಳಿದಿಲ್ಲ.ದೇಶದ ಮನೆಮಗ ಆಗಿದ್ದಾರೆ. ಮೂಲೆಮೂಲೆಗೂ ಕೀಪಿಂಗ್ ಚಾಣಕ್ಯ ಕೀರ್ತಿ ಪಸರಿದೆ.ಇವರಿಗಾಗಿ ಹ್ಯೂಜ್​ ಭಕ್ತವರ್ಗವೇ ಹುಟ್ಟಿಕೊಂಡಿದೆ. ಅದು ಅಂತಿಂಥ ಫ್ಯಾಂಡಮ್ ಅಲ್ಲ..ಈ ಭಕ್ತಗಣಕ್ಕೆ ಧೋನಿ ಅಂದ್ರೆ ಉಸಿರು..ಧೋನಿ ಅಂದರೆ ರಕ್ತಸಂಬಂಧಕ್ಕಿಂತಲೂ ಮಿಗಿಲು.

ಮೂಲ ಉತ್ತರಾಖಂಡ, ಹುಟ್ಟಿದ್ದು ರಾಂಚಿಯಲ್ಲಿ

ನನ್ನ ಕುಟುಂಬದ ಮೂಲ ಉತ್ತರಪ್ರದೇಶ..ಈಗ ಅದು ಉತ್ತರಾಖಂಡ ಆಗಿದೆ. ನಾನು ಹುಟ್ಟಿದ್ದು ರಾಂಚಿ, ಬಿಹಾರ ಜಿಲ್ಲೆಯಲ್ಲಿ. ಬಳಿಕ ಅದು ಜಾರ್ಖಂಡ್ ಆಯ್ತು. ಪಶ್ಚಿಮ ಬಂಗಾಳದ ಖಡಕ್​​​ಪುರ್​​ನಲ್ಲಿ ರೈಲ್ವೆ ಉದ್ಯೋಗಿ ಆಗಿ ಕಾರ್ಯ ನಿರ್ವಹಿಸಿದೆ. ಈಗ ಚೆನ್ನೈಗೆ ಬಂದಿದ್ದೇನೆ.

     ಧೋನಿ, ಸಿಎಸ್​ಕೆ ನಾಯಕ.

ಈ ಒಂದೇ ಮಾತೇ ಸಾಕು ಕಣ್ರಿ..ಪ್ರೀತಿಗೆ ಗಡಿ ಇಲ್ಲ ಅನ್ನೋದಕ್ಕೆ..ಉತ್ತರಪ್ರದೇಶದ ಮೂಲದ ಧೋನಿ ಇಂದು ದೇಶದುದ್ದಕ್ಕೂ ಹಾಸುಹೊಕ್ಕಗಿದ್ದಾರೆ. ಎಲ್ಲಿಯ ರಾಂಚಿ ? ಎಲ್ಲಿಯ ಚೆನ್ನೈ ಹೇಳಿ ? ಎತ್ತಿಂದೆತ್ತ ಸಂಬಂಧ ಅಲ್ವ ? ಮಾಹಿಯನ್ನ ಪ್ರೀತಿಸುವ ಮನಸ್ಸುಗಳು ಎಲ್ಲೆಡೆ ಹುಟ್ಟಿಕೊಂಡಿವೆ.

ದೇಶದ 12 ನಗರಗಳಲ್ಲೂ ಮಹೇಂದ್ರನ ಜಪ..!

16ನೇ ಐಪಿಎಲ್​​​ ಸಂಪೂರ್ಣ ಧೋನಿಮಯವಾಗಿತ್ತು..ಕೊನೆ ಐಪಿಎಲ್​​ ಎಂದು ತಿಳಿದು ಜನಸಾಗರವೇ ಹರಿದು ಬಂತು. ಮಾಹಿ ಕಾಲಿಟ್ಟ ಎಲ್ಲ ನಗರಗಳಲ್ಲಿ ಯಲ್ಲೋ ಫ್ಲ್ಯಾಗ್​, ಜರ್ಸಿ ನಂ.7 ರಾರಾಜಿಸಿತು. ಅಬ್ಬಬ್ಬಾ, ಅದೇನ್​ ಕೂಗಾಟ, ಅದೇನ್ ಚೀರಾಟ, ಅದೇನ್​ ಧೋನಿ ಜಪ..ನಿಜಕ್ಕೂ ಅದ್ಭುತವೇ ಬಿಡಿ.

