newsfirstkannada.com

ಭೂ ಲೋಕದ ಸ್ವರ್ಗದಂತಹ ಆ ಕುಟುಂಬಕ್ಕೆ ನರಕ ಯಾತನೆ.. ಈ ಕಾಲದಲ್ಲೂ ಮೊಬೈಲ್​, ಟಿವಿ ಇಲ್ಲದೇ ಜೀವಿಸ್ತಿದ್ದಾರೆ ಇವ್ರು..!

Share :

23-07-2023

  ಮಿಲ್ ದೂರ, ಮನೆಯಲ್ಲೇ ಭತ್ತ ಕುಟ್ಟಿ ಅನ್ನ ಮಾಡ್ತಾರೆ

  ದೂರದ ಬೆಟ್ಟಗಳಡಿಯಲ್ಲೊಂದು ಸ್ವರ್ಗದಂತ ಮನೆಯಿದೆ

  ಆ ಕುಟುಂಬದ ಕಷ್ಟ ಮಾತ್ರ ಯಾರಿಗೂ ಬೇಡವೇ ಬೇಡ.!

ಇದು ಅಪ್​ಟೆಡ್ ದುನಿಯಾ, ಸಖತ್ ಬ್ಯುಸಿಯಾಗಿರೋ ಜೀವನ. ಸದಾ ಕೈಯಲ್ಲಿ ಮೊಬೈಲ್ ಹಿಡ್ಕೊಂಡು ತಿರುಗಾಡೋ ಕಾಲ. ಆದ್ರೆ, ಇಂತಹ ಕಾಲದಲ್ಲಿ ಮೊಬೈಲ್ ಇರಲಿ ಓಡಾಡೋಕೆ ರಸ್ತೆ ಇಲ್ಲದೇ, ವಿದ್ಯುತ್ ಇಲ್ಲದೇ ಇಲ್ಲೊಂದು ಒಂಟಿ ಕುಟುಂಬ ಜಗತ್ತಿನ ಸಂಪರ್ಕವೇ ಇಲ್ಲದೆ ಬದುಕು ನಡೆಸ್ತಿದೆ.

ಸುತ್ತಲೂ ಗುಡ್ಡ ಕಣ್ಣು ಹಾಸಿದಷ್ಟು ಬೆಟ್ಟಗಳ ಸಾಲು. ಭೂಲೋಕದ ಸ್ವರ್ಗ ಅಂದ್ರೆ, ಅದು ನಮ್ಮ ಕಾಫಿ ನಾಡು ಚಿಕ್ಕಮಗಳೂರು. ಯಾರನ್ನಾದ್ರೂ ಎಲ್ಲಿಗೆ ಟ್ರಿಪ್​ಗೆ ಹೋಗೊಕೆ ಇಷ್ಟ ಅಂದ್ರೆ, ಚಿಕ್ಕಮಗಳೂರು ಅನ್ನೋರೇ ಹೆಚ್ಚು. ಇಂತಹ ಜಾಗದಲ್ಲೇ ಅದೊಂದು ಒಂಟಿ ಕುಟುಂಬ ಮಾತ್ರ ಜೀವನ ನಡೆಸೋಕಾಗದೇ ಕಷ್ಟ ಪಡುತ್ತಿದೆ.

ಇಲ್ಲಿದೆ ಆಧುನಿಕ ಜಗತ್ತಿನ ಪರಿಚಯವಿಲ್ಲದ ಒಂಟಿ ಮನೆ!

ಇದು ಅಚ್ಚರಿ ಅಂದ್ರೂ ಸತ್ಯ. ಚಿಕ್ಕಮಗಳೂರಿನ ಕಳಸ ತಾಲೂಕಿನ ಕ್ಯಾತನಮಕ್ಕಿ ಅರಣ್ಯ ಪ್ರದೇಶದಲ್ಲಿ ಒಂಟಿ ಮನೆಯಿದೆ. ಲಿಂಗಪ್ಪ ಹಾಗೂ ಅವರ ಕುಟುಂಬ ಸದಸ್ಯರು ವಾಸ ಮಾಡ್ತಿದ್ದಾರೆ. ಆದ್ರೆ, ದುರಂತ ಅಂದ್ರೆ, ಕಳೆದ ಐದು ದಶಕಗಳಿಂದ ಈ ಮುಗ್ಧ ಜೀವಿಗಳಿಗೆ ಆಧುನಿಕ ಜಗತ್ತಿನ ಸಂಪರ್ಕ ಇಲ್ಲ. ಇವರ ಬಳಿ ಟಿ.ವಿ. ಇಲ್ಲ.. ಮೊಬೈಲ್ ನೋಡೇ ಇಲ್ಲ.

