ವಿಡಿಯೋ ನೋಡಿ ಧೋನಿ ಅಭಿಮಾನಿಗಳು ಭಾವುಕ
ಸಿಎಸ್ಕೆಗೆ 5 IPL ಟ್ರೋಫಿ ಗೆಲ್ಲಿಸಿಕೊಟ್ಟಿರುವ ಧೋನಿ
ಟ್ವೀಟ್ನಲ್ಲಿ ಫ್ರಾಂಚೈಸಿ ಏನೆಂದು ಬರೆದುಕೊಂಡಿದೆ ಗೊತ್ತಾ?
IPL 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ತಂಡವನ್ನು ಬಗ್ಗು ಬಡಿದು ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಐದು ಬಾರಿ ಕಪ್ ಗೆದ್ದು ನಿರ್ಮಿಸಿದ್ದ ದಾಖಲೆಯನ್ನು ಸಿಎಸ್ಕೆ ತಂಡದ ನಾಯಕ ಧೋನಿ ಸರಿಗಟ್ಟಿದ್ದಾರೆ. ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ಐದು ಬಾರಿ ಕಪ್ ಗೆದ್ದರೂ, ಹೆಚ್ಚು ಫೈನಲ್ ಪ್ರವೇಶಿಸಿರುವ ಶ್ರೇಯಸ್ಸು ಸಿಎಸ್ಕೆ ಇದೆ.
ನಿಮಗೆ ಇದು ಗೊತ್ತಾ..?
ನಿವೃತ್ತಿ ಘೋಷಣೆ ಮಾಡ್ತಾರಾ ತಲಾ..?
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಿನ್ನೆ ನಿಗೂಢ ಟ್ವೀಟ್ ಒಂದನ್ನು ಮಾಡಿದೆ. ಇದು ನಾಯಕ ಧೋನಿಗೆ ಸಂಬಂಧಿಸಿದ ವಿಡಿಯೋ ಆಗಿದೆ. ‘Oh Captain, My Captain!’ ಎಂದು ವಿಡಿಯೋ ಪೋಸ್ಟ್ಗೆ ಕ್ಯಾಪ್ಷನ್ ನೀಡಿದೆ. ವಿಡಿಯೋದಲ್ಲಿ ಧೋನಿ ಇತ್ತೀಚೆಗೆ ಆಡಿರುವ ಪಂದ್ಯಗಳ ಅದ್ಭುತ ಫೋಟೋ ಹಾಗೂ ವಿಡಿಯೋ ತುಣುಕುಗಳನ್ನು ಸೇರಿಸಲಾಗಿದೆ. ಅದರ ಜೊತೆಗೆ ಪೆವಿಲಿಯನ್ ಕಡೆ ಓಡುತ್ತಿರುವ ಮರ್ಜಿಂಗ್ ವಿಡಿಯೋ ಇದಾಗಿದೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಧೋನಿ ಐಪಿಎಲ್ಗೆ ನಿವೃತ್ತಿ ಘೋಷಣೆ ಮಾಡ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ದಯವಿಟ್ಟು ನಿವೃತ್ತಿ ಘೋಷಣೆ ಮಾಡಬೇಡಿ ಎಂದು ಜನ ಪರಿ ಪರಿಯಾಗಿ ಬೇಡಿಕೊಳ್ತಿದ್ದಾರೆ.
Oh Captain, My Captain! 🥹#WhistlePodu #Yellove 🦁💛 @msdhoni pic.twitter.com/whJeUjWUVd
— Chennai Super Kings (@ChennaiIPL) June 13, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್