/newsfirstlive-kannada/media/post_attachments/wp-content/uploads/2024/08/Wayanad-24.jpg)
ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ವಯನಾಡು ಭೂಕುಸಿತದಿಂದಾಗಿ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಸಾಕಷ್ಟು ಸಾವು-ನೋವು ಸಂಭವಿಸಿದೆ. ಈ ದುರ್ಘಟನೆಗೆ ಕಂಡು ಸಂಕಷ್ಟದಲ್ಲಿರುವ ಜನರಿಗೆ ಅನೇಕ ಸಿನಿ ತಾರೆಯರು, ರಾಜಕಾರಣಿಗಳು, ಸರ್ಕಾರ ನೆರವಿನ ಹಸ್ತ ನೀಡುತ್ತಿದ್ದಾರೆ. ಅಷ್ಟೇ ಏಕೆ, ಪೊಲೀಸರು, ಪುಟಾಣಿ ಮಕ್ಕಳು ಕೂಡ ಮುಂದೆ ಬಂದು ತಮ್ಮ ಆಟಿಕೆಗಾಗಿ ಕೂಡಿಟ್ಟ ಹಣವನ್ನು ವಯನಾಡಿನ ಸಂಕಷ್ಟಕ್ಕೆ ನೀಡುತ್ತಿದ್ದಾರೆ. ಅದರಂತೆಯೇ ಆಟೋ ಚಲಾಯಿಸಿ ದಿನಗೂಲಿ ದುಡಿಯುವ ಮಹಿಳೆಯೊಬ್ಬಳು ಕೂಡ ಉಚಿತ ಪ್ರಯಾಣವನ್ನು ನೀಡುವ ಮೂಲಕ ಮಾನವೀಯತೆ ಮೆರೆಯಲು ಮುಂದಾಗಿದ್ದಾರೆ.
ಚೆನ್ನೈ ಮೂಲದ ಆಟೋ ಚಲಾಯಿಸುವ ಮಹಿಳೆ ರಾಜಿ ವಯನಾಡು ಸಂಕಷ್ಟಕ್ಕೆ ಮಣಿದಿದ್ದಾರೆ. ಆಟೋ ಚಲಾಯಿಸುತ್ತಾ ದಿನದೂಡುವ ಈಕೆ ವಯನಾಡಿನಲ್ಲಿ ಕಷ್ಟ ಪಡುತ್ತಿರುವ ಜನರಿಗೆ ನೆರವಾಗಲು ಮುಂದಾಗಿದ್ದಾರೆ. ಪ್ರಯಾಣಿಕರಿಗೆ ಆಟೋದಲ್ಲಿ ಉಚಿತ ಪ್ರಯಾಣವನ್ನು ಒದಗಿಸುವ ಮೂಲಕ ವಯನಾಡಿನಲ್ಲಿ ಸಂಕಷ್ಟದಲ್ಲಿರುವ ಜೀವಗಳಿಗೆ ನೆರವಾಗಲು ಮುಂದಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/wayanad-7.jpg)
ಇದನ್ನೂ ಓದಿ: ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಯೊಳಕ್ಕೆ ಕೊಂಡೊಯ್ದ ಚಾಲಕ! ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ..
ರಾಜಿ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ಆದರೆ ಪ್ರಯಾಣದ ಹಣವನ್ನು ರಾಜಿಗೆ ನೀಡುವ ಬದಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ರಾಜಿ ವಯನಾಡು ಸಂಕಷ್ಟದ ಕುರಿತು ಮಾತನಾಡಿದ್ದು, ‘ಈ ನೋವು ನನಗೆ ಚೆನ್ನಾಗಿ ತಿಳಿದಿದೆ. ಹಸಿವಾದಾಗ ಎಷ್ಟು ಕಷ್ಟವಾಗುತ್ತದೆ ಎಂದು ನನಗೆ ಗೊತ್ತು. ಕೆಲವು ವರ್ಷಗಳ ಹಿಂದೆ ನಾನು ಪತಿ ಪ್ರೀತಿ ಮಾಡಿದ್ದಕ್ಕೆ ನನ್ನನ್ನು ಮನೆಯಿಂದ ಹೊರ ಹಾಕಿದರು. ಬಳಿಕ ನಾನು ಮತ್ತು ಪತಿ ಕಷ್ಟಗಳನ್ನು ಅನುಭವಿಸುತ್ತಾ ಜೀವನ ಮಾಡಿದೆವು. ಆವಾಗ ನನ್ನ ಮಕ್ಕಳಿಗೆ ಏನು ಕೊಡಿಸಲಾಗದ ಸ್ಥಿತಿ ಇತ್ತು. ಇಂದು ನಾವು ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/WAYANADU-LANDLSIDE-RAIN.jpg)
‘ವಯನಾಡಿನಲ್ಲಿರುವ ಎಲ್ಲಾ ಸಂತ್ರಸ್ತರಿಗೆ ನೆರವಾಗಬೇಕು ಎಂಬ ಯೋಚನೆಯಿದೆ. ಆದರೆ ನನ್ನ ಬಳಿ ಅಷ್ಟೊಂದು ಹಣವಿಲ್ಲ. ನನ್ನ ಸ್ವಂತ ಆದಾಯದಲ್ಲಿ ಸಹಾಯ ಮಾಡಲು ನಿರ್ಧಿರಿಸಿದ್ದೇನೆ. ನನ್ನ ಆಟೋದಲ್ಲಿ ಉಚಿತ ಪ್ರಯಾಣವನ್ನು ನೀಡುವ ಮೂಲಕ ಪ್ರಯಾಣದ ಹಣವನ್ನು ಮುಖ್ಯಮಂತ್ರಿ ನಿಧಿಗೆ ತಲುಪಿಸುತ್ತಿದ್ದೇನೆ’ ಎಂದು ರಾಜಿ ಹೇಳಿದ್ದಾರೆ.
ಇದನ್ನೂ ಓದಿ: ಒಂದೇ ಕುಟುಂಬದ 16 ಮಂದಿ ಸಾವು.. ತನ್ನವರೆಲ್ಲರನ್ನು ಕಳೆದುಕೊಂಡು ಒಬ್ಬಂಟಿಯಾದ ಮನ್ಸೂರ್
ಇದಲ್ಲದೆ ರಾಜಿ ತಮಿಳು ಮತ್ತು ಇಂಗ್ಲಿಷ್​ನಲ್ಲಿ ಆಟೋದ ಮೇಲೆ ಬ್ಯಾನರ್​ ಹಾಕಲು ಮುಂದಾಗಿದ್ದಾರೆ. ಸ್ಕ್ಯಾನರ್​​ ಮತ್ತು ಕ್ಯೂಆರ್ಕೋಡ್​ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಬಹುದಾಗಿದೆ. ಇದು ನೇರವಾದ ಪ್ರಕ್ರಿಯೆಯಾಗಿದೆ. ದಿನಕ್ಕೆ 1500ರಿಂದ 2 ಸಾವಿರ ರೂಪಾಯಿ ವರೆಗೆ ದುಡಿಯುತ್ತೇನೆ. ಆ ದಿನದ ಹಣವನ್ನು ಪರಿಹಾರ ನಿಧಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us