newsfirstkannada.com

8 ಲಕ್ಷ ಲಂಚಕ್ಕೆ ಬೇಡಿಕೆ: ಕೃಷಿ ಅಧಿಕಾರಿಗಳಿಂದ ಮಿನಿಸ್ಟರ್​​​ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು

Share :

08-08-2023

    ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ

    ಕೃಷಿ ಅಧಿಕಾರಿಗಳ ಜೊತೆ ಚಲುವರಾಯಸ್ವಾಮಿ ಚರ್ಚೆ

    ಕರೆ ಮಾಡಿ ಕೃಷಿ ಸಚಿವರ ಬಳಿ ಮಾಹಿತಿ ಪಡೆದ ಸಿಎಂ

ಬೆಂಗಳೂರು: ಕೃಷಿ ಸಚಿವ ಚೆಲುವರಾಯಸ್ವಾಮಿ ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಇದೀಗ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಚಿವರ ವಿರುದ್ಧ ರಾಜ್ಯಭವನದ ಕದ ತಟ್ಟಿದ್ದಾರೆ. ಚೆಲುವರಾಯಸ್ವಾಮಿವರು, ಲಂಚಕ್ಕೆ ಬೇಡಿಕೆ ಇಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ, ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ತೀವಿ ಅಂತಾ ಅವಲತ್ತುಕೊಂಡಿದ್ದಾರೆ. ದಳಪತಿಗಳ ಕೋಟೆಯನ್ನು ಬೇದಿಸಿ, ಕಾಂಗ್ರೆಸ್​ನಿಂದ ಗೆದ್ದು ಸಚಿವರಾಗಿರುವ ಚೆಲುವರಾಯಸ್ವಾಮಿ ವಿರುದ್ಧ ಮತ್ತೊಂದು ಲಂಚದ ಆರೋಪ ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ, ಮಾಜಿ ಸಿಎಂ ಕುಮಾರಸ್ವಾಮಿ, ಕೃಷಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೀತಿದೆ ಎಂದು ರೇಟ್​ ಕಾರ್ಡ್​ ಸಮೇತ ಆರೋಪ ಮಾಡಿದ್ದರು. ಇದೀಗ ಮಂಡ್ಯ ಜಿಲ್ಲೆಯ 7 ಜನ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಸಂಚಲವನ್ನೇ ಸಷ್ಟಿಸಿದೆ.

₹8 ಲಕ್ಷ ನೀಡುವಂತೆ ಚಲುವರಾಯಸ್ವಾಮಿ ಒತ್ತಡ ಆರೋಪ
ಕುಟುಂಬ ಸಮೇತ ವಿಷ ಕುಡಿಯೋದಾಗಿ ದೂರಿನಲ್ಲಿ ಉಲ್ಲೇಖ

ಕೃಷಿ ಸಚಿವರು 6 ರಿಂದ 8 ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ಅಧಿಕಾರಿಗಳು ಆರೋಪಿಸಿ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಲಂಚದ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷಕುಡಿಯುವುದಾಗಿ ದೂರಿನ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು, ವರದಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಇನ್ನು ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ಹೋಗಿರುವ ಬೆನ್ನಲ್ಲೇ ಸಚಿವ ಚೆಲುವರಾಯಸ್ವಾಮಿ, ಜಿಲ್ಲಾಮಟ್ಟದ ಸಭೆಯ ನಡುವೆ, ವೇದಿಕೆಯ ಹಿಂಭಾಗಕ್ಕೆ ಹೋಗಿ ಮಂಡ್ಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಜೊತೆ ಗೌಪ್ಯ ಮಾತುಕತೆ ನಡೆಸಿದ್ದಾರೆ. ಇದನ್ನು ವಿಡಿಯೋ ಮಾಡದಂತೆ ಸಚಿವರ ಬೆಂಬಲಿಗರು ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ, ಮಾತುಕತೆ ನಿಲ್ಲಿಸಿ ಸಭೆಗೆ ಮತ್ತೆ ವಾಪಸ್​ ಆಗಿದ್ದಾರೆ.

ಸಚಿವರ ವಿರುದ್ಧ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ಬೆನ್ನಲ್ಲೇ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಖುದ್ದು ಸಿಎಂ ಸಿದ್ದರಾಮಯ್ಯನವರೇ, ಕೃಷಿ ಸಚಿವ ಎನ್​.ಚಲುವರಾಯಸ್ವಾಮಿಗೆ ದೂರವಾಣಿ ಕರೆ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಇದು ಫೇಕ್ ಲೆಟರ್ ಅಂತ ನಾನು ಹೇಳೋದಿಲ್ಲ. ಈ ಹಿಂದೆ ಕಂಡಕ್ಟರ್ ವಿಚಾರದಲ್ಲೂ ನನ್ನ ಮೇಲೆ ಆರೋಪ ಮಾಡಿದರು. ಈಗಲೂ ಅವರೇ ಇದನ್ನ ಮಾಡಿರಬೇಕು. ತನಿಖೆಯಿಂದ ಎಲ್ಲವೂ ಗೊತ್ತಾಗಲಿದೆ ಎಂದು ಪರೋಕ್ಷವಾಗಿ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಸಚಿವರ ವಿರುದ್ಧ ಲಂಚದ ಆರೋಪಕ್ಕೆ ಹೊಸ ಟ್ವಿಸ್ಟ್​

ಕೃಷಿ ಸಚಿವರ ವಿರುದ್ಧ ಕೇಳಿ ಬಂದಿರುವ ಲಂಚದ ಆರೋಪಕ್ಕೆ ಇದೀಗ ಹೊಸ ಟ್ವಿಸ್ಟ್​ ಸಿಕ್ಕಿದೆ. ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳು ಪತ್ರ ಬರೆದಿರುವ ವಿಚಾರವನ್ನು ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ತಳ್ಳಿಹಾಕಿದ್ದಾರೆ. ಇನ್ನು ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಹರ್ಷ ಕೂಡ ನಮಗೆ ಯಾರೂ ಲಂಚದ ಬೇಡಿಕೆ ಇಟ್ಟಿಲ್ಲ, ಒತ್ತಡ ಕೂಡ ಇಲ್ಲ. ನಾನು ಯಾವುದೇ ಪತ್ರ ಬರೆದಿಲ್ಲ ಎಂದಿದ್ದಾರೆ. ಒಟ್ಟಾರೆ. ಕೃಷಿ ಸಚಿವರು ಲಂಚ ಕೇಳ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ನಾವ್ಯಾರು ಪತ್ರ ಬರೆದಿಲ್ಲ ಅಂತಿದ್ದಾರೆ. ಈಗಾಗಲೇ ರಾಜ್ಯಪಾಲರು ವರದಿ, ಕೇಳಿದ್ದು ಸರ್ಕಾರ ಏನು ಮಾಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ಲಕ್ಷ ಲಂಚಕ್ಕೆ ಬೇಡಿಕೆ: ಕೃಷಿ ಅಧಿಕಾರಿಗಳಿಂದ ಮಿನಿಸ್ಟರ್​​​ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು

https://newsfirstlive.com/wp-content/uploads/2023/08/CHELUVARAYASWAMY-2.jpg

Load More