newsfirstkannada.com

ಕಾಂಗ್ರೆಸ್​ ಸಿಎಂ ಕುರ್ಚಿ ಕದನಕ್ಕೆ ತುಪ್ಪ ಸುರಿದ ಪ್ರಧಾನಿ ಮೋದಿ.. ಸಿದ್ದರಾಮಯ್ಯ ಕೆಂಡಾಮಂಡಲ..!

Share :

07-11-2023

  ‘ಕರ್ನಾಟಕ ಲೂಟಿಗಾಗಿ ಸಿಎಂ-ಡಿಸಿಎಂ ನಡುವೆ ಪೈಪೋಟಿ’-PM

  ‘ಅಧಿಕಾರ ಹಿಡಿದಿರುವ ಕಾಂಗ್ರೆಸ್​ ಕರ್ನಾಟಕವನ್ನು ಹಾಳು ಮಾಡಿದೆ’

  ‘ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೆ ತಿಳಿಯದಂತಾಗಿದೆ’

ರಾಜ್ಯ ಕಾಂಗ್ರೆಸ್​ನಲ್ಲಿ ಸಿಂಹಾಸನ ಸರ್ಕಸ್​ ಮುಗಿಯದ ಕತೆಯಾಗಿದೆ. ಪಂಚರಾಜ್ಯ ಚುನಾವಣೆಯಲ್ಲು ರಾಜ್ಯದ ಸಿಂಹಾಸನ ಸರ್ಕಸ್​ ಸದ್ದು ಮಾಡ್ತಿದೆ. ಕುರ್ಚಿ ಕದನಕ್ಕೆ ಪ್ರಧಾನಿ ಮೋದಿಯ ರಂಗ ಪ್ರವೇಶವಾಗಿದೆ. ಕೈ ಪಾಳಯದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿರುವ ಕುರ್ಚಿ ಕದನಕ್ಕೆ ಮೋದಿ ತುಪ್ಪ ಸುರಿದಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಬಾಣ ಪ್ರಯೋಗಿಸಿ ಅಣಕಿಸಿದ್ದಾರೆ.

ರಾಜ್ಯದ ವಿಧಾನಸಭಾ ರಣಕಣದಲ್ಲಿ ಕದಕ ಕಲಿಗಳು ಸೆಣಸಾಟ ನಡೆಸಿ ಹಸ್ತ ಪಡೆಯ ಕೈ ಮೇಲಾಗಿ ಅಧಿಕಾರದ ಗದ್ದುಗೆ ಏರಿದೆ. ರಾಜ್ಯದಲ್ಲಿ ಇತಿಹಾಸ ನಿರ್ಮಿಸಿದ ಹಸ್ತಪಡೆ ಪಂಚರಾಜ್ಯಗಳಲ್ಲಿ ಮತಯುದ್ಧ ಗೆಲ್ಲಲು ಶಸ್ತ್ರಾಭ್ಯಾಸ ನಡೆಸಿದೆ. ಕೇಸರಿಪಡೆಯ ಅತಿರಥ ಮಹಾರಥರು ಅಖಾಡಕ್ಕಿಳಿದು ಮತ ಬೇಟೆಯಾಡ್ತಿದ್ದಾರೆ. ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಛತ್ತೀಸ್​ಗಢ, ಮಿಜೋರಾಂನಲ್ಲಿ ಹಸ್ತಪಡೆ ಹಾಗೂ ಕೇಸರಿಪಡೆಗಳಿಂದ ವಾಗ್ಬಾಣಗಳ ಪ್ರಯೋಗವಾಗ್ತಿದೆ. ಈ ವೇಳೆ ಮಧ್ಯಪ್ರದೇಶದ ಚುನಾವಣಾ ಅಬ್ಬರದಲ್ಲಿ ಪ್ರಧಾನಿ ಮೋದಿ ಹೂಡಿದ ಮಾತಿನ ಬಾಣವೊಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ಬುಡಕ್ಕೆ ಬಂದು ನಾಟಿದೆ.

ಪ್ರಧಾನಿ ಮೋದಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನೂ ಅಣಕಿಸಿದ ಮೋದಿ

ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಿಂಚಿನ ಸಂಚಾರ ನಡೆಸುತ್ತಿರೋ ಪ್ರಧಾನಿ, ಕಾಂಗ್ರೆಸ್​ ವಿರುದ್ಧ ಕೆಂಡ ಉಗುಳುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಕಾಂಗ್ರೆಸ್​ ಅನ್ನ ಲೂಟಿ ಪಕ್ಷ ಅಂತ ಬಿಂಬಿಸಲು ಪಣತೊಟ್ಟಿರೋ ನಮೋ, ಹಳೆಯ ವಿಚಾರಗಳನ್ನ ಕೆದಕಿ ಕಾಂಗ್ರೆಸ್​ಗೆ ಕೌಂಟರ್​ ಕೊಡ್ತಿದ್ದಾರೆ.. ನಿನ್ನೆ ಮಧ್ಯಪ್ರದೇಶದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ನಮೋ ಭಾಷಣದ ಭರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನೂ ಅಣಕಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಹಾಳಾಗಿದೆ. ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೆ ಎಂಬುದೇ ಸಿದ್ದರಾಮಯ್ಯ ಅವರಿಗೆ ತಿಳಿಯದಂತಾಗಿದೆ ಅಂತ ರಾಜ್ಯದ ಸಿಂಹಾಸನ ಸರ್ಕಸ್​ ಬಗ್ಗೆ ಲೇವಡಿ ಮಾಡಿದ್ದಾರೆ. ಮೋದಿ ನೀಡಿರೋ ಈ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚನ ಮೂಡಿಸಿದೆ.

