newsfirstkannada.com

ಸರ್ಕಾರ ರಚನೆಯ ಸಂಭ್ರಮದಲ್ಲಿದ್ದ ಪ್ರದೀಪ್ ಈಶ್ವರ್​ಗೆ ಆಘಾತ; ಅವರ ಸಾಕು ತಾಯಿ ನಿಧನ

Share :

20-05-2023

  ಪ್ರದೀಪ್ ಈಶ್ವರ್​ ಸಾಕು ತಾಯಿ ರತ್ನಮ್ಮ

  ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರು

  ವಿಷಯ ತಿಳಿಯುತ್ತಿದ್ದಂತೆ ಸ್ವಗ್ರಾಮಕ್ಕೆ ವಾಪಸ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪ್ರದೀಪ್ ಈಶ್ವರ್​ ಅವರ ಸಾಕು ತಾಯಿ ನಿಧನರಾಗಿದ್ದಾರೆ. ಅವರ ಸಾಕು ತಾಯಿ ರತ್ನಮ್ಮ (72) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.

ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ರತ್ನಮ್ಮ ಅವರು ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಮ್ಮನ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೀಪ್ ಈಶ್ವರ್​ ಆಘಾತಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್​ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಪ್ರದೀಪ್ ಈಶ್ವರ್, ವಿಷಯ ತಿಳಿಯುತ್ತಿದ್ದಂತೆಯೇ ಪೇರೇಸಂದ್ರ ಗ್ರಾಮಕ್ಕೆ ತೆರಳಿದ್ದಾರೆ.

ಪ್ರದೀಪ್ ಈಶ್ವರ್​, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ. ಮೇ 10 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್​ ಅವರನ್ನು ಸೋಲಿಸಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಶುಭ ಕಾರ್ಯ ನಿಮಿತ್ತ ಪ್ರದೀಪ್ ಈಶ್ವರ್ ಬೆಂಗಳೂರಿಗೆ ಬಂದಿದ್ದರು. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸರ್ಕಾರ ರಚನೆಯ ಸಂಭ್ರಮದಲ್ಲಿದ್ದ ಪ್ರದೀಪ್ ಈಶ್ವರ್​ಗೆ ಆಘಾತ; ಅವರ ಸಾಕು ತಾಯಿ ನಿಧನ

https://newsfirstlive.com/wp-content/uploads/2023/05/PRADEEP-Eshwar.jpg

Load More