newsfirstkannada.com

ಚಾರ್ಲಿ ಚಾಂಪ್ಲಿನ್​ ಮಗಳು ಜೋಸೆಫಿನ್​ ಚಾಂಪ್ಲಿನ್ ನಿಧನ

Share :

22-07-2023

    ಕಾಮಿಡಿ ದಂತಕಥೆ ಚಾರ್ಲಿ ಚಾಂಪ್ಲಿನ್ ಮಗಳು ನಿಧನ

    74ನೇ ವಯಸ್ಸಿಗೆ ಅಸುನೀಗಿದ ಜೋಸೆಫಿನ್​ ಚಾಂಪ್ಲಿನ್

    ಈಕೆ ಕೂಡ ತನ್ನ ತಂದೆಯೊಂದಿಗೆ ಸಿನಿಮಾದಲ್ಲಿ ನಟಿಸಿದ್ದಳು

ಕಾಮಿಡಿ ದಂತಕಥೆ ಚಾರ್ಲಿ ಚಾಂಪ್ಲಿನ್​ ಮಗಳು ಜೋಸೆಫಿನ್​ ಚಾಂಪ್ಲಿನ್​ ನಿಧನರಾಗಿದ್ದಾರೆ. 74ನೇ ವಯಸ್ಸಿನ ಅವರು ಇದೇ ಜುಲೈ ತಿಂಗಳ 13ರಂದು ಪ್ಯಾರಿಸ್​ನಲ್ಲಿ ಅಸುನೀಗಿದ್ದಾರೆ.

ಜೋಸೆಫಿನ್​ ಚಾಂಪ್ಲಿನ್​ ಮಾರ್ಚ್​ 28, 1949ರಂದು ಕ್ಯಾಲಿಫೋರ್ನಿಯಾದ ಸಾಂತ ಮೋನಿಕಾದಲ್ಲಿ ಜನಿಸಿದರು. ಚಾರ್ಲಿ ಚಾಂಪ್ಲಿನ್​​ ಅವರ 8 ಮಕ್ಕಳ ಪೈಕಿ 3ನೇಯವರಾಗಿ ಜೋಸೆಫಿನ್​ ಚಾಂಪ್ಲಿನ್​ ಜನಿಸಿದರು.

ಜೋಸೆಫಿನ್​ ಚಾಂಪ್ಲಿನ್​ 1952ರಲ್ಲಿ ಸಿನಿಮಾದಲ್ಲಿ ನಟಿಸಲು ಪ್ರಾರಂಭ​ ಮಾಡಿದ್ದರು. ಲೈಮ್​ಲೈಟ್​​ ಎಂಬ ಸಿನಿಮಾದ ಮೂಲಕ ತಮ್ಮ ತಂದೆಯೊಂದಿಗೆ ಮೊದಲ ಬಾರಿಗೆ ಸ್ಕ್ರೀನ್​ ಹಂಚಿಕೊಂಡರು.

ಜೋಸೆಫಿನ್​ ಚಾಂಪ್ಲಿನ್​ ಮೂರು ಮಕ್ಕಳನ್ನು ಹೊಂದಿದ್ದಾರೆ. ಚಾರ್ಲಿ, ಆರ್ಥುರ್​ ಮತ್ತು ಜ್ಯೂಲಿಯನ್​ ರೊನೆಟ್​ ಎಂಬ ಮಕ್ಕಳನ್ನು ಹೊಂದಿದ್ದಾರೆ. ಇದರ ಜೊತೆಗೆ ಮೈಕೆಲ್​, ಜೆರಾಲ್ಡೈನ್​, ವಿಕ್ಟೋರಿ, ಜಾನ್, ಅನ್ನೆಟೆ, ಯುಗೆನೆ, ಕ್ಟಿಸ್ಟೋಪರ್​ ಎಂಬ ಸಹೋದರ ಮತ್ತು ಸಹೋದರಿಯರನ್ನು ಬಿಟ್ಟು ಅಗಲಿದ್ದಾರೆ.

ಬೆರಳೆಣಿಕೆಯ ಸಿನಿಮಾದಲ್ಲಿ ಜೋಸೆಫಿನ್​ ಚಾಂಪ್ಲಿನ್ ನಟಿಸಿದ್ದಾರೆ. ದಿ ಕ್ಯಾಂಟರ್​ಬರಿ ಟೇಲ್ಸ್ ಸಿನಿಮಾ​, ‘ಎಲ್​’ಒಡೆರ್​​ ಡೆಸ್​​ ಫೌವ್ಸ್​, ಎಸ್ಕೇಪ್​​ ಟು ದಿ ಸನ್​​ ನಾಟಕದಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಾರ್ಲಿ ಚಾಂಪ್ಲಿನ್​ ಮಗಳು ಜೋಸೆಫಿನ್​ ಚಾಂಪ್ಲಿನ್ ನಿಧನ

https://newsfirstlive.com/wp-content/uploads/2023/07/Chalie-Champlin.jpg

Load More