newsfirstkannada.com

ತಂದೆ ತಿಥಿ ಕಾರ್ಯ ಮುಗಿಸಿ ಬರುವಾಗ ಕಾರು ಪಲ್ಟಿ; ತಾಯಿ ಸ್ಥಳದಲ್ಲೇ ಸಾವು, ಮಗ, ಸೊಸೆ ಗಂಭೀರ

Share :

07-11-2023

    ನಿಯಂತ್ರಣ ತಪ್ಪಿ ಸುಜುಕಿ ಗ್ರಾಂಡ್ ವಿಟಾರ ಕಾರು ಪಲ್ಟಿ

    ಬೆಂಗಳೂರು -ಹಿಂದೂಪುರ ಹೆದ್ದಾರಿ ಅಲಕಾಪುರ ಗೇಟ್ ಬಳಿ ಘಟನೆ

    ಪಲ್ಟಿ ಹೊಡೆದ ರಭಸಕ್ಕೆ ನಜ್ಜುಗುಜ್ಜಾದ ಕಾರು, ಮಗ-ಸೊಸೆ ಗಂಭೀರ

ಚಿಕ್ಕಬಳ್ಳಾಪುರ: ತಂದೆಯ ತಿಥಿ ಕಾರ್ಯ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ತಾಯಿ ಮೃತಪಟ್ಟ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಬೆಂಗಳೂರು – ಹಿಂದೂಪುರ ಹೆದ್ದಾರಿ ಅಲಕಾಪುರ ಗೇಟ್ ಬಳಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಗುಂಡಗಲ್ಲು ಗ್ರಾಮದ 56 ವರ್ಷದ ಸುಶೀಲಮ್ಮ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿರುವ ಮುರಳಿ ಎನ್ನುವಾತ ತನ್ನ ತಂದೆ ಅಶ್ವತ್ಥರೆಡ್ಡಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ತಿಥಿ ಕಾರ್ಯವನ್ನು ನೆನ್ನೆ ಗುಂಡಗಲ್ಲು ಗ್ರಾಮದಲ್ಲಿ ನೆರವೇರಿಸಿ ಇಂದು ಬೆಳಗ್ಗೆ ಕುಟುಂಬಸ್ಥರೊಂದಿಗೆ ಬೆಂಗಳೂರಿಗೆ ತೆರಳಲು ಸುಜುಕಿ ಗ್ರಾಂಡ್ ವಿಟಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸ್ಥಳದಲ್ಲೇ ಸುಶೀಲಮ್ಮ ಮೃತಪಟ್ಟು ಆಕೆಯ ಮಗ ಮುರಳಿ, ಸೊಸೆ ಗುಣವತಿ ಗಂಭೀರ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು ಘಟನೆ ಸಂಬಂಧ ಮಂಚೇನಹಳ್ಳಿ ಠಾಣೆಯ ಪೊಲೀಸರು ಬೇಟೆ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆ ತಿಥಿ ಕಾರ್ಯ ಮುಗಿಸಿ ಬರುವಾಗ ಕಾರು ಪಲ್ಟಿ; ತಾಯಿ ಸ್ಥಳದಲ್ಲೇ ಸಾವು, ಮಗ, ಸೊಸೆ ಗಂಭೀರ

https://newsfirstlive.com/wp-content/uploads/2023/11/CBL-Accident.jpg

Load More