newsfirstkannada.com

WATCH: ಮಣ್ಣಲ್ಲೇ ಆಟ.. ಮಣ್ಣಲ್ಲೇ ಒದ್ದಾಟ: ಶ್ರೀಕೃಷ್ಣನ ಬಾಲ್ಯ ನೆನಪಿಸುವ ಮಣ್ಣಿನ ಹಬ್ಬ ನೋಡೋದೆ ಚೆಂದ

Share :

01-07-2023

    ಮಕ್ಕಳು, ಯುವಕರು ಒಟ್ಟುಗೂಡಿ ಪರಸ್ಪರ ಮಣ್ಣೆರಚಿಕೊಳ್ಳುವ ಹಬ್ಬ ಇದು

    ಭಗವಾನ್​ ಶ್ರೀಕೃಷ್ಣನ ಬಾಲ್ಯವನ್ನು ನೆನಪಿಸುವ ಸಾಂಪ್ರದಾಯಿಕ ಫೆಸ್ಟಿವಲ್

    ಗೋವಾದ ಮಾರ್ಸೆಲ್​ ಎಂಬ ಪುಟ್ಟ ಗ್ರಾಮದಲ್ಲಿ ಮಣ್ಣಿನ ಹಬ್ಬ ಆಚರಣೆ

ಪಣಜಿ: ಮಣ್ಣಲ್ಲಿ ಆಟ ಆಡೋದು ಅಂದ್ರೆ ಯಾರಿಗೆ​ ತಾನೇ ಇಷ್ಟ ಇರೋದಿಲ್ಲ ಹೇಳಿ. ಪುಟ್ಟ ಮಕ್ಕಳನ್ನ ಮಣ್ಣಲ್ಲಿ ಆಟ ಆಡೋಕೆ ಬಿಟ್ಟರೆ ಸಾಕು ಅವರ ಖುಷಿಗೆ ಪಾರವೇ ಇಲ್ಲದ ಹಾಗೇ ಆಗುತ್ತೆ. ಹೀಗೆ ಇದೊಂದು ಅಪರೂಪದ ಹಬ್ಬ ಆಚರಣೆ. ಮಕ್ಕಳು ಯುವಕರು ಎಲ್ಲಾ ಒಟ್ಟುಗೂಡಿ ಒಬ್ಬರಿಗೊಬ್ಬರು ಪರಸ್ಪರ ಮಣ್ಣೆರಚಿಕೊಂಡು ಹಬ್ಬವನ್ನ ಸಂಭ್ರಮಿಸಿದ್ದಾರೆ.

ಇದು ಭಗವಾನ್​ ಶ್ರೀಕೃಷ್ಣನ ಬಾಲ್ಯವನ್ನು ನೆನಪಿಸುವ ಸಾಂಪ್ರದಾಯಿಕ ಮಣ್ಣಿನ ಹಬ್ಬ. ಈ ಹಬ್ಬವನ್ನ ಗೋವಾದ ಮಾರ್ಸೆಲ್​ ಎಂಬ ಪುಟ್ಟ ಗ್ರಾಮದಲ್ಲಿ ಚಿಖಲ್​ ಕಾಲೋ ಎಂಬ ಹೆಸರಿನಿಂದ ಆಚರಣೆ ಮಾಡ್ತಾರೆ. ಸುಮಾರು ನಾಲ್ಕು ಶತಮಾನಗಳಿಂದ ಈ ಹಬ್ಬವನ್ನ ಆಚರಿಸಿಕೊಂಡು ಬರಲಾಗ್ತಿದ್ದು, ಅಕ್ಕಪಕ್ಕದ ಗ್ರಾಮಸ್ಥರು, ನೆರೆಯವರು ಎಲ್ಲಾ ಸೇರಿ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸ್ತಾರೆ.

ಇನ್ನು, ನೂರಾರು ಮಕ್ಕಳು ಹಾಗೂ ಯುವಕರು ಸೇರಿಕೊಂಡು ಮಣ್ಣೆರಚಿಕೊಂಡು ಅದ್ಧೂರಿಯಾಗಿ ಈ ಹಬ್ಬವನ್ನು ಆಚರಿಸೋ ದೃಶ್ಯವನ್ನು ರೋಹನ್ ಖೌಂಟೆ ಎಂಬುವವರು ತಮ್ಮ ಟ್ವೀಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಮಣ್ಣಲ್ಲೇ ಆಟ.. ಮಣ್ಣಲ್ಲೇ ಒದ್ದಾಟ: ಶ್ರೀಕೃಷ್ಣನ ಬಾಲ್ಯ ನೆನಪಿಸುವ ಮಣ್ಣಿನ ಹಬ್ಬ ನೋಡೋದೆ ಚೆಂದ

https://newsfirstlive.com/wp-content/uploads/2023/07/festival-1.jpg

Load More