2.25 ಕೋಟಿ ಬೇರೆಯವರಿಗೆ ವರ್ಗಾಯಿಸಿದ ಆರೋಪ
ಧಾರವಾಡ ಜಿಲ್ಲೆ ವಿದ್ಯಾಗಿರಿ ಠಾಣೆಯಲ್ಲಿ FIR ದಾಖಲು
ಕೈಗಾರಿಕೆಗಾಗಿ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ ಲೂಟಿ..?
ಧಾರವಾಡ: ರೈತರ ಜಮೀನಿನ ಪರಿಹಾರದ ಹಣವನ್ನು ಲೂಟಿ ಮಾಡಲು ಯತ್ನಿಸಿದ ಆರೋಪದ ಮೇಲೆ 9 ಅಧಿಕಾರಿಗಳು ಸೇರಿ 13 ಜನರ ವಿರುದ್ಧ ವಿದ್ಯಾಗಿರಿ ಠಾಣೆಯಲ್ಲಿ FIR ದಾಖಲಾಗಿದೆ. ಅಧಿಕಾರಿಗಳ ವಿರುದ್ಧ ಇಟಿಗಟ್ಟಿ ಕರೆಪ್ಪ ಪೂಜಾರ್ ನೀಡಿದ್ದ ದೂರಿನ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಏನಿದು ‘ಕೋಟಿ ಲೂಟಿ’ ಆರೋಪ..?
ಇಟಿಗಟ್ಟಿ ಗ್ರಾಮದ ರಿ. ಸ. ನಂ. 10 ರಲ್ಲಿ ಕರೆಪ್ಪ ಪೂಜಾರ್ ಹೆಸರಲ್ಲಿದೆ 4.39 ಎಕರೆ ಜಾಮೀನು ಇತ್ತು. ಈ ಪಿತ್ರಾರ್ಜಿತ ಆಸ್ತಿ 1981ರ ಅಗಸ್ಟ್ 13 ರಿಂದ ಕರೆಪ್ಪ ಪೂಜಾರ್ ಹೆಸರಿನಲ್ಲಿ ಇದೆ. 2021ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ KIADBಯಿಂದ ಕರೆಪ್ಪನ ಜಮೀನು ವಶಕ್ಕೆ ಪಡೆಯಾಗಿತ್ತು. ವಶಕ್ಕೆ ಪಡೆದ ಈ ಜಮೀನು ಪರಿಹಾರದ ಹಣವು ಬೇರೆಯವರ ಖಾತೆಗೆ ಜಮಾ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಜಮೀನು ವಶಕ್ಕೆ ಪಡೆದ ಮೇಲೆ ಪರಿಹಾರದ ಹಣ 2.25 ಕೋಟಿ ಬೇರೆಯವರಿಗೆ ವರ್ಗಾಯಿಸಲಾಗಿದೆ. ತುಕಾರಾಮ್ ಪೂಜಾರ್ ಎಂಬುವವರ ಅಕೌಂಟ್ಗೆ ಹಣವನ್ನು ಅಧಿಕಾರಿಗಳು ಜಮೆ ಮಾಡಿದ್ದಾರೆ. ಇದರಲ್ಲಿ ತಹಶೀಲ್ದಾರ್, KIADB ಅಧಿಕಾರಿಗಳು ಶಾಮೀಲಾಗಿದ್ದಾರೆಂದು ದೂರು ಕರೆಪ್ಪ ದೂರು ನೀಡಿದ್ದಾರೆ.
ಯಾರೆಲ್ಲ ವಿರುದ್ಧ ದೂರು..?
ಕೆಎಲ್ಆರ್ ಡಿವಿಜನ್ನ ಉಪ ತಹಶೀಲ್ದಾರ್ ವೀನಕುಮಾರ್ ತಳವಾರ, ಪ್ರವೀಣ್ ಪೂಜಾರ್, KIADB ಅಧಿಕಾರಿಗಳಾದ ವಸಂತಕುಮಾರ್ ಸಜ್ಜನ್, ಶಂಕರ್ ತಳವಾರ, ಮಹದೇವಪ್ಪ ಶಿಂಪಿ, ಹೇಮಚಂದ್ರ ಚಿಂತಾಮಣಿ, ಮೆಹಬೂಬ ದುಂಡಶಿ, ಕೇಸ್ ವರ್ಕರ್ ಮುದ್ದಿ, ರವಿ ಕುರುಬೆಟ್ಟ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಶಾಮೀಲಾದ ಸಂಬಂಧಿಗಳಾದ ತುಕಾರಾಮ್ ಪೂಜಾರ್, ಕರಿಯಪ್ಪ ಪೂಜಾರ್, ರಾಮಪ್ಪ ಪೂಜಾರ್, ಫಕ್ಕಿರಪ್ಪ ಪೂಜಾರ್ ವಿರುದ್ಧವೂ ದೂರು ನೀಡಿದ್ದಾರೆ. ಅಂತೆಯೇ 9 ಅಧಿಕಾರಿಗಳು ಸೇರಿದಂತೆ 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕರೆಪ್ಪ ಪೂಜಾರ್ ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದವರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