newsfirstkannada.com

GT vs CSK: ಎರಡೂ ತಂಡಕ್ಕಿದೆ ಲೆಜೆಂಡ್​​ಗಳ ಮಾರ್ಗದರ್ಶನ.. ಇವ್ರು ಸ್ಕೆಚ್​ ಹಾಕಿದ್ರೆ ಮ್ಯಾಚ್​ ಮಿಸ್ಸೇ ಆಗಲ್ಲ

Share :

23-05-2023

  ಕ್ಯಾಪ್ಟನ್ಸ್​ ಕಾಳಗವಲ್ಲ.. ಇದು ದಿಗ್ಗಜರ ದಂಗಲ್​..!

  ಸೈಲೆಂಟ್​ ಕಿಲ್ಲರ್​ ಸ್ಟಿಫನ್​ ಫ್ಲೆಮಿಂಗ್​.!

  ಗುಜರಾತ್​ ತಂಡಕ್ಕೆ ಹೆಡ್​ ಮಾಸ್ಟರ್​​ ನೆಹ್ರಾ ಬಲ.!

IPL2023: ಹಾರ್ದಿಕ್​ ಪಾಂಡ್ಯ VS MS ಧೋನಿ ಮಾತ್ರವಲ್ಲ, ಇವತ್ತಿನ ಕ್ವಾಲಿಫೈಯರ್​​ ರಣಕಣವನ್ನ ದಿಗ್ಗಜರ ದಂಗಲ್​ ಅಂದ್ರೂ ತಪ್ಪಾಗಲ್ಲ. ಕ್ಯಾಪ್ಟನ್​ಗಳು ಮಾತ್ರವಲ್ಲ. ತಂಡದಲ್ಲಿರೋ ಒಬ್ಬೊಬ್ಬ ಸಪೋರ್ಟ್​​ ಸ್ಟಾಫ್​ಗಳು ಕೂಡ ಕ್ಷಣಮಾತ್ರದಲ್ಲೇ ಗೇಮ್​ಚೇಂಜ್​​ ಮಾಡಬಲ್ಲ ಪಂಟರ್ಸ್​​. ಇವ್ರುಗಳು ಸ್ಕೆಚ್​ ಹಾಕಿದ್ರೆ ಮಿಸ್ಸೇ ಆಗಲ್ಲ.

ಚೆನ್ನೈ ಸೂಪರ್​ ಕಿಂಗ್ಸ್​​ ಐಪಿಎಲ್​ ಇತಿಹಾಸದ ಮೋಸ್ಟ್​ ಸಕ್ಸಸ್​​ಫುಲ್​ ತಂಡಗಳಲ್ಲಿ ಒಂದು!. ಗುಜರಾತ್​ ಟೈಟನ್ಸ್​​. ಟೂರ್ನಿಗೆ ಕಾಲಿಟ್ಟ ಮೊದಲ ಸೀಸನ್​ನಲ್ಲೇ ಚಾಂಪಿಯನ್​ ಪಟ್ಟಕ್ಕೇರಿದ ತಂಡ. ಹಾಲಿ ಚಾಂಪಿಯನ್​ ಎಂಬ ಹೆಸರಿಗೆ ತಕ್ಕಂತೆ ಈ ಸೀಸನ್​ನಲ್ಲಿ ಪ್ಲೇ ಆಫ್​ಗೂ ಅದೇ ಗತ್ತಲ್ಲೇ ಎಂಟ್ರಿ ಕೊಟ್ಟಿದೆ. ಹೀಗಾಗಿಯೇ ಇವತ್ತಿನ ಪಂದ್ಯ ವಿಶ್ವ ಕ್ರಿಕೆಟ್​ ಲೋಕದ ಗಮನವನ್ನೇ ತನ್ನತ್ತ ಸೆಳೆದಿದೆ. ಅದ್ರಲ್ಲೂ ಧೋನಿ ಹಾಗೂ ಹಾರ್ದಿಕ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕ್ಯಾಪ್ಟನ್​​ಗಳಾಗಿರೋ ಇವರೇ ಇವತ್ತಿನ ಸೆಂಟರ್​ ಆಫ್​ ಅಟ್ರಾಕ್ಷನ್​. ಆದ್ರೆ, ಅಸಲಿ ವಿಚಾರ ಏನಪ್ಪಾ ಅಂದ್ರೆ, ಇವತ್ತು ಇವರಿಬ್ಬರೇ ಡಿಸೈಡಿಂಗ್​ ಫ್ಯಾಕ್ಟರ್​ಗಳಲ್ಲ. ಪಂಟರ್​​ಗಳು ಬೇರೆನೆ ಇದಾರೆ.

