18 ವರ್ಷದ ಪ್ರಜ್ಞಾನಂದನಿಗೆ ತಂದೆ-ತಾಯಿಯ ಪ್ರೋತ್ಸಾಹವೇ ಹೆಚ್ಚು
ಕಾರ್ಲ್ಸೆನ್ಗೆ ಟಕ್ಕರ್ ಕೊಟ್ಟು ವಿಶ್ವದ ನಂ 1 ಪಟ್ಟ ಅಲಂಕರಿಸುತ್ತಾರಾ..?
ಚದುರಂಗದಲ್ಲಿ ಎದುರಾಳಿನಾ ಕಟ್ಟಿ ಹಾಕುವುದೇ ಯುವ ಪ್ರತಿಭೆ ಟಾರ್ಗೆಟ್
ಆರ್. ಪ್ರಜ್ಞಾನಂದ ಸದ್ಯ ನಡೆಯುತ್ತಿರುವ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು. ತಮಿಳುನಾಡಿನ 18ರ ಪೋರ ಪ್ರಜ್ಞಾನಂದ ಮುಂದೆ ವಿಶ್ವದ ನಂಬರ್ 1 ಚೆಸ್ ಆಟಗಾರ 32 ವರ್ಷದ ಮ್ಯಾಗ್ನಸ್ ಕಾರ್ಲ್‌ಸೆನ್ ಆಟ ಏನು ಅಂದರೆ ಏನೂ ನಡೆಯುತ್ತಿಲ್ಲ. ನಿನ್ನೆ ನಡೆದ ಫೈನಲ್ ಪಂದ್ಯದ ಮೊದಲ ಸುತ್ತಿನ ಮ್ಯಾಚ್ನಲ್ಲಿ ಕಾರ್ಲ್ಸೆನ್ಗೆ ಟಕ್ಕರ್ ಕೊಟ್ಟ ಪ್ರಜ್ಞಾನಂದ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂತೆಂತಾ ಘಟಾನುಘಟಿಗಳನ್ನೇ ಚದುರಂಗದಲ್ಲಿ ಚೆಕ್ಮೆಟ್ ಕೊಟ್ಟು ಓಡಿಸಿ ಕಾರ್ಲ್‌ಸೆನ್ ನಂಬರ್ 1 ಪಟ್ಟ ಅಲಂಕರಿಸಿದ್ದರು. ಇಂತಹ ಆಟಗಾರ, ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ವಿರುದ್ಧ ಚೆಸ್ ಆಡಲು ಬೆವರಿಳಿದು ಹೋಗಿದ್ದಾರೆ.
5 ಬಾರಿ ವಿಶ್ವ ಚೆಸ್ ಚಾಂಪಿಯನ್ ಆದ ಪ್ರಜ್ಞಾನಂದನ ಪೂರ್ಣ ಹೆಸರು ರಮೇಶ್ ಬಾಬು ಪ್ರಜ್ಞಾನಂದನ. 2005 ಆಗಸ್ಟ್ 10 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ತಂದೆ ರಮೇಶ್ ಬಾಬು TNSC ಬ್ಯಾಂಕ್ ಮ್ಯಾನೇಜರ್ ಆಗಿದ್ದು ತಾಯಿ ನಾಗಲಕ್ಷ್ಮಿ ಗೃಹಿಣಿಯಾಗಿದ್ದಾರೆ. ಪ್ರಜ್ಞಾನಂದ ಅವರ ಕೋಚ್ ರಮೇಶ್ ಆರ್ಬಿ ಆಗಿದ್ದಾರೆ. ವುಮನ್ ಗ್ರ್ಯಾಂಡ್ ಮಾಸ್ಟರ್ ಮತ್ತು ಇಂಟರ್ನ್ಯಾಷನಲ್ ಮಾಸ್ಟರ್ R ವೈಶಾಲಿ ಅವರ ಕಿರಿಯ ಸಹೋದರನೇ ಈ ಪ್ರಜ್ಞಾನಂದ.
ಬರೀ ಟಿವಿ ನೋಡುತ್ತಿದ್ದ ಪ್ರಜ್ಞಾನಂದ ಚೆಸ್ ಕಲಿತ್ತಿದ್ದು ಹೇಗೆ?
