newsfirstkannada.com

ಸುಂದರಿಯ ಸಂಗ, ಲಕ್ಷ, ಲಕ್ಷ ಪಂಗನಾಮ; ಮದುವೆ ಹೆಸರಲ್ಲಿ ಮಕ್ಮಲ್ ಟೋಪಿ ಹಾಕುತ್ತಿದ್ದ ಆಂಟಿ ಲಾಕ್‌ ಆಗಿದ್ಹೇಗೆ?

Share :

Published September 1, 2024 at 4:08pm

Update September 1, 2024 at 4:12pm

    ಮದುವೆ ಆಗ್ತೀನಿ ಅಂತ ಮೂವರಿಗೆ ಮಕ್ಮಲ್​ ಟೋಪಿ ಹಾಕಿದ ಬ್ಯೂಟಿ!

    ಕಿಲಾಡಿ ಆಂಟಿಯನ್ನು ಬಲೆಗೆ ಬೀಳಿಸಿದ ಪೊಲೀಸರಿಗೆ ಗೊತ್ತಾಗಿದ್ದೇನು?

    ಮದುವೆಯಾದ ಪುರುಷರೇ ಇವರ ಟಾರ್ಗೆಟ್​, ಲಕ್ಷ ಲಕ್ಷ ಪೀಕಿ ಗಾಯಬ್​!

ಚಿಕ್ಕಬಳ್ಳಾಪುರ: ಮದುವೆ, ಮದುವೆ, ಮದುವೆ. ಸದ್ಯ ಮೂವತ್ತು ದಾಟಿದವರ ಚಿಂತೆ ಇದು. ಒಳ್ಳೆಯ ಜಾಬ್​, ಲಕ್ಷಾಂತರ ರೂಪಾಯಿ ಸಂಬಳ, ಕಾರು ಮನೆ ಎಲ್ಲವೂ ಇದ್ರೂ ಗಂಡು ಹೈಕಳಿಗೆ ಮದುವೆಗೆ ಹುಡುಗಿಯರೆ ಸಿಕ್ತಿಲ್ಲ, ಕಾರಣ ಏನು ಅಂತ ಸ್ಪಷ್ಟವಾಗಿಯೂ ಗೊತ್ತಾಗುತ್ತಿಲ್ಲ. ಈ ಒಂದು ಸಮಸ್ಯೆ ಈಗ ವಂಚಕರಿಗೆ ಕಿಲಾಡಿಗಳಿಗೆ ದೊಡ್ಡ ಬಲೆಯಂತಾಗಿ ಸಿಕ್ಕಿದೆ. ಕಂಡ ಕಂಡ ಗಂಡು ಮಕ್ಕಳಿಗೆ ಅಬಲೆಯಂತೆ ನಟಿಸಿ ಆ ಬಲೆಯನ್ನು ಎಸೆಯುತ್ತಿದ್ದಾರೆ. ಅಂತಹುದೇ ಒಂದು ಸ್ಟೋರಿ ಈಗ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನೋಡಲು ಬಳುಕುವ ಬಳ್ಳಿಯಂತ ಆಂಟಿ ನಾನು ಮದುವೆಯಾಗದ ಹುಡುಗಿ ಎಂದು ನಂಬಿಸಿ ಮೂವರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಅನ್ನೋ ದೂರು ದಾಖಲಾಗಿದೆ.

ಮೇಲೆ ನೋಡ್ತಿರುವ ಫೋಟೋದಲ್ಲಿರುವವರ ಹೆಸರು ಕೋಮಲ ಅಂತ. ಕೋಮಲೆ ಕೋಮಲೆ ನಾನು ಹೂವಿನಂತ ಕೋಮಲೆ ಎಂದುಕೊಂಡು ಮೂವರಿಗೆ ಪಂಗನಾಮ ಹಾಕಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾಳೆ ಈ ಚಾಲಾಕಿ. ಮ್ಯಾಟ್ರಿಮೋನಿಯಲ್ಲಿ ಮದುವೆಯಾಗದ ಹುಡುಗರನ್ನು ಹುಡುಕಿ ಸರಿಯಾಗಿ ಬಲೆ ಎಸೆಯುವುದೇ ಈಕೆಯ ಕಾಯಕ ಮಾಡಿಕೊಂಡಿದ್ದಳು ಸದ್ಯ ಚಿಕ್ಕಬಳ್ಳಾಪುರದ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಆಗಿದೆ. ಮದುವೆಯಾದ ಪುರುಷರನ್ನು ಟಾರ್ಗೆಟ್​ ಮಾಡಿ ಮದುವೆ ಆಗ್ತೀನಿ ಅಂತ ಹಣ ವಸೂಲಿ ಮಾಡ್ತಿದ್ದರು ಅನ್ನೋ ಆರೋಪವು ಕೇಳಿ ಬಂದಿದೆ.

ಇದನ್ನೂ ಓದಿ: ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!

