newsfirstkannada.com

ಠಾಣೆಯಲ್ಲೇ ಚಿಕನ್ ಬೇಯಿಸಿ​ ತಿಂದ ಪೊಲೀಸರು.. ವಿಡಿಯೋ ವೈರಲ್​​ ಆಗ್ತಿದ್ದಂತೆಯೇ ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿಗಳು..!

Share :

28-07-2023

    ಪೊಲೀಸ್ ಠಾಣೆಯನ್ನು ಅಡುಗೆ ಮನೆಯಾಗಿ ಪರಿವರ್ತನೆ

    ವಿಡಿಯೋ ವೈರಲ್ ಆಗ್ತಿದ್ದಂತೆ ಹಿರಿಯ ಅಧಿಕಾರಿಗಳು ಗರಂ

    ನೆಟ್ಟಿಗರಿಂದ ಬಗೆಬಗೆಯ ಕಮೆಂಟ್ಸ್, ವಿಡಿಯೋ ಸಿಕ್ಕಾಪಟ್ಟೆ ವೈರಲ್ ​

ಠಾಣೆ ಒಂದರಲ್ಲಿ ಚಿಕನ್​​ ಸಾಂಬಾರ್​ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದ ಪೊಲೀಸ್​​​ ಅಧಿಕಾರಿಗಳು ಇದೀಗ ಫಜೀತಿಗೆ ಸಿಲುಕಿಕೊಂಡಿದ್ದಾರೆ. ಕೇರಳದ ಎಲವುಂತಿಟ್ಟ ಪೊಲೀಸ್ ಠಾಣೆಯೊಂದರಲ್ಲಿ ಚಿಕನ್ ಅಡುಗೆ ಮಾಡಿದ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಡಿಯೋದಲ್ಲಿ ಏನಿದೆ..?

ಪೊಲೀಸ್​ ಅಧಿಕಾರಿಯೊಬ್ಬರು​ ಯುನಿಫಾರ್ಮ್​ನಲ್ಲೇ ಚಿಕನ್​ ಶಾಪ್​ಗೆ ಹೋಗುತ್ತಾರೆ. ಬಳಿಕ ಚಿಕನ್​ ತೆಗೆದುಕೊಂಡು ಠಾಣೆಗೆ ಬರುತ್ತಾರೆ. ನಂತರ ಐದಾರು ಪೊಲೀಸ್​ ಸಿಬ್ಬಂದಿ ಸೇರಿಕೊಂಡು ಚಿಕನ್​​ಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತಯಾರಿಸಿಕೊಳ್ಳುತ್ತಾರೆ. ನಂತರ ಪದಾರ್ಥ ತಯಾರು ಮಾಡುತ್ತಾರೆ.

ಕೇರಳದ ಜನಪ್ರಿಯ ಆಹಾರವಾದ ಟಪಿಯೋಕಾ ಮತ್ತು ಚಿಕನ್ ಕರಿಯನ್ನು ಬೇಯಿಸಿ ಊಟ ಮಾಡುತ್ತಾರೆ. ಈ ವಿಡಿಯೋವನ್ನು ಅಮಲ್ ಸುಧಾಕರನ್ ಎಂಬುವವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿ 9.6 ಮಿಲಿಯನ್​​ ​​ವೀಕ್ಷಣೆ ಪಡೆದುಕೊಂಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಕರ್ತವ್ಯದ ವೇಳೆ ಆಹಾರ ತಯಾರಿಸಿದ್ದಕ್ಕೆ ದಕ್ಷಿಣ ವಲಯ ಐಜಿ ವಿವರಣೆ ಕೋರಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಸೋಷಿಯಲ್​ ಮಿಡಿಯಾದಲ್ಲಿ ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.

View this post on Instagram

A post shared by Amal Sudhakaran (@amal_sudhakaran_)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಠಾಣೆಯಲ್ಲೇ ಚಿಕನ್ ಬೇಯಿಸಿ​ ತಿಂದ ಪೊಲೀಸರು.. ವಿಡಿಯೋ ವೈರಲ್​​ ಆಗ್ತಿದ್ದಂತೆಯೇ ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿಗಳು..!

https://newsfirstlive.com/wp-content/uploads/2023/07/cooking-3.jpg

Load More