ರಾಜಧಾನಿ ಉಪನಗರಗಳಿಗೆ ಸಂಪರ್ಕ ಕಲ್ಪಿಸೋ ಪ್ರಾಜೆಕ್ಟ್
ಸರ್ಕಾರದ ಮಹತ್ವದ 'ಸಬ್ ಅರ್ಬನ್' ರೈಲು ಯೋಜನೆ!
ಡಾ. ಶಾಲಿನಿ ರಜನೀಶ್ ಅವರಿಂದ ಕಾಮಗಾರಿ ಪರಿಶೀಲನೆ
ಬೆಂಗಳೂರು: ರಾಜಧಾನಿಯ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ದೂರದೃಷ್ಟಿಯ ಪ್ರಾಜೆಕ್ಟ್ ಈ ‘ಸಬ್ ಅರ್ಬನ್’ ರೈಲು ಯೋಜನೆ. ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್-2 ‘ಮಲ್ಲಿಗೆ’ ಬೈಯಪ್ಪನಹಳ್ಳಿ, ಬಾಣಸವಾಡಿ, ನಾಗವಾರ, ಹೆಬ್ಬಾಳ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ ಮೂಲಕ ಚಿಕ್ಕಬಾಣಾವರ ತಲುಪಲಿದೆ.
ಇನ್ನು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಡಾ. ಶಾಲಿನಿ ರಜನೀಶ್ ಅವರೊಂದಿಗೆ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ ವ್ಯವಸ್ಥಾಪಕ ನಿರ್ದೇಶಕಿ ಎನ್ ಮಂಜುಳಾ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮಗಾರಿ ಪರಿಶೀಲನೆ ಬಳಿಕ ಮಾತಾಡಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಇದಾಗಿದೆ. ಇದೊಂದು ಒಳ್ಳೆಯ ಪರಿಕಲ್ಪನೆ. ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಬೆಂಗಳೂರು ನಿವಾಸಿಗಳಿಗೆ ವರ್ಲ್ಡ್ ಕ್ಲಾಸ್ ಟ್ರಾನ್ಸ್ಪೋರ್ಟೇಷನ್ ಒದಗಿಸುವುದು ನಮ್ಮ ಗುರಿ. ಇದು ಮೂಲಸೌಕರ್ಯ ಅಭಿವೃದ್ಧಿಗೆ ನಿದರ್ಶನ ಪ್ರತಿರೂಪ ಎಂದರು.
ಶುರುವಾಗಿದ್ದು ಯಾವಾಗ?
2023ರ ಜನವರಿಯಲ್ಲಿ ಸಬ್ ಅರ್ಬನ್ ರೈಲು ಯೋಜನೆಯ 2ನೇ ಕಾರಿಡಾರ್ ನಿರ್ಮಾಣ ಕಾರ್ಯ ಶುರು ಮಾಡಲಾಗಿದೆ. ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್-1 ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ, ಕಾರಿಡಾರ್-2 ಬೈಯಪ್ಪನಹಳ್ಳಿ-ಚಿಕ್ಕಬಾಣಾವರ, ಕಾರಿಡಾರ್-3 ಕೆಂಗೇರಿ-ವೈಟ್‌ಫೀಲ್ಡ್ ಮತ್ತು ಕಾರಿಡಾರ್-4 ಹೀಲಲಿಗೆ-ರಾಜನಕುಂಟೆ ನಡುವೆ ಸಂಪರ್ಕ ಕಲ್ಪಿಸುತ್ತದೆ. 2026ಕ್ಕೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಒಟ್ಟು 4 ಮಾರ್ಗವಾಗಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸಲಾಗುತ್ತಿದೆ. ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಾಣಾವರ ನಡುವೆ ಸಂಪರ್ಕ ಕಲ್ಪಿಸುವ 25.01 ಕಿ. ಮೀ. ಮಾರ್ಗಕ್ಕೆ ‘ಮಲ್ಲಿಗೆ’ ಎಂದು ಹೆಸರಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