/newsfirstlive-kannada/media/post_attachments/wp-content/uploads/2025/03/Virat-kohli-1.jpg)
ವಿರಾಟ್​ ಕೊಹ್ಲಿಗೆ ಸ್ಪಿನ್ ವೀಕ್ನೆಸ್ ಇದೆ. ಚೆಪಾಕ್​ನ ಸ್ಪಿನ್ ಚಕ್ರವ್ಯೂಹದಲ್ಲಿ ವಿರಾಟ್ ಕೊಹ್ಲಿನ ಈಸೀಯಾಗಿ ಕಟ್ಟಿ ಹಾಕಬಹುದು ಅನ್ನೋ ಲೆಕ್ಕಾಚಾರ ಚೆನ್ನೈ ತಂಡದ್ದು. ಒಂದು ವೇಳೆ ಸಿಎಸ್​ಕೆ ನಿಜಕ್ಕೂ ಇದೇ ಸ್ಟ್ರಾಟಜಿ ರೂಪಿಸಿಕೊಂಡಿದ್ರೆ ಗೇಮ್​ಪ್ಲಾನ್​​ ಉಲ್ಟಾ ಹೊಡೆಯಲಿದೆ.
18ನೇ ಐಪಿಎಲ್​​​​ನ ಬ್ಲಾಕ್ ​​​​ಬಸ್ಟರ್​​​​ ಪಂದ್ಯಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್​ಗೆ ಮಣಿಸಿರುವ ಚೆನ್ನೈ ಸೂಪರ್​ ಕಿಂಗ್ಸ್​, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ತೊಡೆ ತಟ್ಟಲು ರೆಡಿಯಾಗಿದೆ. ತೆರೆ ಮರೆಯಲ್ಲೇ ಆರ್​ಸಿಬಿ ಹಾಗೂ ಕಿಂಗ್ ಕೊಹ್ಲಿಯನ್ನು ಕಟ್ಟಿಹಾಕಲು ಸ್ಪಿನ್ ವ್ಯೂಹ ರಚಿಸಿದೆ. ತಂತ್ರ ಹೆಣೆದ ಬೆನ್ನಲ್ಲೇ ಗೆದ್ದೇ ಗೆಲ್ತೇವೆ ಅನ್ನೋ ಉತ್ಸಾಹದಲ್ಲಿ ತೇಲಾಡ್ತಿದೆ. ಈ ಹೈವೋಲ್ಟೇಜ್ ಮ್ಯಾಚ್​ನಲ್ಲಿ ವಿರಾಟ್ ಕೊಹ್ಲಿಯನ್ನ ಕಟ್ಟಿಹಾಕೋದು ಸುಲಭವಲ್ಲ.
ಚೆನ್ನೈ ಬೇಟೆಗೆ ರಣಬೇಟೆಗಾರ ಸನ್ನದ್ಧ
ಮೊದಲ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬೆರೆದಿರುವ ವಿರಾಟ್, ಚೆಪಾಕ್​ನಲ್ಲಿ ಚೆನ್ನೈ ಬೇಟೆಗೆ ಸನ್ನದ್ಧರಾಗಿದ್ದಾರೆ. ಈ ರಣಬೇಟೆಗಾರನನ್ನ ಹಣಿಯಲು ಸ್ಪಿನ್ ಎಂಬ ಬ್ರಹ್ಮಾಸ್ತ್ರವನ್ನ ಚೆನ್ನೈ ಪ್ರಯೋಗಿಸ್ತಿದೆ. ವಿರಾಟ್​​ ಕೊಹ್ಲಿಗೆ ಸ್ಪಿನ್ ವೀಕ್ನೆಸ್ ಇದೆ. ಅದ್ರ ಮೇಲೆ ವರ್ಕೌಟ್​ ಮಾಡಿದ್ರೆ ಖೆಡ್ಡಾಗೆ ಕೆಡಗಬಹುದು ಅನ್ನೋದು ಚೆನ್ನೈ ಕನಸು. ಅಸಲಿ ಅಖಾಡದಲ್ಲಿ ಈ ಕನಸು ನನಸಾಗೋದು ಡೌಟೇ.
