ಐಎನ್‌ಎಸ್ ಗರುಡಾದ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನ
ಟೇಕಾಫ್ ಆಗುವಾಗ ನಡೆಯಿತು ಭೀಕರ ದುರಂತ
ಮೃತನ ಕುಟುಂಬಕ್ಕೆ ಧೈರ್ಯ ಹೇಳಿದ ನೌಕಾಪಡೆ ಮುಖ್ಯಸ್ಥ
ಕೊಚ್ಚಿ: ಐಎನ್‌ಎಸ್ ಗರುಡ ವಾಯು ನಿಲ್ದಾಣದ ರನ್ ವೇಯಲ್ಲಿ ಟೇಕ್ ಆಫ್ ಆಗುವ ವೇಳೆ ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಪತನಗೊಂಡು ನೇವಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಹೆಲಿಕಾಪ್ಟರ್ನಲ್ಲಿದ್ದ LAM ಯೋಗೇಂದ್ರ ಸಿಂಗ್ ಸಾವನ್ನಪ್ಪಿರುವ ಅಧಿಕಾರಿ. ಐಎನ್‌ಎಸ್ ಗರುಡ ವಾಯು ನೆಲೆಯಲ್ಲಿ ತರಬೇತಿಯನ್ನು ಕೊಡಲಾಗುತ್ತಿತ್ತು. ಈ ವೇಳೆ ರನ್ ವೇಯಲ್ಲಿ ಟೇಕಾಫ್ ಆಗುವಾಗ ಚೇತಕ್ ಹೆಲಿಕಾಪ್ಟರ್ನ ಲಿಫ್ಟ್ ಆಫ್ ಆದ ತಕ್ಷಣ ನೆಲಕ್ಕೆ ಅಪ್ಪಳಿಸಿದ್ದು ದುರಂತ ಸಂಭವಿಸಿದೆ. ಇದರೊಳಗಿದ್ದ ನೌಕಾಸೇನೆಯ ಸಿಬ್ಬಂದಿ ಮೃತಪಟ್ಟಿದ್ದಾರೆ.
ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಹಾಗೂ ಇತರೆ ಉನ್ನತ ಅಧಿಕಾರಿಗಳು ಸಿಬ್ಬಂದಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತನ ಕುಟುಂಬಸ್ಥರಿಗೆ ದೇವರು ಕರುಣಿಸಲು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