ಬಿಜೆಪಿ ಮುಖಂಡನ ಈ ಕಾರ್ಯಕ್ಕೆ ಸಂಸದರು ಮೆಚ್ಚುಗೆ..!
ಅಧಿಕಾರ ಇರಲಿ, ಬಿಡಲಿ ಜನರಿಗೆ ಸೇವೆ ಒದಗಿಸಬೇಕಷ್ಟೇ
ಶಿಡ್ಲಘಟ್ಟದಲ್ಲಿ ಉಚಿತ ಆನ್ಲೈನ್ ಸೇವಾ ಕೇಂದ್ರ ಸ್ಥಾಪನೆ
ಇತ್ತ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡುತ್ತಿದ್ದಂತೆ ಜನ ಸಾಮಾನ್ಯರು ಯೋಜನೆಗಳನ್ನ ಪಡೆಯಲು ಸೈಬರ್ ಸೆಂಟರ್ಗಳಿಗೆ ಮುಗಿಬೀಳ್ತಿದ್ದಾರೆ. ಈ ಜನಸಂದಣಿ ಕಂಡ ಸಮಾಜ ಸೇವಕರೊಬ್ಬರು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ತನ್ನದೇ ಕಚೇರಿಯಲ್ಲಿ ಕಂಪ್ಯೂಟರ್ ಗಳನ್ನಿರಿಸಿ ಉಚಿತ ಆನ್ಲೈನ್ ಸೇವೆಗೆ ಮುಂದಾಗಿದ್ದಾರೆ.
ಹೀಗೆ ತನ್ನದೇ ಕಚೇರಿಗೆ ಸೇವಾ ಸೌಧ ಅಂತ ಹೆಸರಿಟ್ಟು ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಸರ್ಕಾರಿ ಸೇವೆಗಳ ನೋಂದಣಿಗೆ ಸಂಕಲ್ಪ ತೊಟ್ಟಿರೋದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದಲ್ಲಿ. ಹೌದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಸೀಕಲ್ ರಾಮಚಂದ್ರೇಗೌಡ ಈ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ಸರ್ಕಾರಿ ಸೇವೆಗಳ ನೋಂದಣಿಗೆ ಸಂಕಲ್ಪ!
ಸೀಕಲ್ ರಾಮಚಂದ್ರೇಗೌಡ, ತನ್ನ ಕ್ಷೇತ್ರದ ಜನರಿಗೆ ಉಚಿತವಾಗಿ ಆನ್ಲೈನ್ ಸೇವೆಯನ್ನ ಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜನಸಾಮಾನ್ಯರು ಸೇವಾಸೌಧಕ್ಕೆ ಆಗಮಿಸಿ ತಮಗೆ ಬೇಕಾಗಿರುವ ಸರ್ಕಾರಿ ಸೌಲಭ್ಯ ಪಡೆಯಲು ಉಚಿತವಾಗಿ ಆನ್ ಲೈನ್ ಅರ್ಜಿಗಳನ್ನ ಹಾಕಿಕೊಳ್ಳಬಹುದು ಎಂದರು.
ನಮಗೆ ಅಧಿಕಾರ ಇರಲಿ, ಇಲ್ಲದೇ ಹೋಗಲಿ ನಾವು ಜನಸೇವೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ದೂರು ಇರುವರು ಇಲ್ಲಿಗೆ ಬಂದು ಅರ್ಜಿ ಸಲ್ಲಿಸಬಹುದು. ಮನೆ, ಮನೆಗೆ ಹೋಗಿ ಒಂದು ಅಭಿಯಾನ ಮಾಡಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುತ್ತೇವೆ.
ಸೀಕಲ್ಲು ರಾಮಚಂದ್ರೇಗೌಡ, ಬಿಜೆಪಿ ಮುಖಂಡ, ಶಿಡ್ಲಘಟ್ಟ
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದ ಸಮಾಜ ಸೇವಕ ಸೀಕಲ್ಲು ರಾಮಚಂದ್ರೇಗೌಡರ ಸೇವಾ ಸೌಧದಲ್ಲಿ ಹಲವು ಯೋಜನೆಗಳ ಮಾಹಿತಿ ಸೇವೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ, ಕಿಸನ್ ಸಮ್ಮಾನ್ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ.
ಶಿಡ್ಲಘಟ್ಟ ತಾಲ್ಲೂಕಿನ ಜನರಿಗೆ ಉಚಿತವಾಗಿ ಸೇವೆ ನೀಡುವ ಈ ಕಾರ್ಯಕ್ಕೆ ಕೋಲಾರ ಸಂಸದ ಮುನಿಸ್ವಾಮಿ ಚಾಲನೆ ನೀಡಿದ್ರು. ಬಳಿಕ ಸೀಕಲ್ಲು ರಾಮಚಂದ್ರೇಗೌಡರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಸರ್ಕಾರಿ ಸೇವೆಗಳನ್ನು ಪಡೆಯಲು ಜನ ನೂರಾರು ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿ ಇದೆ. ಸೈಬರ್ ಸೆಂಟರ್ಗಳಲ್ಲಿ ಮುಗಿಬಿದ್ದು ಅರ್ಜಿ ಸಲ್ಲಿಸಲಾಗ್ತಿದೆ. ಇದೆಲ್ಲವನ್ನು ಕಂಡ ಸೀಕಲ್ಲು ರಾಮಚಂದ್ರೇಗೌಡ, ಈ ವ್ಯವಸ್ಥೆಯನ್ನ ಮಾಡಿದ್ದಾರೆ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಅಂತ ತಾವೇ ಸಿಬ್ಬಂದಿಯನ್ನ ನೇಮಿಸಿ ಉಚಿತವಾಗಿ ಆನ್ಲೈನ್ ಅರ್ಜಿ ಸಲ್ಲಿಸುವ ಅನುಕೂಲ ಮಾಡಿದ್ದಾರೆ. ಸದ್ಯ ಈ ಸೇವೆ ಪಡೆಯುತ್ತಿರುವ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