ಅಷ್ಟಕ್ಕೂ ಈ ದಟ್ಟ ಅರಣ್ಯದಲ್ಲಿ ಇವರ ಜೀವನ ಎಷ್ಟು ಕಷ್ಟಕರವಾಗಿದೆ ಅಂದ್ರೆ..

ಒಂಟಿ ಕುಟುಂಬದ ಕಹಾನಿ!

 • ರಸ್ತೆ ಸಂಪರ್ಕಕ್ಕೆ 15 ಕಿ.ಮೀ ಕಾಲು ನಡಿಗೆಯಲ್ಲಿ ನಡೆಯಬೇಕು
 • ಆರೋಗ್ಯ ಕೆಟ್ಟರೇ, ಸಾಮಗ್ರಿ ತರಲು 15 ಕಿ.ಮೀ ನಡೆಯಬೇಕು
 • ಏನಾದ್ರೂ ತರಬೇಕಂದ್ರೆ, ಆಟೋಗೆ ಕೊಡಬೇಕು 800 ರೂಪಾಯಿ
 • ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಎಲ್ಲವೂ ಇದೆ
 • ಆದ್ರೆ, ಸರ್ಕಾರದಿಂದ ಇವರಿಗೆ ಯಾವುದೇ ಸೌಲಭ್ಯ ಮಾತ್ರ ಇಲ್ಲ
 • ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ರೂ, ಪ್ರಯೋಜವಾಗಿಲ್ಲ

ಮಳೆಗಾಲ ಬಂತು ಅಂದ್ರೆ ಇವರ ಜೀವನವಾಗುತ್ತೆ ನರಕ!

ಅಲ್ಲದೇ ಮಳೆಗಾಲ ಬಂತೂ ಅಂದ್ರೆ, ಮುಗಿತೂ, ಹಳ್ಳಕ್ಕೆ ಸೇತುವೆ ಇಲ್ಲದೆ ಮರದ ದಿಮ್ಮಿ ಕಬ್ಬಿಣದ ಸಲಾಕೆ ಹಾಕಿ ಓಡಾಡೋ ಅನಿವಾರ್ಯತೆ ಎದುರಾಗಿದೆ. ಜೀವನ ಕಟ್ಟಿಕೊಳ್ಳಲು ತಂದೆ ಕಾಲದಲ್ಲಿ ಈ ಪ್ರದೇಶಕ್ಕೆ ಹೋದ ಲಿಂಗಪ್ಪ ಕುಟುಂಬ ಸರ್ಕಾರದ ಯಾವುದೇ ಸೌಲಭ್ಯವೂ ಇಲ್ಲದೇ, ಜನರ ಸಂಪರ್ಕವೂ ಇಲ್ಲದೇ ರೋಸಿ ಹೋಗಿದ್ದಾರೆ.

ನಮಗೆ ರೋಡಿನ ಸವಲತ್ತು ಇಲ್ಲ. ಮಳೆಗಾಲ ದಿನ ಅಥವಾ ಏನದರೂ ವಿಶೇಷವಿತ್ತು ಎಂದರೆ ಕಂಬಳಿ ಡೋಲಿ ಕಟ್ಟಿ ಹೊತ್ತುಕೊಂಡು ಇಲ್ಲಿಂದ ಹೋಗಬೇಕು. ಅಮ್ಮಗೆ ತುಂಬಾ ವಯಸ್ಸಾಗಿದೆ. ಹೀಗಾಗಿ ಅವರನ್ನು ನನ್ನ ಹೆಂಡತಿ ಊರಲ್ಲಿ ಬಿಟ್ಟಿದ್ದೇವೆ. ಗಾಡಿಗಳಿಗೆ ಕಾಯೋಕೆ ಆಗಲ್ಲ. ನಡೆದುಕೊಂಡೆ ಹೋಗಿ ವಸ್ತುಗಳನ್ನು ತರಬೇಕು.

