newsfirstkannada.com

ಮಾಹಿ ಮಾರ್ಗದರ್ಶನದಲ್ಲಿ ಪ್ಲೇ ಆಫ್​ನತ್ತ ಚೆನ್ನೈ ಸೂಪರ್​​ ಕಿಂಗ್ಸ್; ಈ ಬಾರಿ ಕಪ್​ ನಿರೀಕ್ಷೆಯಲ್ಲಿ ಧೋನಿ ಟೀಂ

Share :

22-05-2023

    12ನೇ ಬಾರಿ ಪ್ಲೇ ಆಫ್​ಗೆ ಸೂಪರ್​ ಕಿಂಗ್ಸ್​ ಎಂಟ್ರಿ..!

    ಟೀಮ್​ ಫಸ್ಟ್​ ಎಂದ ಕೂಲ್​ ಕ್ಯಾಪ್ಟನ್​ ಧೋನಿ.!

    ನಾಯಕನ ನಡೆಯೇ ಆಟಗಾರರಿಗೆ ಸ್ಪೂರ್ತಿ.!

    ಸೂಪರ್​ - ಡೂಪರ್​ ಬ್ಯಾಟಿಂಗ್​ ಕಂಡು ಎಲ್ಲಾ ದಂಗು.!

    ಮಾಹಿ ಮಾರ್ಗದರ್ಶನ, ಬೌಲರ್​​ಗಳ ಅಬ್ಬರ.!

    ಕಳೆದ ಸೀಸನ್​ನಲ್ಲಿ ಪ್ಲಾಫ್​, ಈ ಸೀಸನ್​ನಲ್ಲಿ ರಾಕ್​..!

ಐಪಿಎಲ್​ ಸೀಸನ್​ 16ರ ಪ್ಲೇ ಆಫ್​ಗೆ ಚೆನ್ನೈ ಸೂಪರ್​​ ಕಿಂಗ್ಸ್​ ಪಡೆ ರಾಜನಂತೆ ಕಾಲಿಟ್ಟಿದೆ. ಐಪಿಎಲ್​ ಇತಿಹಾಸದ 2ನೇ ಮೋಸ್ಟ್​ ಸಕ್ಸಸ್​ಫುಲ್ ತಂಡ ಎನಿಸಿಕೊಂಡಿದ್ರೂ, ಚೆನ್ನೈ ಈ ಸೀಸನ್​ನಲ್ಲಿ ಪ್ಲೇ ಆಫ್​ಗೆ ಎಂಟ್ರಿ ಕೊಡಲ್ಲ ಅನ್ನೋದು ಬಹುತೇಕರ ಮಾತಾಗಿತ್ತು. ಈಗ ಅದು ಸುಳ್ಳಾಗಿದೆ. ಒನ್ಸ್​​ ಅಗೇನ್​ ಮಾಸ್ಟರ್​ ಧೋನಿಯ ಮಾಸ್ಟರ್​ ಸ್ಟ್ರೋಕ್​ ಮುಂದೆ ಎಲ್ಲರ ಭವಿಷ್ಯಗಳು ಠುಸ್​ ಆಗಿದೆ.

ಈ ಸೀಸನ್​ನ ಐಪಿಎಲ್​ ಟೂರ್ನಿಯಲ್ಲಿ ಬೌಂಡರಿ, ಸಿಕ್ಸರ್​​ಗಳ ಮೇಳ ಹೇಗೆ ನಡೀತಾ ಇತ್ತು ಹಾಗೇ ಧೋನಿಯ ಜಾತ್ರೆಯೂ ನಡೀತಿದೆ. ಅದು ಚೆನ್ನೈನ ಚೆಪಾಕ್​ನಿಂದ ಹಿಡಿದು. ಡೆಲ್ಲಿ ಅರುಣ್​ ಜೇಟ್ಲಿ ಮೈದಾನವರೆಗೂ. ಹೋದಲ್ಲಿ ಬಂದಲ್ಲಿ ಎಲ್ಲೆಡೆ ಮಹೇಂದ್ರನದ್ದೇ ಜಪ.

ಈ ಸೀಸನ್​ನ ಐಪಿಎಲ್​, ಧೋನಿ ಪಾಲಿನ ಕೊನೆ ಟೂರ್ನಮೆಂಟ್​​ ಅನ್ನೋ ಮಾತು ಆರಂಭಕ್ಕೂ ಮುಂಚಿನಿಂದಲೂ ಇತ್ತು. ಆದ್ರೆ, ಟೂರ್ನಿ ಅಂತ್ಯಕ್ಕೆ ಬಂದ್ರೂ ಅದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ. ಬದಲಾಗಿ ಚೆನ್ನೈ ಸೂಪರ್​ ಕಿಂಗ್ಸ್​ ಪ್ಲೇ ಆಫ್​​ ಗ್ರ್ಯಾಂಡ್​​​ ಆಗಿ ಎಂಟ್ರಿ ಕೊಟ್ಟಿದೆ.

