ವೀಕೆಂಡ್ ಟ್ರಿಪ್ಗಾಗಿ ಹೋದವರು ನೀರುಪಾಲಾದರು
ನಾಲ್ವರು ಯುವಕರ ದುರಂತ ಅಂತ್ಯ
ನಂದಿಬೆಟ್ಟಕ್ಕೆ ಹೋದವರು ಮನೆಗೆ ಬಾರಲೇ ಇಲ್ಲ
ಚಿಕ್ಕಬಳ್ಳಾಪುರ: ಈಜಲು ತೆರಳಿದ್ದ ನಾಲ್ಕು ಜನ ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ದೇವನಹಳ್ಳಿ ತಾಲ್ಲೂಕು ರಾಮನಾಥಪುರ ಕೆರೆಯಲ್ಲಿ ನಡೆದಿದೆ. ಮೊಜು ಮಸ್ತಿಗೆ ಬಂದಿದ್ದ ಬೆಂಗಳೂರಿನ ಆರ್.ಟಿ.ನಗರ- ಹೆಬ್ಬಾಳ ಯುವಕರು ದುರಂತ ಅಂತ್ಯ ಕಂಡಿದ್ದಾರೆ. ಅಗ್ನಿ ಶಾಮಕ ದಳ ಸಿಬ್ಬಂದಿಗಳ ಸಹಾಯದಿಂದ 4 ಯುವಕರ ಮೃತದೇಹವನ್ನ ನೀರಿನಿಂದ ಹೊರತೆಗೆಯಲಾಗಿದೆ.
ವೀಕೆಂಡ್ ಟ್ರಿಪ್ಗಾಗಿ ಶೇಕ್ ತಾಹೀರ್ (18), ತೋಹಿದ್ (18), ಶಾಹಿದ್ (18), ಫೈಜಲ್ ಖಾನ್ (18) ನಂದಿಬೆಟ್ಟಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ತೆರಳುವಾಗ ರಾಮನಾಥಪುರ ಕೆರೆಯಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಶಾಹಿದ್ ಮತ್ತು ಮತ್ತೊಬ್ಬನ ಶವ ಕಳೆದ ರಾತ್ರಿಯೇ ಪತ್ತೆಯಾಗಿದೆ. ಇನ್ನಿಬ್ಬರು ಯುವಕರ ಶವಗಳು ಇಂದು ಬೆಳಗ್ಗೆ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮೃತರ ಶವವನ್ನು ಹೊರ ತೆಗೆಯಲಾಗಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ನಾಲ್ಕೂ ಶವಗಳನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