newsfirstkannada.com

ಚಿರತೆ ಬಂತು ಚಿರತೆ.. ಅಪಾರ್ಟ್​ಮೆಂಟ್ ಒಳ​ಗೆ ನುಗ್ಗಿದ್ದಕ್ಕೆ ಬೆಚ್ಚಿ ಬಿದ್ದ ನಿವಾಸಿಗಳು; ಬೆಂಗಳೂರಿಗರಿಗೆ ಭಯವೋ ಭಯ!

Share :

30-10-2023

    ಸಿಸಿಟಿವಿ ಕ್ಯಾಮೆರಾಗಳಲ್ಲಿ ರಾಜಾರೋಷವಾಗಿ ಚಿರತೆ ಓಡಾಡಿದ ದೃಶ್ಯ

    ಬೊಮ್ಮನಹಳ್ಳಿಯ ಸಿಂಗಸಂದ್ರ, ಹೊಸಪಾಳ್ಯ ಭಾಗದಲ್ಲಿ ಚಿರತೆ ಓಡಾಟ!

    ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್​ಮೆಂಟ್​ನಲ್ಲಿ ಚಿರತೆ ಎಂಟ್ರಿ​

ಬೆಂಗಳೂರು: ಕಳೆದ ಎರಡು ದಿನದಿಂದ ಸಿಲಿಕಾನ್ ಸಿಟಿಯಲ್ಲಿ ಚಿರತೆ ಭಯ ಶುರುವಾಗಿದೆ. ನಗರದ ಅಪಾರ್ಟ್​ಮೆಂಟ್​ವೊಂದರಲ್ಲಿ ಚಿರತೆ ರಾಜಾರೋಷವಾಗಿ ಓಡಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಯಾನಕ ದೃಶ್ಯ ವೈರಲ್​ ಆಗುತ್ತಿದೆ. ಈ ಚಿರತೆ ಕಾಣಿಸಿಕೊಂಡಿದ್ದು ಆನೇಕಲ್ ತಾಲೂಕಿನ ಕೂಡ್ಲುಗೇಟ್​​ನಲ್ಲಿ ತಡರಾತ್ರಿ ನಡೆದಿದೆ. ಚಿರತೆ ದೃಶ್ಯಗಳನ್ನು ನೋಡಿದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ಚಿರತೆಯೊಂದು ಕೂಡ್ಲುಗೇಟ್ ಬಳಿಯ ಸಲಾರ್ ಪುರಿಯ ಸತ್ವ ಕ್ಯಾಡೆನ್ಜಾ ಅಪಾರ್ಟ್​ಮೆಂಟ್ ಒಳಗೆ ನುಗ್ಗಿದೆ. ಅಪಾರ್ಟ್​ಮೆಂಟ್​ನ ಪಾರ್ಕಿಂಗ್ ಲಾಟ್​ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಓಡಾಡುತ್ತಿರೋ ದೃಶ್ಯ ಸೆರೆಯಾಗಿದೆ. ಚಿರತೆ ಮೊದಲು ಅಪಾರ್ಟ್​ಮೆಂಟ್ ಒಳಕ್ಕೆ ಪ್ರವೇಶಿಸುತ್ತದೆ. ಆನಂತರ ಮೆಟ್ಟಿಲುಗಳನ್ನೇರಿ ಮೊದಲ ಮಹಡಿಗೆ ಹೋಗಿದೆ. ಅಲ್ಲಿ, ಲಿಫ್ಟ್ ಚೇಂಬರಿನ ಬಳಿ ಮೂರ್ನಾಲ್ಕು ಸುತ್ತು ಹಾಕಿ ಮತ್ತೆ ಕೆಳಕ್ಕೆ ಇಳಿದು ಬಂದು ಅಲ್ಲಿಂದ ಓಡಿ ಹೋಗಿದೆ.  ಬೊಮ್ಮನಹಳ್ಳಿ ಸಿಂಗಸಂದ್ರ, ಹೊಸಪಾಳ್ಯ, ಕೂಡ್ಲು ಸೇರಿದಂತೆ ಹಲವು ಭಾಗದಲ್ಲಿ ಚಿರತೆ ಓಡಾಟ ನಡೆಸಿದೆ ಎಂದು ಶಂಕಿಸಲಾಗಿದೆ.

ಕೂಡಲೇ ಇದನ್ನು ಕಂಡ ಅಲ್ಲಿನ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಚಿರತೆ ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ. ದಿಢೀರ್​​ ಚಿರತೆಯನ್ನು ಕಂಡು ಅಲ್ಲಿನ ನಿವಾಸಿಗಳು ಮನೆಯಿಂದ ಹೊರ ಬರಲು ಹೆದರುವಂತಹ ಸ್ಥಿತಿ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿರತೆ ಬಂತು ಚಿರತೆ.. ಅಪಾರ್ಟ್​ಮೆಂಟ್ ಒಳ​ಗೆ ನುಗ್ಗಿದ್ದಕ್ಕೆ ಬೆಚ್ಚಿ ಬಿದ್ದ ನಿವಾಸಿಗಳು; ಬೆಂಗಳೂರಿಗರಿಗೆ ಭಯವೋ ಭಯ!

https://newsfirstlive.com/wp-content/uploads/2023/10/bng-tiger.jpg

Load More