ಇದನ್ನೂ ಓದಿ: RCB ಬಗ್ಗೆ ಭವಿಷ್ಯ ನುಡಿದ ದಿಗ್ಗಜ.. ಈ ಸ್ಟಾರ್​ನ ಖರೀದಿಸಿ ಒಳ್ಳೆ ಕೆಲಸ ಮಾಡಿದೆ ಎಂದು ಬಣ್ಣನೆ
/newsfirstlive-kannada/media/post_attachments/wp-content/uploads/2025/03/VIRAT_KOHLI_KKR.jpg)
ವಿರಾಟನಿಗಿಲ್ಲ ಸ್ಪಿನ್ ವೀಕ್​ನೆಸ್​​
ಕ್ರಿಕೆಟ್​ ಅನ್ನೋ ಜಂಟಲ್​ಮನ್​ ಗೇಮ್​ನಲ್ಲಿ ಕೊಹ್ಲಿಯಂತಹ ಕ್ವಿಕ್​ ಲರ್ನರ್​​ ಮತ್ತೊಬ್ಬ ಇಲ್ಲ. ಈ ಹಿಂದೆ ಕೊಹ್ಲಿ ಸ್ಪಿನ್​ ಎದುರು ತಡಬಡಾಯಿಸಿದ್ದು ನಿಜ. ಈ ವೀಕ್​ನೆಸ್​ ಈಗಿಲ್ಲ. ಕಳೆದ ಸೀಸನ್​​​ ಐಪಿಎಲ್​ನಲ್ಲೇ ತಪ್ಪನ್ನ ಕೊಹ್ಲಿ ತಿದ್ದಿಕೊಂಡಿದ್ರು. ಸ್ಪಿನ್​​ ಎದುರು ವೀರಾವೇಷದಲ್ಲೇ ಬ್ಯಾಟ್​ ಬೀಸಿದ್ರು.
ಸ್ಪಿನ್ ಎದುರು ವಿರಾಟ್ ಕೊಹ್ಲಿ
2022ರ ಐಪಿಎಲ್​ನಲ್ಲಿ ಸ್ಪಿನ್ ಎದುರು ಆಡಿದ್ದ 11 ಪಂದ್ಯಗಳಿಂದ 107 ರನ್ ಗಳಿಸಿದ್ದ ವಿರಾಟ್, ಕೇವಲ 108.08ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು. 12.4 ಎಸೆತಕ್ಕೊಂದು ಬೌಂಡರಿ ಬಾರಿಸಿದ್ರು. 2023ರ ಐಪಿಎಲ್​ನಲ್ಲಿ 11 ಪಂದ್ಯಗಳಿಂದ 236 ರನ್ ಗಳಿಸಿದ್ರು. 113.46ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ವಿರಾಟ್, 9.90 ಎಸೆತಕ್ಕೊಮ್ಮೆ ಬೌಂಡರಿ ಗಳಿಸಿದರು. 2022, 2023 ಈ ಎರಡೂ ಸೀಸನ್​ಗಳಲ್ಲಿ ಸ್ಪಿನ್ ಎದುರು ಪರದಾಡಿದ್ದ ವಿರಾಟ್, 2024ರಲ್ಲಿ ಅಕ್ಷರಶಃ ವಿರಾಟ ರೂಪ ತೋರಿದ್ದರು. ಸ್ಪಿನ್ನರ್​ಗಳ ಎದುರು ವೀರಾವೇಷ ಬ್ಯಾಟಿಂಗ್​ ನಡೆಸಿದ್ರು. 2024ರ ಐಪಿಎಲ್​ನಲ್ಲಿ 13 ಪಂದ್ಯಗಳನ್ನಾಡಿದ್ದ ವಿರಾಟ್, ಸ್ಪಿನ್ ಎದುರು ಬರೋಬ್ಬರಿ 58.7ರ ಸರಾಸರಿಯಲ್ಲಿ 292 ರನ್ ಗಳಿಸಿದ್ದರು. 137.08ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ವಿರಾಟ್​, 6.7 ಎಸೆತಕೊಮ್ಮೆ ಬೌಂಡರಿ ದಾಖಲಿಸಿದ್ರು.
ಇದನ್ನೂ ಓದಿ: RCB ಬಗ್ಗೆ ಭವಿಷ್ಯ ನುಡಿದ ದಿಗ್ಗಜ.. ಈ ಸ್ಟಾರ್​ನ ಖರೀದಿಸಿ ಒಳ್ಳೆ ಕೆಲಸ ಮಾಡಿದೆ ಎಂದು ಬಣ್ಣನೆ
/newsfirstlive-kannada/media/post_attachments/wp-content/uploads/2025/03/Virat-Kohli-On-Rcb-1.jpg)
ಸ್ಪಿನ್ನರ್​ಗಳ ಎದುರು ಸ್ಲೋ ಬ್ಯಾಟಿಂಗ್ ನಡೆಸ್ತಾರೆ. ರಕ್ಷಣಾತ್ಮಕ ಆಟವಾಡ್ತಾರೆ ಅನ್ನೋ ಟೀಕೆಗಳಿಗೂ ಬ್ರೇಕ್ ಹಾಕಿದ್ರು. ಸ್ಪಿನ್ನರ್​ಗಳ ಮೇಲೆ ದಂಡೆತ್ತು ಹೋಗಿ ಕಳೆದ ವರ್ಷ ಸಿಕ್ಸರ್​ಗಳ ಸುರಿಮಳೆಯನ್ನೇ ಸುರಿಸಿದ್ರು. ಒಟ್ಟಾರೆ 15 ಮನಮೋಹಕ ಸಿಕ್ಸರ್ ಸಿಡಿಸಿದ್ರು. ಕೇವಲ 15 ಅಂದ್ಕೊಳ್ಳಬೇಡಿ. ಕಳೆದ ಆವೃತ್ತಿಯಲ್ಲಿ ಸ್ಪಿನ್​​ ಎದುರು ಗರಿಷ್ಟ ಸಿಡಿಸಿದ್ದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಕೊಹ್ಲಿಯೇ 4ನೇ ಸ್ಥಾನದಲ್ಲಿದ್ರು.