ಕಾಂಗ್ರೆಸ್‌ ಪಕ್ಷ ಎಡವಟ್ಟಿನಿಂದ ಯಾವಾಗೆಲ್ಲ ಸರ್ಕಾರ ರಚನೆ ಮಾಡುತ್ತದೋ, ಹಾಗೆಲ್ಲ ಅಧಿಕಾರಕ್ಕೇರಿದ ರಾಜ್ಯವನ್ನು ಲೂಟಿಯೋ ಲೂಟಿ ಮಾಡಲು ಸ್ಪರ್ಧೆ ನಡೆಯುತ್ತೆ. ಲೂಟಿ ಮಾಡಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಪೈಪೋಟಿ ಏರ್ಪಡುತ್ತದೆ. ನಿಮಗೆ ಅಂತಹ ಉದಾಹರಣೆಯಾಗಿ ಕರ್ನಾಟಕ ಇದೆ. ಕಾಂಗ್ರೆಸ್​ ಬಂದರೆ ಬಡವರ, ಮಧ್ಯಮ ವರ್ಗದವರ ಜೇಬು ಖಾಲಿ ಆಗಲಿದೆ. ಕಾಂಗ್ರೆಸ್ ಬಂದರೆ ಅಭಿವೃದ್ಧಿಯ ಗಾಡಿಗೆ ಬ್ರೇಕ್ ಬೀಳಲಿದೆ. ರಿವರ್ಸ್​ ಗೇರ್ ಬೀಳುತ್ತದೆ.

ನರೇಂದ್ರ ಮೋದಿ. ಪ್ರಧಾನ ಮಂತ್ರಿ

ನರೇಂದ್ರ ಮೋದಿ ಆರೋಪದ ವಿರುದ್ಧ ಸಿಡಿದ ಸಿದ್ದರಾಮಯ್ಯ

ರಾಜ್ಯ ಕಾಂಗ್ರೆಸ್​ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅನ್ನೋ ಮೋದಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. ಮೋದಿ ಸುಳ್ಳು ಹೇಳಬಾರದು, ದಾಖಲಾತಿಗಳನ್ನ ಇಟ್ಟು ಮಾತನಾಡಲಿ. ಪ್ರಧಾನ ಮಂತ್ರಿಗಳಿಗೆ ಈ ರೀತಿಯ ಹೇಳಿಕೆ ಶೋಭೆ ತರೋದಿಲ್ಲ ಅಂತ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್

ಮೋದಿ ಹೇಳಿಕೆ ಬಗ್ಗೆ ಡಿಸಿಎಂ ಡಿಕೆಶಿ ನೋ ರಿಯಾಕ್ಟ್​​

ಮೋದಿ ಆರೋಪಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,​ ಮೋದಿ ಏನು ಹೇಳಿದ್ದಾರೋ ಗೊತ್ತಿಲ್ಲ. ನನಗೆ ಅದರ ಬಗ್ಗೆ ಆಮೇಲೆ ಮಾತಾಡ್ತೀನಿ ಅಂತ ನುಣುಚಿಕೊಂಡಿದ್ದಾರೆ. ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿರೋ ಸಿಎಂ ಕುರ್ಚಿ ಕದನಕ್ಕೆ ಪ್ರಧಾನಿ ಮೋದಿ ತುಪ್ಪ ಸುರಿದಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​ ಶಾಸಕರಿಗೆ ಇಲ್ಲಸಲ್ಲದ ಹೇಳಿಗೆ ನೀಡದಿರಲು ಎಚ್ಚರಿಕೆ ನೀಡಿರೋ ಬೆನ್ನಲ್ಲೇ, ಮೋದಿ ಇಂತಹ ಆರೋಪ ಮಾಡಿರೋದು ಕೈ ನಾಯಕರಿಗೆ ಬಿಸಿತುಪ್ಪವನ್ನ ಬಾಯಿಗೆ ಹಾಕಿಕೊಂಡಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಸಿಎಂ ಕುರ್ಚಿ ಕದನಕ್ಕೆ ತುಪ್ಪ ಸುರಿದ ಪ್ರಧಾನಿ ಮೋದಿ.. ಸಿದ್ದರಾಮಯ್ಯ ಕೆಂಡಾಮಂಡಲ..!

https://newsfirstlive.com/wp-content/uploads/2023/11/MODI_SIDDU.jpg

Load More