newsfirstkannada.com

ಸೆರೆ ಹಿಡಿದ ಹಾವಿನಿಂದಲೇ ಕಾಫಿನಾಡಿನ ಖ್ಯಾತ ಉರಗತಜ್ಞ ಸ್ನೇಕ್ ನರೇಶ್ ಸಾವು

Share :

Published May 30, 2023 at 12:17pm

Update May 30, 2023 at 12:18pm

    ಚಿಕ್ಕಮಗಳೂರಲ್ಲಿ ಸ್ನೇಕ್ ನರೇಶ್ ಸಿಕ್ಕಾಪಟ್ಟೆ ಫೇಮಸ್‌

    ಸೆರೆ ಹಿಡಿದ ಹಾವಿನಿಂದಲೇ ಕಚ್ಚಿಸಿಕೊಂಡ ಉರಗತಜ್ಞ

    ಚುನಾವಣೆಯಲ್ಲಿ ಸ್ಪರ್ಧಿಸಿ ಜನಸೇವೆಗೆ ಇಳಿದಿದ್ದ ನರೇಶ್

ಕಾಫಿನಾಡು ಚಿಕ್ಕಮಗಳೂರಲ್ಲಿ ಎಲ್ಲೇ ವಿಷಕಾರಿ ಹಾವು ಕಂಡ್ರೆ ಥಟ್ ಅಂತಾ ನೆನಪಾಗುತ್ತಾ ಇದ್ದಿದ್ದು ಒಂದೇ ಹೆಸರು ಅದು ಸ್ನೇಕ್ ನರೇಶ್. ಸ್ನೇಕ್ ನರೇಶ್ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದ ಉರಗತಜ್ಞ. ವಿಪರ್ಯಾಸ ನೋಡಿ ಯಾವ ಪ್ರಾಣಿ ಇವರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿತ್ತೋ ಅದೇ ಈಗ ಪ್ರಾಣ ಕಳೆದುಕೊಳ್ಳುವಂತೆ ಮಾಡಿದೆ.

ಸಾವಿರಾರು ಹಾವುಗಳನ್ನು ಸೆರೆ ಹಿಡಿದಿದ್ದ ಸ್ನೇಕ್ ನರೇಶ್ ಅವರಿಗೆ 51 ವರ್ಷ ವಯಸ್ಸಾಗಿತ್ತು. ಸ್ನೇಕ್ ನರೇಶ್ ಅಂತಲೇ ಪ್ರಖ್ಯಾತಿಯಾಗಿದ್ದ ಇವ್ರು ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. 2013ರ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಿದ್ದ ಸ್ನೇಕ್ ನರೇಶ್ ಅವರು ಜನಸೇವೆ ಮಾಡೋ ಉತ್ಸಾಹದಲ್ಲಿದ್ದರು.

ಉರಗತಜ್ಞ ಸ್ನೇಕ್ ನರೇಶ್ ಅವರು ಇಂದು ತಾನು ಸೆರೆ ಹಿಡಿದ ಹಾವಿನಿಂದಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್‌ನಲ್ಲಿ ಈ ದುರ್ಘಟನೆ ನಡೆದಿದ್ದು, ಸ್ನೇಕ್ ನರೇಶ್ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸೆರೆ ಹಿಡಿದ ಹಾವಿನಿಂದಲೇ ಕಾಫಿನಾಡಿನ ಖ್ಯಾತ ಉರಗತಜ್ಞ ಸ್ನೇಕ್ ನರೇಶ್ ಸಾವು

https://newsfirstlive.com/wp-content/uploads/2023/05/Snake-Naresh-1.jpg

Load More