ಚೆನ್ನೈಗೆ ಕಾದಿದೆ ಮಾರಿಹಬ್ಬ
ಮೊನ್ನೆ ಕೊಲ್ಕತ್ತಾದ ಸ್ಪಿನ್ ಟ್ರ್ಯಾಕ್​ನಲ್ಲಿ ಅಬ್ಬರಿಸಿರುವ ವಿರಾಟ್, ಚೆನ್ನೈನಲ್ಲೂ ಚಿಂದಿ ಉಡಾಯಿಸಲು ರೆಡಿಯಾಗಿದ್ದಾರೆ. ಚೆಪಾಕ್​ನಲ್ಲಿ ನಡಿತಿರೋದು ಆರ್​ಸಿಬಿ ವರ್ಸಸ್​​ ಸಿಎಸ್​ಕೆ ಕಾಳಗ ಮಾತ್ರವಲ್ಲ. ಕೊಹ್ಲಿ ವರ್ಸಸ್​ ಚೆನ್ನೈ ಸೂಪರ್​ ಕಿಂಗ್ಸ್​​ ಸಮರವೂ ಆಗಿದೆ. ಚೆನ್ನೈನ ಚೆಪಾಕ್​​ನಲ್ಲಿ ಯೆಲ್ಲೋ ಆರ್ಮಿ ವಿರುದ್ಧ ಆಡಿದಾಗೆಲ್ಲಾ ಕೊಹ್ಲಿ ದಂಡೆತ್ತಿ ಹೋಗಿದ್ದಾರೆ.
ಚೆಪಾಕ್​ ಮೈದಾನದಲ್ಲಿ ಕೊಹ್ಲಿ
ಚೆಪಾಕ್​ ಮೈದಾನದಲ್ಲಿ ಸಿಎಸ್​ಕೆಗೆ ಚಳ್ಳೆ ಹಣ್ಣು ತಿನ್ನಿಸಿರುವ ಕಿಂಗ್ ಕೊಹ್ಲಿ 13 ಪಂದ್ಯವಾಡಿ 362 ರನ್​ ಕಲೆ ಹಾಕಿದ್ದಾರೆ. 2 ಹಾಫ್​​ಸೆಂಚುರಿ ಬಾರಿಸಿದ್ದಾರೆ. ಬರೀ ಚೆಪಾಕ್ ಸ್ಟೇಡಿಯಂನಲ್ಲಿ ಮಾತ್ರ ವಿರಾಟ್​ ವಿರಾಜಿಸಿಲ್ಲ. ಐಪಿಎಲ್ ಟೂರ್ನಿಯಲ್ಲಿ ಸಿಎಸ್​ಕೆ ವಿರುದ್ಧ ಆಡಿದ ಪಂದ್ಯಗಳಲ್ಲಿ ಕೊಹ್ಲಿಯ ರೆಕಾರ್ಡ್ಸ್ ಅದ್ಭುತ. ​ಟನ್​​​ಗಟ್ಟಲೆ ರನ್ ಕಲೆ ಹಾಕಿ, ಸಿಎಸ್​ಕೆ ಮೈಚಳಿ ಬಿಡಿಸಿದ್ದಾರೆ. ಇದೀಗ ಕೆಕೆಆರ್​​ ವಿರುದ್ಧ ಮೊದಲ ಪಂದ್ಯದಲ್ಲಿ ಅಬ್ಬರಿಸಿರುವ ವಿರಾಟ್, ಚೆಪಾಕ್​​ನಲ್ಲೂ ಹಸಿದ ಹೆಬ್ಬುಲಿಯಂತೆ ವಿಜೃಂಭಿಸುವುದು ಗ್ಯಾರಂಟಿ.
ಇದನ್ನೂ ಓದಿ: ಕೊನೆಯ ಐದು ಓವರ್​ನಲ್ಲಿ ರೋಚಕ ತಿರುವು.. ಪಂದ್ಯದ ಗತಿ ಬದಲಿಸಿದ್ದೇ ವೈಶಾಕ್ ವಿಜಯ್..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us