newsfirstkannada.com

ದಕ್ಷಿಣ ಆಫ್ರಿಕಾದ ಮತ್ತೊಂದು ಚಿರತೆ ಸಾವು.. ಒಟ್ಟು 9 ಚೀತಾಗಳ ದುರಂತ ಅಂತ್ಯ.. ಇದಕ್ಕೆಲ್ಲ ಹೊಣೆ ಯಾರು..?

Share :

02-08-2023

    ಕುನೋ ನ್ಯಾಷನಲ್ ಪಾರ್ಕ್​ನಲ್ಲಿ ಮತ್ತೊಂದು ಚಿರತೆ ಸಾವು

    ಇವತ್ತು ‘ಧಾತ್ರಿ’ ಎಂಬ ಹೆಣ್ಣು ಚಿರತೆಯ ಮೃತದೇಹ ಪತ್ತೆ

    140 ಕೋಟಿ ಮೌಲ್ಯದ ಪ್ರಾಜೆಕ್ಟ್ ಅಡಿ ಭಾರತಕ್ಕೆ ಬಂದಿದ್ದವು

ದಕ್ಷಿಣ ಆಫ್ರಿಕಾದಿಂದ ತಂದುಬಿಟ್ಟಿದ ಮತ್ತೊಂದು ಹೆಣ್ಣು ಚಿರತೆ ಸಾವನ್ನಪ್ಪಿದೆ. ಧಾತ್ರಿ ಎಂಬ ಚಿರತೆ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್​​ನಲ್ಲಿ ಸಾವನ್ನಪ್ಪಿದ್ದು, ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಕಾರಣ ತಿಳಿದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಿಂದ ‘ಚೀತಾ ಪ್ರಾಜೆಕ್ಟ್’ ಅಡಿಯಲ್ಲಿ 20 ಚಿರತೆಗಳನ್ನು ತಂದಿತ್ತು. ಸುಮಾರು 96 ಕೋಟಿಯಷ್ಟು ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಹೆಚ್ಚುವರಿಯಾಗಿ ಇಂಡಿಯನ್ ಆಯಿಲ್ 50 ಕೋಟಿಯನ್ನು ಈ ಪ್ರಾಜೆಕ್ಟ್​ಗೆ ನೀಡಿದೆ.

ನಮಿಬಿಯಾದಿಂದ ಭಾರತಕ್ಕೆ ತಂದಿದ್ದ 20 ಚಿರತೆಗಳ ಪೈಕಿಯಲ್ಲಿ 6 ಸಾವನ್ನಪ್ಪಿವೆ. ಇಲ್ಲಿಯೇ ಹುಟ್ಟಿದ್ದ ಮೂರು ಮರಿಗಳೂ ಕೂಡ ಸಾವನ್ನಪ್ಪಿವೆ. ಈ ಮೂಲಕ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಿಂದ ಬಂದಿದ್ದ ಒಟ್ಟು 9 ಚಿರತೆಗಳು ದುರಂತ ಸಾವು ಕಂಡಿವೆ.

ಈ ಚಿರತೆಗಳ ಸಾವಿಗೆ ಹಲವರು ವಿಭಿನ್ನ ಕಾರಣಗಳನ್ನು ನೀಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಕಾಡಿನ ವಾತಾವರಣಕ್ಕೂ, ಇಲ್ಲಿನ ಹವಾಮಾನಕ್ಕೂ ವ್ಯತ್ಯಾಸ ಇದೆ. ಅವುಗಳಿಗೆ ಇಲ್ಲಿನ ಪರಿಸರ ಹೊಂದಾಣಿಕೆ ಆಗುತ್ತಿಲ್ಲ. ಪ್ರಭೇದಗಳ ನಡುವೆಯೂ ಹೊಂದಾಣಿಕೆ ಆಗುತ್ತಿಲ್ಲ. ಪರಸ್ಪರ ಕಾದಾಡಿಕೊಂಡು ಗಾಯಗೊಂಡು ಸಾವನ್ನಪ್ಪುತ್ತಿವೆ. ಬೇಟೆ ಆಡುವಾಗಲೂ ಕೂಡ ಗಂಭೀರ ಸ್ವರೂಪದ ಗಾಯಮಾಡಿಕೊಳ್ಳುತ್ತಿವೆ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಚಿರತೆಗಳಿ ರೇಡಿಯೋ ಕಾಲರ್ಸ್​ ಅಳವಡಿಸಿರೋದು ಕೂಡ ಅವುಗಳ ಆರೋಗ್ಯ ಕೆಡಲು ಕಾರಣ ಎಂದು ಕೆಲ ತಜ್ಞರು ವಾದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಕ್ಷಿಣ ಆಫ್ರಿಕಾದ ಮತ್ತೊಂದು ಚಿರತೆ ಸಾವು.. ಒಟ್ಟು 9 ಚೀತಾಗಳ ದುರಂತ ಅಂತ್ಯ.. ಇದಕ್ಕೆಲ್ಲ ಹೊಣೆ ಯಾರು..?

https://newsfirstlive.com/wp-content/uploads/2023/08/CHEETA.jpg

Load More