ಮ್ಯಾಟ್ರಿಮೋನಿಯಲ್ಲಿ ರಾಘವೇಂದ್ರ ಅನ್ನೋ ಗೌರಿಬಿದನೂರಿನ ಹುಡಗನಿಗೆ ಈಕೆ ಪರಿಚಯವಾಗಿದ್ದಾಳೆ. ಕೋಮಲ ರೂಪದ ಕೋಮಲಗೆ ಮನಸೋತ ರಾಘವೇಂದ್ರ ಆಕೆ ಮದುವೆಯಾಗುತ್ತೇನೆ ಎಂದಾಗ ನಂಬಿದ್ದಾರೆ. ಆದ್ರೆ ಕೋಮಲ ಅವರ ಬಳಿ 7 ಲಕ್ಷ 40 ಸಾವಿರ ರೂಪಾಯಿ ಪೀಕೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಕೂಡಲೇ ಕೋಮಲಳ ವಿರುದ್ಧ ದೂರು ನೀಡಿದ್ದಾರೆ ರಾಘವೇಂದ್ರ . ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಈಕೆಯನ್ನು ಬಲೆಗೆ ಕೆಡವಿ ವಿಚಾರಣೆ ಮಾಡಿದಾಗ ಇನ್ನೂ ಇಬ್ಬರಿಗೆ ಟೋಪಿ ಹಾಕಿರುವ ಘಟನೆ ಬಯಲಿಗೆ ಬಂದಿದೆ.

ಗುಜರಾತ್​ನಲ್ಲಿ ರಾಘವೇಂದ್ರ ಅನ್ನೋರಿಗೂ ಕೂಡ ಈಕೆ ಮೋಸ ಮಾಡಿದ್ದಾರಂತೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ರಾಘವೇಂದ್ರಗೆ ಮದುವೆಯಾಗುವುದಾಗಿ ಹೇಳಿ ಹಣ ವಸೂಲಿ ಮಾಡಿದ್ದಾರೆ ಅನ್ನೋ ಆರೋಪವಿದೆ. ಜೊತೆಗೆ ಬೆಂಗಳೂರಿನ ನಾಗರಾಜು ಎಂಬುವವರಿಗೂ ಕೂಡ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟು ಮೂರು ಪ್ರಕರಣಗಳು ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಚಿಕ್ಕಬಳ್ಳಾಪುರದ ಸೈಬರ್ ಠಾಣೆ ಪೊಲೀಸರು ಈಗ ಕೋಮಲಾಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಇದನ್ನೂ ಓದಿ:ಅನ್ಯಾಯಕಾರಿ ಬ್ರಹ್ಮ.. ಸನ್ಯಾಸಿ ಯುವಕರೇ ಎಚ್ಚರ; ಮದುವೆ ಆಗ್ತೀನಿ ಅಂತ ಮೋಸ ಮಾಡ್ತಿದ್ದ ಆಂಟಿ ಅರೆಸ್ಟ್‌!

ಯಾರು ಈ ಕೋಮಲ, ಹಿನ್ನೆಲೆ ಏನು?
ಮೂಲತಃ ಬೆಂಗಳೂರಿನವಳಾದ ಬಂಧಿತ ಕೋಮಲ 7 ವರ್ಷದ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದಾರೆ. ಕೆಪಿಟಿಸಿಎಲ್​ನಲ್ಲಿ ಆರೋಪಿ ಕೋಮಲಾಳ ಪತಿ ನೌಕರರಾಗಿದ್ದರು. ಗಂಡ ಮೃತಪಟ್ಟ ಕಾರಣ ಟ್ಯಾಕ್ಸ್ ಕಟ್ಟಬೇಕು. 6 ಕೋಟಿ ರೂಪಾಯಿ ಪರಿಹಾರದ ಹಣ ಬರಲಿದೆ ಅದಕ್ಕೆ ದುಡ್ಡು ಕಟ್ಟಬೇಕು ಅಂತ ಹೇಳಿ, ಮದುವೆ ಆಗ್ತೀನಿ ಅಂತ ಹೇಳಿ ದುಡ್ಡು ಪೀಕುತ್ತಿದ್ದಳು. ಅವಳು ಹೇಳಿದ ಕಥೆಯನ್ನು ನಂಬಿಕೊಂಡ ಹುಡುಗರು ಆಕೆ ಕೇಳಿದಷ್ಟು ಹಣವನ್ನು ನೀಡ್ತಿದ್ರು. ಮದುವೆಯಾಗದ ಪುರುಷರನ್ನೇ ಟಾರ್ಗೆಟ್​ ಮಾಡ್ತಿದ್ದ ಈ ಖತರ್ನಾಕ್ ಕೋಮಲ ಬಲು ನಾಜೂಕಾಗಿ ಯಾಮಾರಿಸಿ ನಾಪತ್ತೆಯಾಗುತ್ತಿದ್ದರು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಂದರಿಯ ಸಂಗ, ಲಕ್ಷ, ಲಕ್ಷ ಪಂಗನಾಮ; ಮದುವೆ ಹೆಸರಲ್ಲಿ ಮಕ್ಮಲ್ ಟೋಪಿ ಹಾಕುತ್ತಿದ್ದ ಆಂಟಿ ಲಾಕ್‌ ಆಗಿದ್ಹೇಗೆ?

https://newsfirstlive.com/wp-content/uploads/2024/09/Chikkaballapur-Lady-Arrest-1.jpg

Load More