ಹೌದು.. ಐಪಿಎಲ್​ ಈವರೆಗೆ 16 ಸೀಸನ್​ಗಳನ್ನ ಕಂಡಿದೆ. ಈ ಪೈಕಿ ಚೆನ್ನೈ ಸೂಪರ್​ ಕಿಂಗ್ಸ್​​​ ತಂಡ 14 ಸೀಸನ್​ಗಳಲ್ಲೂ ಟೂರ್ನಿಯ ಭಾಗವಾಗಿದೆ. ಈ 14 ರಲ್ಲಿ ಎರಡೇ ಎರಡು ಸೀಸನ್​ ಬಿಟ್ರೆ, ಉಳಿದೆಲ್ಲಾ ಸೀಸನ್​ನಲ್ಲೂ ಚೆನ್ನೈ ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟಿದೆ. ಅದು ಮಾಹಿಯ ಮಾರ್ಗದರ್ಶನದಲ್ಲಿ.

ಪ್ಲೇ ಆಫ್​ಗೆ ಕ್ವಾಲಿಫೈ ಆಗ್ತಿದ್ದಂತೆ ಧೋನಿ ಆಡಿರುವ ಮಾತುಗಳಿವು. ಈ ಸೀಸನ್​ನ ಆರಂಭದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತೀವ್ರ ಹಿನ್ನಡೆ ಅನುಭವಿಸಿತ್ತು., ಆದ್ರೆ, ಅಂತ್ಯದಲ್ಲಿ 2ನೇ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ. ತಂಡ ಸಕ್ಸಸ್​​ಗಾಗಿ ಒಬ್ಬ ಬ್ಯಾಟ್ಸ್​ಮನ್​ ಅನ್ನೋ, ಒಬ್ಬ ಬೌಲರ್​ ಅನ್ನೋ ನೆಚ್ಚಿಕೊಂಡಿಲ್ಲ. ಇಡೀ ತಂಡವಾಗಿ ಹೋರಾಡುತ್ತೆ. ಇವತ್ತು ಚೆನ್ನೈ ಪ್ಲೇ ಆಫ್​ಗೆ ಗ್ರ್ಯಾಂಡ್​​ ಎಂಟ್ರಿ ಕೊಟ್ಟಿರೋದ್ರ ಹಿಂದಿನ ಸೀಕ್ರೆಟ್​ ಇದೇ.

ನಾಯಕನ ನಡೆಯೇ ಆಟಗಾರರಿಗೆ ಸ್ಪೂರ್ತಿ.!

ಟೀಮ್​ ಮುಖ್ಯ ಅನ್ನೋ ಧೋನಿ ಈ ಸೀಸನ್​ನಲ್ಲಿ ಕಂಪ್ಲೀಟ್​ ಬದಲಾದ್ರು. ಕಳೆದ ಸೀಸನ್​ನಲ್ಲಿ ಬ್ಯಾಟಿಂಗ್​ನಲ್ಲಿ ಪ್ಲಾಫ್​ ಶೋ ನೀಡಿದ್ದ ಮಾಹಿ ಈ ಸಲ ಘರ್ಜಿಸಿದ್ರು. ಅಪಾರ ಮಂಡಿ ನೋವಿನ ನಡುವೆಯೂ ಮೈದಾನಕ್ಕಿಳಿದು ಹೋರಾಡಿದ್ರು. ಧೋನಿಯ ಈ ನಡೆಯೇ ಆಟಗಾರರಿಗೆ ಸ್ಪೂರ್ತಿಯ ಸೆಲೆಯಾಯ್ತು.

ಸೂಪರ್​ – ಡೂಪರ್​ ಬ್ಯಾಟಿಂಗ್​ ಕಂಡು ಎಲ್ಲಾ ದಂಗು.!

