ಆರ್ ಪ್ರಜ್ಞಾನಂದ ಮುಂದೆ ಕಾರ್ಲ್ಸೆನ್ ಆಟ ನಡೆಯಲಿಲ್ಲ
ಎರಡು ಸುತ್ತಿನಲ್ಲೂ ಡ್ರಾ ಕಾಯ್ದುಕೊಂಡ ಚೆಸ್ ಆಟಗಾರರು
ಟೈ ಬ್ರೇಕರ್ನಲ್ಲಿ ಪ್ರಜ್ಞಾನಂದಗೆ ಇದೆ ಈಗಾಗಲೇ 3 ಗೆಲುವು
ಭಾರತದ ಯಂಗ್ ಚೆಸ್ ಪ್ಲೇಯರ್ ಆರ್.ಪ್ರಜ್ಞಾನಂದ ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ಗೆ ಸಖತ್ ಪೈಪೋಟಿ ನೀಡಿದ್ದಾರೆ. ನಿನ್ನೆ ನಡೆದ ಚೆಸ್ ವಿಶ್ವಕಪ್ ಫೈನಲ್ನ 2ನೇ ಸುತ್ತಿನಲ್ಲಿ ಪ್ರಜ್ಞಾನಂದ ದಿಟ್ಟ ಹೋರಾಟ ನಡೆಸಿದ್ದು ಕಾರ್ಲ್ಸೆನ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಅಝರ್ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ಈ ಚೆಸ್ ವಿಶ್ವಕಪ್ ಫೈನಲ್ನಲ್ಲಿ R ಪ್ರಜ್ಞಾನಂದ ತೀವ್ರವಾಗಿ ಪೈಪೋಟಿ ನೀಡಿದ್ದರಿಂದ ನಾರ್ವೆಯ ಕಾರ್ಲ್ಸೆನ್ ಜೊತೆಗಿನ ಪಂದ್ಯ ಡ್ರಾ ಆಗಿದೆ. ಪಂದ್ಯದಲ್ಲಿ ಪ್ರಜ್ಞಾನಂದ ಕಪ್ಪು ಕಾಯಿಗಳನ್ನು ಮುನ್ನಡೆಸಿದ್ರೆ, ಕಾರ್ಲ್ಸೆನ್ ಬಿಳಿ ಕಾಯಿಗಳನ್ನು ಮುನ್ನಡೆಸಿದ್ದರು. ಒಂದೂವರೆ ಗಂಟೆ ನಡೆದ ಆಟದಲ್ಲಿ ಯಾರೂ ಕೂಡ ಸೋಲೊಪ್ಪದ ಕಾರಣ ಡ್ರಾ ಮಾಡಿಕೊಂಡರು.
ಮೊನ್ನೆ ನಡೆದಿದ್ದ ಮೊದಲ ಸುತ್ತಿನಲ್ಲೂ ಪ್ರಜ್ಞಾನಂದ ಚಾಣಕ್ಷತನದಿಂದ ಚಂದುರಂಗದ ಕಾಯಿಗಳನ್ನು ಮುನ್ನಡೆಸಿ ಡ್ರಾ ಮಾಡಿಕೊಂಡಿದ್ದರು. ನಿನ್ನೆ ನಡೆದ ಪಂದ್ಯದಲ್ಲಿ ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ ಎಂದು ಹೇಳಲಾಗಿತ್ತಾದ್ರೂ ಸ್ಪರ್ಧೆಯಲ್ಲಿ ಇಬ್ಬರು ಜಾಗ್ರತೆ ತೋರಿದ್ದರಿಂದ ಗೆಲುವು ಯಾರಿಗೂ ದಕ್ಕಲಿಲ್ಲ. ಎರಡೂ ಸುತ್ತಿನಲ್ಲೂ ಡ್ರಾ ಆಗಿದ್ದರಿಂದ ಇವತ್ತು ನಡೆಯುವ ಟೈ ಬ್ರೇಕರ್ ಮ್ಯಾಚ್ನಲ್ಲಿ ಅಂತಿಮ ನಿರ್ಧಾರ ಏನೆಂಬುದು ಹೊರ ಬೀಳಲಿದೆ.
ಈ ಮೊದಲು ನಡೆದಂತ ಮ್ಯಾಚ್ಗಳ ಟೈ ಬ್ರೇಕರ್ನಲ್ಲಿ ಆರ್ ಪ್ರಜ್ಞಾನಂದ ವಿಜಯ ಸಾಧಿಸಿದ್ದೆ ಹೆಚ್ಚಿದೆ. ಮೂರು ಬಾರಿ ಟೈ ಬ್ರೇಕರ್ನಲ್ಲಿ ಗೆದ್ದಿರುವ ಭಾರತದ ಯುವ ಪಟು ಇಂದು ಕೂಡ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