ಬೆಂಗಳೂರು ಮೂಲದ ದಂಪತಿಯ ಮಗು ಹುಬ್ಬಳ್ಳಿಯಲ್ಲಿ ಪತ್ತೆ
ಮುರುಗಮಲ್ಲದ ಅಮ್ಮಜಾನ್ ಬಾವಜಾನ್ ದರ್ಗಾದಲ್ಲಿ ಕಿಡ್ನ್ಯಾಪ್
ಮಗುವಿನ ಅಪಹರಣದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಚಿಕ್ಕಬಳ್ಳಾಪುರ: ಅಜ್ಜಿ, ಅಜ್ಜ ಹಾಗೂ ತಾಯಿಯೊಂದಿಗೆ ದರ್ಗಾಕ್ಕೆ ಬಂದಿದ್ದ ಮಗು ಕಿಡ್ನ್ಯಾಪ್ ಆದ ಕೇಸ್ಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಗು ಪತ್ತೆಯಾಗಿದೆ. ಈ ಘಟನೆಯು ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಪ್ರಖ್ಯಾತ ಅಮ್ಮಜಾನ್ ಬಾವಜಾನ್ ದರ್ಗಾದಲ್ಲಿ ನ.5 ರಂದು ನಡೆದಿತ್ತು.
ಬೆಂಗಳೂರು ಮೂಲದ ಜಬೀವುಲ್ಲಾ, ಸುಮೈಯಾ ದಂಪತಿಯ 2 ವರ್ಷ 4 ತಿಂಗಳ ಜಾವೀದ್ ಕಿಡ್ನ್ಯಾಪ್ ಆದ ಮಗು. ನವೆಂಬರ್ 5 ರಂದು ಅಜ್ಜ, ಅಜ್ಜಿ ಮತ್ತು ತಾಯಿ ಮುರುಗಮಲ್ಲದ ದರ್ಗಾದಲ್ಲಿ ದೇವರ ಆಶೀರ್ವಾದ ಪಡೆಯಲೆಂದು ಮಗುವನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ದರ್ಗಾದ ಒಳಗೆ ಹೋಗುವಾಗ ಜನದಟ್ಟಣೆ ಹೆಚ್ಚಾಗಿದ್ದರಿಂದ ಖತರ್ನಾಕ್ ಕಿಲಾಡಿ ಕೈಚಳಕ ತೋರಿಸಿ ಮಗುವನ್ನು ಕಿಡ್ನ್ಯಾಪ್ ಮಾಡಿದ್ದನು.
ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದ್ರೆ ಇದುವರೆಗೆ ಆರೋಪಿ ಯಾರೆಂಬುದು ಖಚಿತವಾಗಿ ಇನ್ನು ತಿಳಿದಿಲ್ಲವಾದ್ರೂ ಸಿಸಿಟಿವಿ ದೃಶ್ಯದಲ್ಲಿ ಮಗು ಎತ್ತುಕೊಂಡು ಹೋಗುತ್ತಿರುವುದು ಓರ್ವ ವೃದ್ಧ ಎನ್ನುವುದು ತಿಳಿದು ಬರುತ್ತಿದೆ.
ಮಗುವನ್ನು ಕಳೆದುಕೊಂಡಿದ್ದ ದಂಪತಿ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದರು. ಬಳಿಕ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಗುವನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದರು. ಸದ್ಯ ಕಿಡ್ನ್ಯಾಪ್ ಆದ ಮಗು ಹುಬ್ಬಳ್ಳಿಯ ಬಾಲಮಂದಿರದಲ್ಲಿ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರಿಂದ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