newsfirstkannada.com

ಹಿರಿಯ ಮಗನ ಬಂಧಿಸಿದ ಮೇಲೆ ಮೌನ ಯಾಕೆ? ಸುಮಲತಾ ಅಂಬರೀಶ್‌ಗೆ ಚೇತನ್ ಖಡಕ್ ಪ್ರಶ್ನೆ; ಹೇಳಿದ್ದೇನು?

Share :

Published June 20, 2024 at 6:04pm

  ದರ್ಶನ್ ಸ್ಟಾರ್ ಪವರ್ ಬಳಸಿಕೊಂಡು ಈಗ ಸುಮ್ಮನಿರೋದೇಕೆ?

  ದರ್ಶನ್, ವಿನಯ್, ಪ್ರದೂಶ್, ಧನರಾಜ್ ಮತ್ತೆ ಪೊಲೀಸ್ ಕಸ್ಟಡಿಗೆ

  ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಅಂಬರೀಶ್‌ಗೆ ಖಡಕ್ ಪ್ರಶ್ನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ನಟ ದರ್ಶನ್​ ಸೇರಿ ಒಟ್ಟು 13 ಆರೋಪಿಗಳನ್ನು 24 ಎಸಿಎಂಎಂ ಇನ್ಚಾರ್ಜ್ ಕೋರ್ಟ್ ಎಕಾನಾಮಿಕ್ ಆಫೇನ್ಸ್ ಕೋರ್ಟ್​ಗೆ ಹಾಜರು ಪಡಿಸಲಾಗಿದೆ. ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ​ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.  ಮತ್ತೆ 2 ದಿನ A2 – ದರ್ಶನ್, A9 – ಧನರಾಜ್, A10 – ವಿನಯ್, A14 – ಪ್ರದೂಶ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: 1000 ಗಡಿ ತಲುಪಿದ ಸಾವು.. ಹಜ್ ಯಾತ್ರೆ ಇತಿಹಾಸದಲ್ಲೇ 3ನೇ ಅತಿ ದೊಡ್ಡ ದುರಂತ; ಆಘಾತಕಾರಿ ವರದಿ!

ಈ ಮಧ್ಯೆ ನಟ ಚೇತನ್​​ ಅಹಿಂಸಾ ಅವರು ದರ್ಶನ್ ಪ್ರಕರಣದಲ್ಲಿ ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೌನವನ್ನು ಪ್ರಶ್ನಿಸಿದ್ದಾರೆ. ಹಿರಿಯ ಮಗನ ಬಗ್ಗೆ ಸುಮಲತಾ ಯಾಕೆ ಮಾತಾಡ್ತಿಲ್ಲ? ರಾಜಕೀಯ ಉದ್ದೇಶದಿಂದ ದರ್ಶನ್ ಸ್ಟಾರ್ ಪವರ್ ಬಳಸಿಕೊಂಡು ಈಗ ಸುಮ್ಮನಿರೋದೇಕೆ ಅಂತ ಟ್ವೀಟ್​ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ನಟ ಚೇತನ್​​ ಅಹಿಂಸಾ ಅವರು, ಬಹುತೇಕ ಕೆ. ಎಫ್. ಐ. ವ್ಯಕ್ತಿಗಳು ದರ್ಶನ್ ಪ್ರಕರಣ ಒಂದು ವಾರಕ್ಕೂ ಮೀರಿದ್ದರೂ ಅದರ ಬಗ್ಗೆ ಮೌನವಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ದರ್ಶನ್​ ಅವರ ಸ್ಟಾರ್ ಪವರ್ ಅನ್ನು ಬಳಸಿದ ಸುಮಲತಾ ಅಂಬರಿಶ್ ಅವರನ್ನು ತಮ್ಮ ‘ಹಿರಿಯ ಮಗ’ ಎಂದು ಕರೆದಿದ್ದರು. ತನ್ನ ಮಗನ ಇತ್ತೀಚಿನ ಘಟನೆಗಳ ಬಗ್ಗೆ ಸುಮಲತಾ ಏನು ಹೇಳುತ್ತಾರೆ? ತಲೆ ಮರೆಸಿಕೊಳ್ಳುವುದು ಒಂದು ಆಯ್ಕೆಯಾಗಿರಬಾರದು ಅಂತ ಬರೆದುಕೊಂಡಿದ್ದಾರೆ.

ಈ ಮೊದಲು 5 ದಿನ ದರ್ಶನ್ ಅಂಡ್​ ಗ್ಯಾಂಗ್​ ಅನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಇಂದು 13 ಆರೋಪಿಗಳನ್ನು ಪೊಲೀಸರು ಜಡ್ಜ್​ ಮುಂದೆ ಹಾಜರು ಪಡಿಸಿದ್ದರು. ಅದರಲ್ಲಿ ಈ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿರೋ ಪವಿತ್ರ ಗೌಡ, ಪಿಎ ಪವನ್​, ರಾಘವೇಂದ್ರ, ನಂದೀಶ್, ಜಗದೀಶ @ ಜಗ್ಗ, ಅನು@ ಅನು ಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವಮೂರ್ತಿ, ರವಿ, ಕಾರ್ತಿಕ್ ಜೈಲು ಸೇರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿರಿಯ ಮಗನ ಬಂಧಿಸಿದ ಮೇಲೆ ಮೌನ ಯಾಕೆ? ಸುಮಲತಾ ಅಂಬರೀಶ್‌ಗೆ ಚೇತನ್ ಖಡಕ್ ಪ್ರಶ್ನೆ; ಹೇಳಿದ್ದೇನು?

https://newsfirstlive.com/wp-content/uploads/2024/06/chethan1.jpg

Load More