Advertisment

VIDEO: ಫೆಂಗಲ್ ಸೈಕ್ಲೋನ್‌ಗೆ ತತ್ತರಿಸಿದ ಚೆನ್ನೈ; ಇಂದು ಬೆಂಗಳೂರಲ್ಲೂ ಮಳೆಯ ಅಲರ್ಟ್‌!

author-image
admin
Updated On
VIDEO: ಫೆಂಗಲ್ ಸೈಕ್ಲೋನ್‌ಗೆ ತತ್ತರಿಸಿದ ಚೆನ್ನೈ; ಇಂದು ಬೆಂಗಳೂರಲ್ಲೂ ಮಳೆಯ ಅಲರ್ಟ್‌!
Advertisment
  • ಚೆನ್ನೈ ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಧಾರಾಕಾರ ಮಳೆ
  • ಸಂಜೆ 7 ಗಂಟೆವರೆಗೆ ಚೆನ್ನೈ ವಿಮಾನ ನಿಲ್ದಾಣದ ಸೇವೆಯನ್ನು ಬಂದ್
  • ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ ಜೋರಾಗಿದೆ. ತೀವ್ರ ಸ್ವರೂಪ ತಾಳಿರುವ ಸೈಕ್ಲೋನ್ ಇಂದು ತಮಿಳುನಾಡಿನ ಪುದುಚೇರಿ ಬಳಿ ಭೂಸ್ಪರ್ಶ ಮಾಡಲಿದೆ. ತಮಿಳುನಾಡಿನ ಕರಾವಳಿ ತೀರದ ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗಿದೆ.

Advertisment

ಇದನ್ನೂ ಓದಿ: Fengal Cyclone;​ ಸಾವಿರಾರು ಜನ ಸ್ಥಳಾಂತರ, ಶಾಲೆಗಳಿಗೆ ರಜೆ.. ಬೆಂಗಳೂರು ಸೇರಿ ಹಲವೆಡೆ ಮಳೆ ಎಚ್ಚರಿಕೆ 

ಫೆಂಗಲ್‌ ಸೈಕ್ಲೋನ್ ಹಿನ್ನೆಲೆಯಲ್ಲಿ ಚೆನ್ನೈ ಹಾಗೂ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಾ ಇದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ತಮಿಳುನಾಡಿನ ಅನೇಕ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಖಾಸಗಿ ಕಂಪನಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲು ಮನವಿ ಮಾಡಲಾಗಿದೆ.

publive-image

ಚೆನ್ನೈ ಏರ್‌ಪೋರ್ಟ್ ಬಂದ್‌!
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರಿಚಿ, ಕಡಲೂರು ಮತ್ತು ಪುದುಚೇರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಲೋಕಲ್ ರೈಲು ಸಂಚಾರಕ್ಕೂ ಅಡ್ಡಿಯಾಗಿದ್ದು, ಸೈಕ್ಲೋನ್ ಎಫೆಕ್ಟ್‌ಗೆ ವಿಮಾನಗಳ ಹಾರಾಟಕ್ಕೂ ಅಡಚಣೆಯಾಗಿದೆ. ಫೆಂಗಲ್‌ ಚಂಡಮಾರುತಕ್ಕೆ 90 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಇಂದು ಸಂಜೆ 7 ಗಂಟೆವರೆಗೆ ಚೆನ್ನೈ ವಿಮಾನ ನಿಲ್ದಾಣದ ಸೇವೆಯನ್ನು ಬಂದ್ ಮಾಡಲಾಗಿದೆ.

Advertisment

ಸಂಜೆ ವೇಳೆಗೆ ಬೆಂಗಳೂರಲ್ಲೂ ಮಳೆ!
ಚಂಡಮಾರುತದ ಪ್ರಭಾವಕ್ಕೆ ಮುಂದಿನ ನಾಲ್ಕೈದು ದಿನ ತಮಿಳುನಾಡು, ಆಂಧ್ರ, ಒಡಿಶಾ, ಕರ್ನಾಟಕದ ವಿವಿಧೆಡೆ ಮಳೆ ಆಗಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎನ್ನಲಾಗಿದೆ.

ಫೆಂಗಲ್ ಸೈಕ್ಲೋನ್ ಪರಿಣಾಮವಾಗಿ ಬೆಂಗಳೂರಿನಲ್ಲೂ ಇಂದು ಮೋಡ ಕವಿದ ವಾತಾವರಣ ಇದೆ. ಸಂಜೆ ವೇಳೆಗೆ ನಗರದಾದ್ಯಂತ ತುಂತುರು ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment