newsfirstkannada.com

ಪುಷ್ಪ ಮೂವಿ ಸ್ಟೈಲ್​ನಲ್ಲಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ರಕ್ತಚಂದನ ಸಾಗಾಟ.. ಕಾರು ಪಲ್ಟಿಯಾಗಿ ಮೂವರು ಗಂಭೀರ

Share :

12-09-2023

  ಕಾರು ಅಪಘಾತದಿಂದ ರಕ್ತಚಂದನ ದಂಧೆ ಬಟಾಬಯಲು

  NH 44 ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು

  ರಕ್ತಚಂದನ ಸಾಗಾಟ ಗೊತ್ತಿದ್ರು ಸುಮ್ಮನಿದ್ರಾ ಅಧಿಕಾರಿಗಳು?

ಚಿಕ್ಕಬಳ್ಳಾಪುರ: ತೆಲುಗಿನ ಪುಷ್ಪ ಮೂವಿ ಸ್ಟೈಲ್​ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಿಸುತ್ತಿದ್ದ ದಂಧೆಕೋರರ ಕಾರು ಅಪಘಾತವಾಗಿರುವ ಘಟನೆ ಚಿಕ್ಕಬಳ್ಳಾಪುರದ NH 44 ಹೆದ್ದಾರಿಯ ಸಾದಲಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಕ್ತಚಂದನ ಸಾಗಿಸುತ್ತಿದ್ದ ಕಾರು ಬಿದ್ದಿರುವುದು

ಗಾಯಾಳುಗಳನ್ನ ಆಂಧ್ರ ಪ್ರದೇಶದ ಕಡಪ ಮೂಲದ ನಾಗೇಂದ್ರ, ಶ್ರೀನಿವಾಸಲು ಮತ್ತು ನಾಗರಾಜು ಎಂದು ಹೇಳಲಾಗಿದೆ. ಸದ್ಯ ಈ ಅಪಘಾತದಿಂದ ಖದೀಮರು ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನ ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಗೊತ್ತಾಗಿದೆ. ಇವರು ರಕ್ತಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಆಂಧ್ರದ ಕಡಪದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರದ NH 44 ಹೆದ್ದಾರಿಯಲ್ಲಿ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನ ಸೀಟ್ ಅಡಿ ಇಟ್ಟಿದ್ದ ರಕ್ತಚಂದನದ ತುಂಡುಗಳು ಹೊರ ಬಿದ್ದಿದ್ದು ಇದರಿಂದ ಪ್ರಕರಣ ಹೊರ ಬಂದಿದೆ.

ಕಾರನ್ನು ಕ್ರೇನ್ ಮೂಲಕ ಮೇಲೇತ್ತುತ್ತಿರುವುದು

ಘಟನೆಯಲ್ಲಿ ಮೂವರು ಗಂಭೀರವಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಬಳಿಕ ಸ್ಥಳಕ್ಕೆ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಕ್ರೇನ್ ಅನ್ನು ತರಿಸಿ ಕಾರನ್ನು ಮೇಲೆತ್ತಲಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಾಜಾರೋಷವಾಗಿ ಖದೀಮರು ರಕ್ತಚಂದನ ಸಾಗಿಸುತ್ತಿರುವ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸುಮ್ಮನಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪ ಮೂವಿ ಸ್ಟೈಲ್​ನಲ್ಲಿ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ರಕ್ತಚಂದನ ಸಾಗಾಟ.. ಕಾರು ಪಲ್ಟಿಯಾಗಿ ಮೂವರು ಗಂಭೀರ

https://newsfirstlive.com/wp-content/uploads/2023/09/CBL_RAKTACHANDANA_1.jpg

Load More