ಲಿಂಗಪ್ಪ, ಒಂಟಿ ಮನೆ ಮಾಲೀಕ

ಇನ್ನು, ಊಟ ಹೇಗೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಬಂದ್ರೆ, ತಾವೇ ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ಬೆಳೆದ ಭತ್ತವನ್ನು ಮನೆಯಲ್ಲೇ ಕುಟ್ಟಿ ಅಕ್ಕಿ ಮಾಡಿಕೊಂಡು ತಿಂದರಷ್ಟೆ ಜೀವನ ಅಂತಾರೆ ಲಿಂಗಪ್ಪ ಪತ್ನಿ ನಾಗಮ್ಮ.

ಮಿಲ್​ ತುಂಬಾ ದೂರ ಇದ್ದು ಭತ್ತ ಕುಟ್ಟಬೇಕು. ಮಗ ಇದ್ದ ಅವನು ತಿರಿಕೊಂಡ. ಈಗ ಬರೀ ಹಣ್ಣುಮಕ್ಕಳೆ ಇರೋದು. ಕಷ್ಟದಲ್ಲಿ ಜೀವನ ನಡೆಸುತಿದ್ದೇವೆ. ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲ. ಮನೆಗೆ ಕರೆಂಟ್ ಇಲ್ಲ.

ನಾಗಮ್ಮ, ಲಿಂಗಪ್ಪ ಪತ್ನಿ

ಇನ್ನು, ಈ ಮೂಲ ಸೌಕರ್ಯಕ್ಕಾಗಿ ಸರ್ಕಾರಕ್ಕೆ ಇವರು ಸಾಕಾಷ್ಟು ಮನವಿ ಮಾಡ್ಕೊಂಡ್ರು ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಯಾಕೆ ಹೈಟೆಕ್ ಜೀವನ ನಡೆಸುತ್ತಿರುವ ಈ ಕಾಲದಲ್ಲಿ ರಾಜ್ಯ ಈಗಿನ ಮುಖ್ಯಮಂತ್ರಿ ಯಾರು..? ಅಧಿಕಾರದಲ್ಲಿರೋ ಪಕ್ಷ ಯಾವುದು ಅನ್ನೋದೆ ಈ ಕುಟುಂಬಕ್ಕೆ ಗೊತ್ತಿಲ್ಲ. ಹೊರ ಜಗತ್ತಿನ ಮಾಹಿತಿ ಪಡೆಯೋಕು ಈ ಕುಟುಂಬಕ್ಕೆ ಸಾಧ್ಯವಾಗ್ತಿಲ್ಲ.

ಅದೇನೆ ಇರಲಿ, ಇಲ್ಲಿ ಕಾಡೋ ಕಟ್ಟ ಕಡೆಯ ಪ್ರಶ್ನೆ ಏನಂದ್ರೆ, ಈ ಕುಟುಂಬ ಅಲ್ಲದೇ ಇನ್ನೆಷ್ಟು ಕುಂಟುಂಬ ಈ ರೀತಿ ಆಧುನಿಕ ಜಗತ್ತಿನಿಂದ ದೂರು ಉಳಿದಿವೆ ಗೊತ್ತಿಲ್ಲ. ಸರ್ಕಾರ ಅದೆಷ್ಟೇ ಯೋಜನೆಗಳು ಜಾರಿ ಮಾಡಿದ್ರೂ ಅದು ಜನರಿಗೆ ತಲುಪೋದು ಮುಖ್ಯ. ಇನ್ನಾದ್ರೂ ಈ ಕುಟುಂಬಕ್ಕೆ ಸರ್ಕಾರ ನೆರವಾಗುತ್ತಾ ಕಾದು ನೋಡಬೇಕಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂ ಲೋಕದ ಸ್ವರ್ಗದಂತಹ ಆ ಕುಟುಂಬಕ್ಕೆ ನರಕ ಯಾತನೆ.. ಈ ಕಾಲದಲ್ಲೂ ಮೊಬೈಲ್​, ಟಿವಿ ಇಲ್ಲದೇ ಜೀವಿಸ್ತಿದ್ದಾರೆ ಇವ್ರು..!

https://newsfirstlive.com/wp-content/uploads/2023/07/CKM_SINGLE_HOME_FOREST.jpg

Load More