ಕೌಂಟಿಯಲ್ಲಿ ಕಮಾಲ್.. ಟೀಮ್ ಇಂಡಿಯಾ ಪರ ಢಮಾರ್
ಕೌಂಟಿ ಆಡಿಯೂ ಟೀಮ್ ಇಂಡಿಯಾಕ್ಕಿಲ್ಲ ಪ್ರಯೋಜನ
ಟೆಸ್ಟ್ ಸ್ಪೆಷಲಿಸ್ಟ್ ಅನುಭವ ಭಾರತಕ್ಕೆ ನೆರವಾಗಲೇ ಇಲ್ಲ
ಕೌಂಟಿಯಲ್ಲಿ ಕಮಾಲ್ ಮಾಡಿದ್ದ ಪೂಜಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ಪಾಲಿನ ಬಾಹುಬಲಿಯಾಗ್ತಾರೆ ಅಂತಾನೇ ನಿರೀಕ್ಷಿಸಲಾಗಿತ್ತು. ಆದ್ರೆ ಈ ಎಲ್ಲಾ ನಿರೀಕ್ಷೆ ಹುಸಿಯಾಗಿದ್ದಾರೆ. ಕೌಂಟಿ ವೀರ.. ಟೀಮ್ ಇಂಡಿಯಾ ಪರ ಜೀರೋ ಆಗಿ ಟೀಕೆಗೆ ಗುರಿಯಾಗಿದ್ದಾರೆ.
ಚೇತೇಶ್ವರ ಪೂಜಾರ.. ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್.. ನಯಾ ವಾಲ್ ಅಂತಾನೇ ಕರೆಸಿಕೊಳ್ಳೋ ಈತ ಕ್ರೀಸ್ನಲ್ಲಿದ್ರೆ, ಎಂಥಹ ದಿಗ್ಗಜ ಬೌಲರ್ಗಳೇ ಆಗಲಿ, ಬೆಣ್ಣೆಯಂತೆ ಕರಗೋದು ಗ್ಯಾರಂಟಿ. ಯಾಕಂದ್ರೆ ಈತನ ತಾಳ್ಮೆಯ ಆಟಕ್ಕೆ ಬಿಸಿಲಲ್ಲಿ ಬೆಂಡಾಗಲೇಬೇಕು. ಇನ್ಫ್ಯಾಕ್ಟ್ ಎಂಥಹ ಎಸೆತಗಳನ್ನೇ ಆಗಲಿ ನಿರರ್ಗಳವಾಗಿ ಆಡೋ ಈ ರೆಡ್ಬಾಲ್ ಸ್ಪೆಷಲಿಸ್ಟ್. ನಿರಾಯಾಸವಾಗಿ ರನ್ ಕೊಳ್ಳೆ ಹೊಡೆಯೋದ್ರಲ್ಲಿ ನಿಸ್ಸೀಮಾ. ಆದ್ರೀಗ ಈ ಟೆಸ್ಟ್ ಸ್ಪೆಷಲಿಸ್ಟ್ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಪ್ರತಿಷ್ಠಿತ ಪಂದ್ಯದಲ್ಲಿ ಪೂಜಾರರ ಅಟ್ಟರ್ಫ್ಲಾಫ್ ಪರ್ಫೆಮೆನ್ಸ್.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಟೀಮ್ ಇಂಡಿಯಾ ಪರ ಹೈಪ್ ಕ್ರಿಯೇಟ್ ಮಾಡಿದ್ದ ವೀರ ಎನಿಸಿಕೊಂಡಿದ್ದ ಪೂಜಾರ, ಈಗ ವೀರನೂ ಅಲ್ಲ.. ಶೂರನೂ ಅಲ್ಲ.. ಟೀಮ್ ಇಂಡಿಯಾ ಪಾಲಿನ ವಿಲನ್.
WTC ಫೈನಲ್ಗೂ ಮುನ್ನ ಕೌಂಟಿಯಲ್ಲಿ ವೀರಾವೇಶ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಇಂಗ್ಲೆಂಡ್ನ ಕೌಂಟಿಯಲ್ಲಿ ಆಡಿದ ಪೂಜಾರ, ಸಸೆಕ್ಸ್ ಪರ ಅಬ್ಬರಿಸಿ ಬೊಬ್ಬೆರೆದಿದ್ದರು. ಪೂಜಾರರ ವೀರಾವೇಶದ ಬ್ಯಾಟಿಂಗ್, ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಹೊಸ ಉತ್ಸಾಹವನ್ನೇ ತುಂಬಿತ್ತು. ಇದಕ್ಕೆ ಕಾರಣ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಅಬ್ಬರದ ಶತಕದಾಟಗಳು.
2023ರ ಕೌಂಟಿಯಲ್ಲಿ ಪೂಜಾರ
WTC ಫೈನಲ್ಗೂ ಮುನ್ನ ಕೌಂಟಿಯಲ್ಲಿ 6 ಪಂದ್ಯಗಳ 8 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಪೂಜಾರ, 545 ರನ್ ಸಿಡಿಸಿದ್ದರು. 68.12ರ ಸರಾಸರಿಯಲ್ಲಿ ರನ್ ಪೇರಿಸಿದ್ದರು. ಅಷ್ಟೇ ಅಲ್ಲ.! 1 ಅರ್ಧಶತಕ ಒಳಗೊಂಡ 3 ಶತಕ ಸಿಡಿಸಿದ್ದರು. ಈ ಪಾಟಿಯ ಬ್ಯಾಟಿಂಗ್ ನೋಡಿದ್ಮೇಲೆ, ಪೂಜಾರ ಟೀಮ್ ಇಂಡಿಯಾಗೆ ನೆರವಾಗ್ತಾರೆ ಅಂತಾನೇ ಎಲ್ಲರೂ ನಂಬಿದ್ದರು. ಆದ್ರೆ ಈ ನಂಬಿಕೆಯನ್ನು ಗೋಡೆ ಒಂದೇ ಮ್ಯಾಚ್ನಲ್ಲೇ ಚಿದ್ರಗೊಳಿಸಿದರು.