ಕ್ಯಾಪ್ಟನ್ಸ್ಕಾಳಗವಲ್ಲ.. ಇದು ದಿಗ್ಗಜರ ದಂಗಲ್..!

ನಾಯಕರಾಗಿರೋ ಧೋನಿ- ಹಾರ್ದಿಕ್​ ಆನ್​ಫೀಲ್ಡ್​ನಲ್ಲಿ ತೆಗೆದುಕೊಳ್ಳೋ ಒಂದೊಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸುತ್ತೆ. ಇದ್ರಲ್ಲಿ ನೋ ಡೌಟ್​.! ಆದ್ರೆ, ಇವತ್ತಿನ ಪಂದ್ಯದಲ್ಲಿ ತಂತ್ರ-ರಣತಂತ್ರಗಳು ಬೌಂಡರಿ ಗೆರೆಯಾಚೆ ಡಗೌಟ್​​ನಲ್ಲೇ ರೆಡಿಯಾಗಲಿವೆ. ಎರಡೂ ತಂಡಗಳಲ್ಲಿ ದಿಗ್ಗಜರ ದಂಡೇ ಇದೆ. ಸೈಲೆಂಟಾಗೆ ಸ್ಕೆಚ್​ ಹಾಕೋದ್ರಲ್ಲಿ ಇವ್ರನ್ನ ಮೀರಿಸೋರೆ ಇಲ್ಲ.

ಸೈಲೆಂಟ್​ ಕಿಲ್ಲರ್​ ಸ್ಟಿಫನ್​ ಫ್ಲೆಮಿಂಗ್​.!

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಹೆಡ್​ ಕೋಚ್​ ಸ್ಟಿಫನ್​ ಫ್ಲೆಮಿಂಗ್​ ಬಗ್ಗೆ ಇಂಟ್ರೂಡಕ್ಷನ್​ ಬೇಕಾಗಿಲ್ಲ. ಕೋಚ್​ ಆಗಿ ಫ್ಲೆಮಿಂಗ್​ ಮಾಡಿರೋ ಸಾಧನೆಯೇ ಸಾಮರ್ಥ್ಯದ ಬಗ್ಗೆ ಪಾಠ ಮಾಡುತ್ತೆ. ಪ್ರತಿ ಪಂದ್ಯದಲ್ಲೂ ಚೆನ್ನೈನ ಡಗೌಟ್​ನಲ್ಲಿ ಎಂಥಾ ಸಿಚ್ಯುವೇಶನ್​ ಇದ್ರೂ ಕೂಲ್​ ಆ್ಯಂಡ್​ ಕಾಮ್​ ಆಗಿ ಕೂರೋ ಫ್ಲೆಮಿಂಗ್​, ಗೇಮ್​ ರೀಡಿಂಗ್​ ವಿಚಾರದಲ್ಲಿ ಪಂಟರ್​​. ಪಂದ್ಯದ ಕ್ಷಣ ಕ್ಷಣದ ಗತಿಯನ್ನೂ ಅಷ್ಟೇ ವೇಗವಾಗಿ ಅರಿಯೋ ಫ್ಲೆಮಿಂಗ್​, ಕ್ಯಾಪ್ಟನ್​ಗೆ ಅಷ್ಟೇ ವೇಗವಾಗಿ ಸಂದೇಶ ರವಾನಿಸ್ತಾರೆ.

ಗುಜರಾತ್ ತಂಡಕ್ಕೆ ಹೆಡ್​ ಮಾಸ್ಟರ್​​ ನೆಹ್ರಾ ಬಲ.!

ಚೆನ್ನೈನ ಕೋಚ್​ ಸೈಲೆಂಟಾಗಿ ಪಂದ್ಯದ ವೇಳೆ ಡಗೌಟ್​ನಲ್ಲಿದ್ರೆ, ಗುಜರಾತ್​ ಕೋಚ್​​ ನೆಹ್ರಾ ಸೈಲೆಂಟ್​​ ಆಗಿರೋ ಮಾತೇ ಇಲ್ಲ. ಪಂದ್ಯದೂದ್ದಕ್ಕೂ ಬೌಂಡರಿಯನ್ನ ಸುತ್ತಹರಿಯೋ ನೆಹ್ರಾ, ಆಟಗಾರರಿಗೆ ಮೇಸೆಜ್​ ನೀಡ್ತಲೆ ಇರ್ತಾರೆ. ಎದುರಾಳಿಯನ್ನ ಟ್ಯಾಕಲ್​ ಮಾಡೋಕೆ, ಲೆಕ್ಕಾಚಾರಗಳನ್ನ ಹಾಕ್ತಾಲೆ ಇರ್ತಾರೆ.  ಮುಖ್ಯವಾಗಿ ಪ್ರೆಶರ್​ ಸಿಚ್ಯೂವೇಶನ್​ನಲ್ಲಿ ಬೌಲರ್​​ಗಳ ಬೆಂಬಲಕ್ಕೆ ಧಾವಿಸ್ತಾರೆ.