ತಮಿಳಿಗರ ಪಾಲಿಗೆ ತಲಾಆರಾಧ್ಯ ದೈವ

ಇನ್ನು ಮಾಹಿ ಫ್ಯಾಂಡಮ್​​​​​ ಬಗ್ಗೆ ಹೇಳಿ ? ಅವರಾಡುವ ಚೆನ್ನೈ ಸೂಪರ್ ಕಿಂಗ್ಸ್​​​​ ಫ್ಯಾನ್ಸ್​ ಬಗ್ಗೆ ಹೇಳಿದಿದ್ರೆ ಸ್ಟೋರಿ ಇನ್​​ಕಂಪ್ಲೀಟ್ ಆದೀತು. ರಾಂಚಿ ಧೋನಿಗೆ ಹುಟ್ಟರಾದ್ರೆ ತಮಿಳುನಾಡು 2ನೇ ತವರು..ಐಪಿಎಲ್​ ಶುರುವಾದ ಬಳಿಕ ಮಿಸ್ಟರ್ ಕೂಲ್​ ಕಂಪ್ಲೀಟ್​ ಚೆನ್ನೈನವರು ಆಗಿದ್ದಾರೆ. ಇನ್ನು ತಮಿಳಿಗರ ಪಾಲಿಗೆ ತಲಾ ಆರಾಧ್ಯ ದೈವ..ಮಾಹಿಯನ್ನ ತಮ್ಮ ಕುಟುಂದವರಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾರೆ.

ವಿದೇಶಿಗರಿಗೂ ಮಿಸ್ಟರ್ ಕೂಲ್ ಅಂದ್ರೆ ಬಲು ಇಷ್ಟ.

ಧೋನಿ ಪ್ರೀತಿ ಫ್ಯಾಂಡಮ್​​​ ಬರೀ ಭಾರತಕ್ಕಷ್ಟೇ ಅಲ್ಲ,ಸಾಗರದಾಚೆಗೂ ಹಬ್ಬಿದೆ. ಇವರ ಆಟವನ್ನ ನೋಡಲು ಸಾಗರೋಪಾದಿಯಲ್ಲಿ ಹರಿದು ಬರ್ತಿದ್ರು. ಸರಳ ವ್ಯಕ್ತಿತ್ವ, ನರಿ ಬುದ್ಧಿವಂತಿಕೆ, ಚಾಣಾಕ್ಷ ನಾಯಕತ್ವ, ಚುರುಕುತನದ ಕೀಪಿಂಗ್​​​​, ಕ್ಲೀನ್ ಇಮೇಜ್​ನಿಂದ ವಿದೇಶಿಗರ ಮನಸೂರೆಗೊಂಡಿದ್ದಾರೆ.

ರಿಯಲಿ ಎಂಎಸ್ ಧೋನಿ, ಪ್ರಿನ್ಸ್ ಆಫ್ ಲವ್​​​..ಜಗಮೆಚ್ಚಿದ ವಿಶ್ವಮಾನವ..ದಿಗ್ಗಜ ಸುನೀಲ್ ಗವಾಸ್ಕರ್​ ಹೇಳಿದ್ದಂತೆ ಶತಮಾನಕ್ಕೊಬ್ಬ ಇಂತವರು ಸಿಗಲು ಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ 12 ನಗರಗಳಲ್ಲೂ ಮಹೇಂದ್ರನ ಜಪ..ಮಾಹಿ ವಿಶ್ವಮಾನವ ಆಗಿದ್ದೇ ಬಲು ರೋಚಕ

https://newsfirstlive.com/wp-content/uploads/2023/06/Dhoni-12.jpg

Load More