newsfirstkannada.com

ಭದ್ರಾ ನದಿ ನೀರಿನಲ್ಲಿ ತೆಪ್ಪ ಮುಳುಗಿ ಘೋರ ಘಟನೆ.. ಮೂವರು ದಾರುಣ ಸಾವು

Share :

Published June 19, 2024 at 8:32pm

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ

    ಎಷ್ಟು ಹುಡುಕಾಡಿದ್ರು ಸಿಗುತ್ತಿಲ್ವಾ ಮೂವರ ಮೃತದೇಹಗಳು?

    ಮೂವರ ಜೀವವನ್ನು ಕಸಿದುಕೊಂಡ ಜಲಮಾತೆ, ಏನಾಯಿತು?

ಚಿಕ್ಕಮಗಳೂರು: ಭದ್ರಾ ನದಿಯ ಬ್ಯಾಕ್ ವಾಟರ್​​ನಲ್ಲಿ ತೆಪ್ಪವೊಂದು ಮುಳುಗಿದ ಪರಿಣಾಮ ಮೂರು ಜನ ಸಾವನ್ನಪ್ಪಿದ್ದಾರೆ. ಎನ್.ಆರ್ ಪುರ ತಾಲೂಕಿನ ಬೈರಾಪುರ ಗ್ರಾಮದ ಬಳಿಯ ಭದ್ರಾ ನದಿಯ ಬ್ಯಾಕ್ ವಾಟರ್​​ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಬಟ್ಟೆಯಿಂದ ಚಪ್ಪಲಿವರೆಗೆ ಎಲ್ಲವೂ ಸೀಜ್​.. ಕ್ಲೈಮ್ಯಾಕ್ಸ್‌ನಲ್ಲಿ ಸಖತ್ ಟ್ವಿಸ್ಟ್ ಕೊಟ್ಟ ಐ-ವಿಟ್ನೆಸ್‌ಗಳು; ಏನದು?

ಶಿವಮೊಗ್ಗದ ವಿದ್ಯಾನಗರ ಮೂಲದ ಆದೀಲ್, ಸಾಜೀದ್ ಹಾಗೂ ಅಫ್ದಾ ಖಾನ್ ಮೃತ ದುರ್ದೈವಿಗಳು. ಇವರೆಲ್ಲ ಸೇರಿ ತೆಪ್ಪದಲ್ಲಿ ಭದ್ರಾ ನದಿಯ ನೀರಿನಲ್ಲಿ ಹೋಗುತ್ತಿದ್ದರು. ಈ ವೇಳೆ ತೆಪ್ಪ ಇದ್ದಕ್ಕೆ ಇದ್ದಂತೆ ಮುಳುಗಿ ಹೋಗಿದೆ. ಇದರಿಂದ ತೆಪ್ಪದಲ್ಲಿದ್ದ ಮೂವರು ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: RCBಯ ಅದೃಷ್ಟದ ಕ್ಯಾಪ್ಟನ್​ ಮತ್ತೆ ಸೆಂಚುರಿ.. ಬೆಂಗಳೂರಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂದನಾ

ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ ಬಳಿಕ ವನ್ಯಜೀವಿ ಇಲಾಖೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹ ಸಿಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭದ್ರಾ ನದಿ ನೀರಿನಲ್ಲಿ ತೆಪ್ಪ ಮುಳುಗಿ ಘೋರ ಘಟನೆ.. ಮೂವರು ದಾರುಣ ಸಾವು

https://newsfirstlive.com/wp-content/uploads/2024/06/CKM_DIED_.jpg

Load More