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ಯಾಟಿಂಗ್​ ಯುನಿಟ್​ ಎಲ್ಲರನ್ನೂ ದಂಗು ಬಡಿಸಿದ್ದು ಸುಳ್ಳಲ್ಲ. ಅಜಿಂಕ್ಯಾ ರಹಾನೆಯಂತೂ ಈ ವಿಚಾರದಲ್ಲಿ ಸರ್​​ಪ್ರೈಸ್​ ಪ್ಯಾಕ್​. ಇಷ್ಟೇ ಅಲ್ಲ. ಶಿವಂ ದುಬೆ, ಋತುರಾಜ್​ ಗಾಯಕ್ವಾಡ್​, ಡಿವೋನ್​ ಕಾನ್ವೆ. ಹೀಗೆ ತಂಡ ಸೇರಿದ ಪ್ರತಿಯೊಬ್ಬ ಬ್ಯಾಟ್ಸ್​ಮನ್​ ಸಿಡಿದು ನಿಂತರು.

ಮಾಹಿ ಮಾರ್ಗದರ್ಶನ, ಬೌಲರ್​​ಗಳ ಅಬ್ಬರ.!

ಈ ಸೀಸನ್​ನ ಆರಂಭದಲ್ಲೇ ಚೆನ್ನೈಗೆ ಸ್ಟೋಕ್ಸ್​​ ರೂಪದಲ್ಲಿ ಮೊದಲ ವಿಘ್ನ ಎದುರಾದ್ರೆ, ಮುಖೇಶ್​ ಚೌದರಿ ರೂಲ್ಡ್​ ಔಟ್​ ಆಗಿದ್ದು ಮತ್ತೊಂದು ಹಿನ್ನಡೆಯಾಯ್ತು. ಪವರ್​ ಪ್ಲೇ, ಡೆತ್​ ಓವರ್​​ನಲ್ಲಿ ಬೌಲಿಂಗ್​ ಮಾಡೋ ಅನುಭವಿ ಆಟಗಾರರ ಕೊರತೆ ಕಾಡ್ತು. ಆರಂಭಿಕ ಕೆಲ ಪಂದ್ಯಗಳಲ್ಲಿ ತಂಡ ಸೋಲುಂಡಿತು ಕೂಡ. ಆದ್ರೆ, ಎಮ್​ಎಸ್​​ಡಿ ವಿಚಲಿತರಾಗಲಿಲ್ಲ. ಆಟಗಾರರ ಮೇಲೆ ನಂಬಿಕೆ ಇಟ್ಟು ಬ್ಯಾಕ್​ ಮಾಡಿದ್ರು. ಸರಿಯಾದ ಮಾರ್ಗದರ್ಶನವನ್ನೂ ಮಾಡಿದ್ರು. ಬೌಲರ್​ಗಳು ನಂಬಿಕೆ ಹುಸಿಗೊಳಲೇ ಇಲ್ಲ.

ಈ ಸೀಸನ್​ನ ಆರಂಭದಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪ್ಲೇ ಆಫ್​ಗೆ ಎಂಟ್ರಿ ಕೊಡಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ವು. ಇದಕ್ಕೆಲ್ಲಾ ಕಳೆದ ಸೀಸನ್​ನ ಕಳಪೆ ಪ್ರದರ್ಶನವೇ ಕಾರಣವಾಗಿತ್ತು. ಐಪಿಎಲ್​ ಇತಿಹಾಸದಲ್ಲೇ ಹೀನಾಯ ಪ್ರದರ್ಶನ ನೀಡಿದ್ದ ಚೆನ್ನೈ ಲೀಗ್​ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದ್ರೆ, ಈ ಸೀಸನ್​​ನಲ್ಲಿ ಸ್ಟ್ರಾಂಗ್​ ಕಮ್​ಬ್ಯಾಕ್​ ಮಾಡಿದೆ.

ಕಳೆದ ಸೀಸನ್​ನಲ್ಲಿ ಕಂಡಷ್ಟು ಏಳು – ಬೀಳುಗಳನ್ನ ಹಿಂದೆಂದೂ ಕಂಡಿಲ್ಲ. ನಾಯಕತ್ವದಲ್ಲಿ ಬದಲಾವಣೆಯ ಗೊಂದಲ, ಅನಾವಶ್ಯಕ ವಿವಾದಗಳು, ಆಟಗಾರರ ಪ್ಲಾಫ್​ ಶೋ, ಮ್ಯಾನೇಜ್​ಮೆಂಟ್​ ನಡೆಯ ಬಗ್ಗೆ ಆರೋಪಗಳು ಹೀಗೆ ಸಾಲು-ಸಾಲಯ ಹಿನ್ನಡೆಗಳನ್ನ ಕಳೆದ ಸೀಸನ್​ನಲ್ಲಿ ಚೆನ್ನೈ ಎದುರಿಸಿತ್ತು. ಆ ಎಲ್ಲಾ ನೋವಿನ ಕಥೆಗಳೇ ಇಂದು ಸಕ್ಸಸ್​​​ ತಂದು ಕೊಟ್ಟಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More