WTC ಫೈನಲ್ನಲ್ಲಿ ಚೇತೇಶ್ವರನ ಅಟ್ಟರ್ಫ್ಲಾಪ್ ಆಟ
ಪೂಜಾರ ಕೌಂಟಿಯಲ್ಲಿ ಅಬ್ಬರಿ ಬೊಬ್ಬೆರೆದಿದ್ದು ಜಸ್ಟ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಮಾತ್ರವೇ ಅಲ್ಲ. ಅದಕ್ಕೂ ಮುನ್ನ ನಡೆದ 2022ರ ಕೌಂಟಿಯಲ್ಲೂ ರನ್ ಸುನಾಮಿ ಸೃಷ್ಟಿಸಿದ್ದರು. ಆದ್ರೆ ಈ ಸುನಾಮಿ ಟೀಮ್ ಇಂಡಿಯಾ ಪರ ಅಟ್ಟರ್ಫ್ಲಾಪ್ ಆಯ್ತು. ಆಸಿಸ್ ಪಾಲಿಗೆ ಚೆಂಡ ಮಾರುತವಾಗಬೇಕಿದ್ದ ಪೂಜಾರ, WTC ಫೈನಲ್ನಲ್ಲಿ ಕಳಿಸಿದ್ದು ಕ್ರಮವಾಗಿ ಜಸ್ಟ್ 14, 27 ರನ್.
ಕೌಂಟಿ ಆಡಿಯೂ ಟೀಮ್ ಇಂಡಿಯಾಕ್ಕಿಲ್ಲ ಪ್ರಯೋಜನ
ಚೇತೇಶ್ವರ ಪೂಜಾರ, ಇಂಗ್ಲೆಂಡ್ನ ಕೌಂಟಿ ಆಡ್ತಿರೋದು ಇದೇ ಮೊದಲಲ್ಲ. ಕಳೆದ ಎಂಟು ವರ್ಷಗಳಿಂದ ಕೌಂಟಿ ಕ್ರಿಕೆಟ್ ಆಡ್ತಾ ಇಂಗ್ಲೆಂಡ್ ಕಂಡೀಷನ್ಸ್ನ ಚೆನ್ನಾಗಿಯೇ ಅರಿತಿದ್ದಾರೆ. ಟನ್ ಗಟ್ಟಲೇ ರನ್ ಕೂಡ ಗಳಿಸಿದ್ದಾರೆ. ಕೊನೆ ಎರಡು ಸೀಸನ್ಗಳಿಂದಲೇ ಬರೋಬ್ಬರಿ 8 ಶತಕ ಒಳಗೊಂಡ 1639 ರನ್ ಸಿಡಿಸಿದ್ದಾರೆ. ಈ ಅನುಭವ ಟೀಮ್ ಇಂಡಿಯಾ ಪ್ರಯೋಜನಕ್ಕೆ ಬರಲೇ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಇಂಗ್ಲೆಂಡ್ನಲ್ಲಿ ಭಾರತ ಪರ ದಾಖಲಿಸಿರೋ ರನ್.
ಇಂಗ್ಲೆಂಡ್ನಲ್ಲಿ ಭಾರತ ಪರ
ಇಂಗ್ಲೆಂಡ್ನಲ್ಲಿ ಒಟ್ಟು 16 ಟೆಸ್ಟ್ ಪಂದ್ಯಗಳನ್ನಾಡಿರೋ ಪೂಜಾರ, 870 ರನ್ ಕಲೆಹಾಕಿದ್ದಾರೆ. 29ರ ಸರಾಸರಿಯಲ್ಲಿ ರನ್ ಪೇರಿಸಿರೋ ಪೂಜಾರ, 5 ಅರ್ಧಶತಕ, 1 ಶತಕ ಮಾತ್ರವೇ ಸಿಡಿಸಿದ್ದಾರೆ. ಈ ಅಂಕಿಅಂಶಗಳೇ ನೋಡಿದ್ಮೇಲೆ ಪೂಜಾರ ಪೌರುಷ ಕೌಂಟಿ ಕ್ರಿಕೆಟ್ನಲ್ಲಿ ಮಾತ್ರ ಅನ್ನೋದು ಜಗ್ಗಜಾಹೀರು ಆಗ್ತಿದೆ. ಅಷ್ಟೇ ಅಲ್ಲ! ಇಂಗ್ಲೆಂಡ್ ಕಂಡೀಷನ್ಸ್ನಲ್ಲಿ ಎಷ್ಟೊಂದು ಕ್ರಿಕೆಟ್ ಆಡಿಯೂ ಟೀಮ್ ಇಂಡಿಯಾಗೆ ಎಳ್ಳೆಷ್ಟು ಪ್ರಯೋಜನ ಇಲ್ಲ ಅನ್ನೋದು ಅಂಕಿಅಂಶಗಳೇ ಸಾಬೀತು ಪಡಿಸ್ತಿವೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್