ಬೌಂಡರಿ ಗೆರೆಯಿಂದಲೇ ಮ್ಯಾಜಿಕ್​ ಮಾಡ್ತಾರೆ ಹಸ್ಸಿ.!

ಚೆನ್ನೈ ತಂಡದ ಬ್ಯಾಟಿಂಗ್​ ಕೋಚ್​​ ಮೈಕಲ್​ ಹಸ್ಸಿ ಎಂತಾ ಶಿಲೆಯನ್ನೂ ಸುಂದರ್​ ಶಿಲ್ಪವನ್ನಾಗಿ ಮಾಡಬಲ್ಲ ಕ್ಲಾಸಿಕ್​ ಕೋಚ್​. ಇದಕ್ಕೆ ಈ ಸೀಸನ್​ನಲ್ಲಿ ಚೆನ್ನೈ ಪರ ಅಬ್ಬರಿಸ್ತಾ ಇರೋ ಟೆಸ್ಟ್​ ಸ್ಪೆಷಲಿಸ್ಟ್​ ಅನ್ನಿಸಿಕೊಂಡಿದ್ದ ಅಜಿಂಕ್ಯಾ ರಹಾನೆಯ ಬ್ಯಾಟಿಂಗ್​ನಲ್ಲಾಗಿರೋ ಬದಲಾವಣೆಯೇ ಬೆಸ್ಟ್​ ಎಕ್ಸಾಂಪಲ್​. ಸಿಂಪಲ್​ ಸೊಲ್ಯೂಷನ್​ನಿಂದಲೇ ಬ್ಯಾಟ್ಸ್​ಮನ್​ಗಳ ಮಿಸ್ಟೇಕ್​ಗಳ ಸರಿಪಡಿಸೋ ಹಸ್ಸಿ, ಸಿಎಸ್​ಕೆ ಬ್ಯಾಟಿಂಗ್​ ಸಕ್ಸಸ್​ ಹಿಂದಿರೋ ಸೀಕ್ರೆಟ್​.

ಗುಜರಾತ್​ನ ಟ್ರಬಲ್​ ಶೂಟರ್​ ಗ್ಯಾರಿ ಕರ್ಸ್ಟನ್​​.!

ಗ್ಯಾರಿ ಕರ್ಸ್ಟನ್​. ಈ ಹೆಸರನ್ನ ಯಾವೊಬ್ಬ ಭಾರತೀಯ ಮರೆಯೋಕೆ ಸಾಧ್ಯವಿಲ್ಲ. ಇಂತಾ ದಿಗ್ಗಜ ಗುಜರಾತ್​ ಟೈಟನ್ಸ್​​ನ ಮೆಂಟರ್​ & ಬ್ಯಾಟಿಂಗ್​ ಕೋಚ್​. ಟಫ್​ ಸಿಚ್ಯೂವೇಶನ್​ಗಳನ್ನ ಕೂಲ್​ & ಕಾಮ್​ ಆಗಿ ಹ್ಯಾಂಡೆಲ್​ ಮಾಡಿ ಪರಿಹಾರದ ಪಾಠ ಮಾಡೋ ಗ್ಯಾರಿ, ಗುಜರಾತ್​ ಆಟಗಾರರ ಪಾಲಿನ ಟ್ರಬಲ್​ ಶೂಟರ್​.

ಹೀಗಾಗಿಯೇ ಹೇಳಿದ್ದು ಇವತ್ತಿನ ಚೆನ್ನೈ- ಗುಜರಾತ್​ ನಡುವೆ ನಡೆಯೋದು ದಿಗ್ಗಜರ ದಂಗಲ್​ ಅಂತಾ. ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರೋ ಕ್ವಾಲಿಫೈಯರ್​ ಫೈಟ್​​ನಲ್ಲಿ ಯಾರು ಗೆದ್ದು ಫೈನಲ್​ಗೆ ಎಂಟ್ರಿ ಕೊಡ್ತಾರೆ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

GT vs CSK: ಎರಡೂ ತಂಡಕ್ಕಿದೆ ಲೆಜೆಂಡ್​​ಗಳ ಮಾರ್ಗದರ್ಶನ.. ಇವ್ರು ಸ್ಕೆಚ್​ ಹಾಕಿದ್ರೆ ಮ್ಯಾಚ್​ ಮಿಸ್ಸೇ ಆಗಲ್ಲ

https://newsfirstlive.com/wp-content/uploads/2023/05/Coach.jpg

Load More