newsfirstkannada.com

ಬೋರ್​ವೆಲ್​ಗೆ ಪಾಯಿಂಟ್ ಮಾಡಿ ಕೊಡುತ್ತೆ ಶನೇಶ್ವರ ಸ್ವಾಮಿಯ ಹೋರಿ.. ಈ ಶರಣ್ಯನ ಚಮತ್ಕಾರಕ್ಕೆ ನೀವು ಬೆರಗಾಗ್ತಿರಾ!

Share :

18-11-2023

    ತೆಂಗಿನಕಾಯಿ, ನಿಂಬೆಹಣ್ಣು ಇಲ್ಲದೇ ಪಾಯಿಂಟ್ ಮಾಡಿ ಕೊಡುತ್ತೆ

    ವಿಜ್ಞಾನ ಕ್ಷೇತ್ರಕ್ಕೆ ಸವಾಲು ಎಸೆದಿರುವ ಶನೇಶ್ವರ ಸ್ವಾಮಿಯ ಶರಣ್ಯ

    ಶರಣ್ಯ ಗುರುತು ಮಾಡಿರೋ 150ಕ್ಕೂ ಹೆಚ್ಚು ಬೋರ್​ವೆಲ್ಸ್​​ ಸಕ್ಸಸ್​​

ಚಿಕ್ಕಮಗಳೂರು: ಭೂಮಿ ಒಳಗಿನ ನೀರನ್ನು ಪಾಯಿಂಟ್​ ನೋಡಿ ಬೋರ್​ವೆಲ್ ಹಾಕೋದು ಒಂದು ಸವಾಲಿನ ಕೆಲಸವೇ ಸರಿ. ಏಕೆಂದರೆ ನೂರಾರು ಮೀಟರ್ ಆಳದವರೆಗೆ ಭೂಮಿ ಕೊರೆಯಿಸಿ ನೀರು ಬಂದಿಲ್ಲವೆಂದರೆ ಕೆಲಸದ ಜತೆಗೆ ಹಣ ಕೂಡ ವ್ಯರ್ಥವಾದಂತೆ. ಅದರಂತೆ ಸ್ವಾಮೀಜಿಗಳು, ಕೆಲ ವ್ಯಕ್ತಿಗಳು ತೆಂಗಿನಕಾಯಿಯೋ, ನಿಂಬೆಹಣ್ಣು ಅನ್ನು ಕೈಯಲ್ಲಿಡಿದುಕೊಂಡು ನೀರು ಇರುವುದನ್ನು ಪಾಯಿಂಟ್ ಮಾಡೋದು ನೋಡಿರುತ್ತೇವೆ. ಆದ್ರೆ ಇಲ್ಲಿ ಆಶ್ಚರ್ಯ ಎಂಬಂತೆ ದೇವರ ಹೋರಿಯೊಂದು 150ಕ್ಕೂ ಹೆಚ್ಚು ಬೋರ್​ವೆಲ್​ಗೆ ಪಾಯಿಂಟ್​ ಮಾಡಿ ಸೈ ಎನಿಸಿಕೊಂಡಿದೆ.

ಶರಣ್ಯ ಎನ್ನುವ ಹೋರಿ

ಜಿಲ್ಲೆಯ ಕಣಿವೆ ದಾಸರಹಳ್ಳಿಯ ಶರಣ್ಯ ಎನ್ನುವ ಹೋರಿಯನ್ನು ಶನೇಶ್ವರ ಸ್ವಾಮಿ ದೇವರಿಗೆ ಹರಕೆಗೆ ಎಂದು ಬಿಡಲಾಗಿದೆ. ಇಲ್ಲಿವರೆಗೆ ಈ ಶರಣ್ಯ ಹಾಕಿದ ಒಂದು ಪಾಯಿಂಟ್ ಕೂಡ ಫೈಲೂರ್ ಆಗಿಲ್ಲ. ಇದು ಇಲ್ಲಿ ನೀರಿದೆ ಎಂದು ಸನ್ನೆ ಮಾಡಿದರೆ ಸಾಕು ಅಲ್ಲಿ ಎಳೆನೀರಂತ ಸವಿಯಾದ ನೀರು ಬಿದ್ದೆ ಬೀಳುತ್ತಾವೆ ಎನ್ನುತ್ತಾರೆ ಸ್ಥಳೀಯರು.

ರೈತರ ಜಮೀನಿನಲ್ಲಿ ಕೊಳವೆ ಬಾವಿಗೆಂದು ಶರಣ್ಯ ಪಾಯಿಂಟ್ ಮಾಡುತ್ತಾನೆ. ಆ ಗುರುತು ಮಾಡಿದ ಸ್ಥಳದಲ್ಲಿ ರೈತ ಬೋರ್​ ಕರೆಯಿಸಿದರೆ ಸಾಕು ಎಲ್ಲದಕ್ಕಿಂತಲೂ ತುಸು ಹೆಚ್ಚಾಗಿಯೇ ನೀರು ಬೀಳುತ್ತದೆ. ಶರಣ್ಯ ಮಾಡಿರೋ ಪಾಯಿಂಟ್ಸ್​ಗಳಲ್ಲಿ ಇಲ್ಲಿವರೆಗೂ ಒಂದು ಕೂಡ ವ್ಯರ್ಥವಾಗಿಲ್ಲ. ಎಲ್ಲವೂ 100% ಸಕ್ಸಸ್​ ಆಗಿವೆ.

ಶನೇಶ್ವರ ದೇವಾಲಯದಲ್ಲಿ ಹೋರಿ ಶರಣ್ಯ

ಶರಣ್ಯನ ಇನ್ನೊಂದು ವಿಶೇಷ ಎಂದರೆ ಈಗಾಗಲೇ ಬೋರ್ ಕೊರೆಯಿಸಿ ನೀರು ಬಿದ್ದಿಲ್ಲವೆಂದು ಫೇಲ್ ಆದಲ್ಲಿಗೆ ಹೋಗಿ ಅದೇ ಸ್ಥಳದ ಸುತ್ತಾಮುತ್ತ ಪಾಯಿಂಟ್ಸ್ ಮಾಡಿ ಕೊಟ್ಟಿದ್ದಾನೆ. ಹೀಗಾಗಿ ಶರಣ್ಯ ಒಂದು ರೀತಿ ವಿಜ್ಞಾನಕ್ಕೂ ಸವಾಲು ಎಸೆದಿದ್ದಾನೆ. ಇಲ್ಲಿವರೆಗೂ 150ಕ್ಕೂ ಹೆಚ್ಚು ಬೋರ್​ವೆಲ್​ಗಳಿಗೆ ಪಾಯಿಂಟ್​ ಮಾಡಿ ಬಸವ ದಾಖಲೆ ಮಾಡಿದ್ದಾನೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೋರ್​ವೆಲ್​ಗೆ ಪಾಯಿಂಟ್ ಮಾಡಿ ಕೊಡುತ್ತೆ ಶನೇಶ್ವರ ಸ್ವಾಮಿಯ ಹೋರಿ.. ಈ ಶರಣ್ಯನ ಚಮತ್ಕಾರಕ್ಕೆ ನೀವು ಬೆರಗಾಗ್ತಿರಾ!

https://newsfirstlive.com/wp-content/uploads/2023/11/CKM_HORI.jpg

Load More