ಪತ್ನಿಯ ಪ್ರಿಯತಮನ ಕತ್ತುಸೀಳಿ ರಾಕ್ಷಸೀ ಕೃತ್ಯ
ರಕ್ತ ಕುಡಿಯಲು ಕುತ್ತಿಗೆಗೆ ಬಾಯಿ ಹಾಕಿ ಏನಂದ ಗೊತ್ತಾ ರಾಕ್ಷಸ..?
ಬೆಚ್ಚಿ ಬೀಳಿಸುವಂತಿದೆ ರಕ್ಕಸನ ವಿಡಿಯೋ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಪೈಶಾಚಿಕ ಕೃತ್ಯವೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಡೀ ಮುನಕುಲವೇ ಬೆಚ್ಚಿಬೀಳುವಂತೆ ಇದೆ.
ವಿಡಿಯೋದಲ್ಲಿ ಏನಿದೆ..?
ರಕ್ತದ ಮಡುವಿನಲ್ಲಿ ವ್ಯಕ್ತಿಯೊಬ್ಬ ನೆಲಕ್ಕೆ ಬಿದ್ದಿದ್ದಾನೆ. ಆತನ ಹಿಡಿದು ಪಕ್ಕದಲ್ಲಿ ಕೂತಿದ್ದ ಕಿರಾತಕ, ಕುತ್ತಿಗೆಯಿಂದ ಸುರಿಯುತ್ತಿರುವ ರಕ್ತವನ್ನು ಕುಡಿಯಲು ಯತ್ನಿಸಿದ್ದಾನೆ. ಮಾತ್ರವಲ್ಲ, ವಿಡಿಯೋ ಮಾಡ್ತಿದ್ದ ಇನ್ನೊಬ್ಬ ವ್ಯಕ್ತಿಗೆ ‘ಸಾಯಿಸಿ ಬಿಡೋಣ್ವಾ’ ಎಂದು ಪದೇ ಪದೆ ಕೇಳ್ತಾನೆ. ಅದಕ್ಕೆ ವಿಡಿಯೋ ಮಾಡ್ತಿರುವ ವ್ಯಕ್ತಿ, ‘ಬಿಟ್ಟು ಬಿಡು ಅಣ್ಣಾ.. ನಾನು ಹೋಗ್ತೀನಿ’ ಎನ್ನುತ್ತಾನೆ. ಆದರೆ, ಆರೋಪಿ ನೆಲಕ್ಕೆ ಬಿದ್ದಿದ್ದ ವ್ಯಕ್ತಿಯ ಮುಖ ಹಾಗೂ ಎದೆಗೆ ಪಂಚ್ ಕೊಡುತ್ತಾನೆ. ನನ್ನ ಹೆಂಡತಿಯ ಪ್ರೀತಿ ಮಾಡ್ತೀಯಾ? ನಿನ್ನನ್ನು ಬಿಟ್ಟುಬಿಡಬೇಕಾ ಎಂದು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಇದಾಗಿದೆ.
ಪೊಲೀಸ್ ಮೂಲಗಳು ಹೇಳಿರೋದೇನು?
ಈ ಕೃತ್ಯದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಬದುಕಿದ್ದಾನಾ? ಸತ್ತಿದ್ದಾನಾ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವ್ಯಕ್ತಿಯ ಕತ್ತು ಸಿಳಿ ರಕ್ತ ಹಿರುತ್ತಿರುವ ವ್ಯಕ್ತಿ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದವ ಎನ್ನಲಾಗಿದೆ. ಆತ ಪ್ರಸ್ತುತ ಚಿಂತಾಮಣಿ ನಗರದ ಗಾಂಧಿನಗರದಲ್ಲಿ ವಾಸವಾಗಿದ್ದಾನೆ ಅಂತಾ ಹೇಳಲಾಗಿದೆ. ಇನ್ನು ಕತ್ತು ಸಿಳಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ ಚೇಳೂರಿನ ಮೂಲದವ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