ಇನ್ನು ಮೊದಲು ಹೆಚ್ಚಾಗಿ ಟಿವಿಗೆ ಅಂಟಿಕೊಳ್ಳುತ್ತಿದ್ದ ಪ್ರಜ್ಞಾನಂದನಿಗೆ ಚೆಸ್ ಎನ್ನುವುದು ಏನಂತ ಗೊತ್ತಿರಲಿಲ್ಲ. ಹೀಗಾಗಿ ಟಿವಿ ನೋಡುವುದನ್ನು ಬಿಡಿಸಲು ತಂದೆ ರಮೇಶ್ ಬಾಬು ಚೆಸ್ ಬೋರ್ಡ್ ಖರೀದಿಸಿ ತಂದರು. ನಂತರ ಟಿವಿ ನೋಡುವುದನ್ನು ಬಿಟ್ಟು ತನ್ನ ಸಹೋದರಿ ವೈಶಾಲಿ ಜೊತೆ ಚೆಸ್ ಆಡಲು ಶುರು ಮಾಡಿದ. ಆಗ ನಾಗಲಕ್ಷ್ಮಿ ಮನೆಯಲ್ಲಿ ಮಗನನ್ನು ಹಾರೈಕೆ ಮಾಡುತ್ತಾ ಚೆಸ್ ಆಡಲು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿಯೇ ಪ್ರಜ್ಞಾನಂದ ಆಡುವ ಪ್ರತಿಯೊಂದು ಟೂರ್ನಿಯಲ್ಲಿ ನಾಗಲಕ್ಷ್ಮಿಯವರು ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಜ್ಞಾನಂದ ಚೆಸ್ ಅನ್ನು ಹೆಚ್ಚಾಗಿ ಗಮನ ಹರಿಸಲು ಮೂಲ ಕಾರಣ ತಂದೆಯೇ ಎಂದರೂ ತಾಯಿಯ ಪ್ರೋತ್ಸಾಹ ಕೂಡ ಜಾಸ್ತಿ ಕಾಣುತ್ತದೆ.
ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸಿದ ಪ್ರಜ್ಞಾನಂದ
2016 ರಲ್ಲಿ 10 ವರ್ಷ, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸಿದ ಕೀರ್ತಿ R ಪ್ರಜ್ಞಾನಂದಗೆ ಸಲ್ಲುತ್ತದೆ. ಕಳೆದ ವರ್ಷ ಅಂದರೆ 2022 ಫೆಬ್ರವರಿ 22 ರಂದು ತನ್ನ 16ನೇ ವಯಸ್ಸಿನಲ್ಲಿ ಏರ್‌ಥಿಂಗ್ಸ್ ಮಾಸ್ಟರ್ಸ್ ಱಪಿಡ್ ಚೆಸ್ ಟೂರ್ನ್ಮೆಂಟ್ನಲ್ಲಿ ಕಾರ್ಲ್ಸೆನ್ರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.
4ನೇ ಸುತ್ತಿನಲ್ಲಿ ವಿನ್ ಆಗಿದ್ದರೇ ಕಥೆ ಬೇರೆನೇ ಇತ್ತು
ರಷ್ಯಾದ ಸೋಚಿಯಲ್ಲಿ 2021ರಲ್ಲಿ ನಡೆದ ಚೆಸ್ ವಿಶ್ವಕಪ್‌ನ 9ನೇ ಆವೃತ್ತಿಯಲ್ಲಿ ಪ್ರಜ್ಞಾನಂದ ಚೆಸ್ ವಿಶ್ವಕಪ್ಗೆ ಮೊದಲ ಬಾರಿಗೆ ಎಂಟ್ರಿಕೊಟ್ಟಿದ್ದರು. ಪಂದ್ಯದ 2ನೇ ಸುತ್ತಿನಲ್ಲಿ GM ಗೇಬ್ರಿಯಲ್ ಸರ್ಗಿಸ್ಸಿಯನ್ರನ್ನು 2-0 ಅಂತರದಿಂದ ಸೋಲಿಸಿದರು. 3ನೇ ಸುತ್ತಿನಲ್ಲಿ ಱಪಿಡ್ ಟೈ ಬ್ರೇಕ್ನಲ್ಲಿ GM ಮೈಕೆಲ್ ಕ್ರಾಸೆಂಕೋವ್ರನ್ನು ಸೋಲಿಸಿ ನಂತರ 4ನೇ ಸುತ್ತಿನಲ್ಲಿ ಮ್ಯಾಕ್ಸಿಮ್ ವಾಚಿಯರ್ನಿಂದ ಸೋತು ಟೂರ್ನಿಯಿಂದ ಹೊರ ನಡೆದಿದ್ದರು.
ಸದ್ಯ ಅಝರ್ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಭಾರತದ R ಪ್ರಜ್ಞಾನಂದ ಪ್ರಬಲ ಪೈಪೋಟಿ ನೀಡಿದ್ದರಿಂದ ನಾರ್ವೆಯ ಕಾರ್ಲ್‌ಸೆನ್ ವಿರುದ್ಧದ ಪಂದ್ಯ ಡ್ರಾ ಆಗಿದೆ. ಇಂದು ನಡೆಯುವ ರೋಚಕ 2ನೇ ಸುತ್ತಿನ ಪಂದ್ಯದಲ್ಲಿ ಇಬ್ಬರಲ್ಲಿ ಯಾರು ವಿನ್ ಆಗವರೋ ಅವರು ವಿಶ್ವದ ನಂಬರ್ 1 ಚೆಸ್ ಆಟಗಾರ ಎನಿಸಿಕೊಳ್ಳುತ್ತಾರೆ. ಒಂದು ವೇಳೆ ಇವತ್ತಿನ ಪಂದ್ಯ ಡ್ರಾ ಆದ್ರೆ ಮತ್ತೆ ನಾಳೆ ಟೈ ಬ್ರೇಕರ್ ಮ್ಯಾಚ್ನಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