newsfirstkannada.com

ಟ್ರಕ್ಕಿಂಗ್​ಗೆ ಬಂದಿದ್ದ ಮೈಸೂರು ಮೂಲದ ಪ್ರವಾಸಿಗ ಚಿಕ್ಕಮಗಳೂರಲ್ಲಿ ಹಠಾತ್ ಸಾವು -ಕಾರಣ..?

Share :

01-07-2023

    ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ವೇಳೆ ಘಟನೆ

    7 ಸ್ನೇಹಿತರೊಂದಿಗೆ ಬಂದಿದ್ದ ಪ್ರವಾಸಿಗ ರಕ್ಷಿತ್

    ರಕ್ಷಿತ್ ಕಳೆದುಕೊಂಡು ಮುಗಿಲು ಮುಟ್ಟಿದ ಆಕ್ರಂದನ

ಚಿಕ್ಕಮಗಳೂರು: ಟ್ರಕ್ಕಿಂಗ್​ಗೆ ಬಂದಿದ್ದ ಪ್ರವಾಸಿಗರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುದುರೆಮುಖ ಅರಣ್ಯ ವ್ಯಾಪ್ತಿಯ ನೇತ್ರಾವತಿ ಬೆಟ್ಟದ ಬಳಿ ನಡೆದಿದೆ. ಮೃತನನ್ನು ಮೈಸೂರು ಮೂಲದ 27 ವರ್ಷದ ರಕ್ಷಿತ್ ಎಂದು ಗುರುತಿಸಲಾಗಿದೆ. ಮೃತ ರಕ್ಷಿತ್ ತನ್ನ 7 ಜನ ಸ್ನೇಹಿತರೊಂದಿಗೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದರು.

ಕುದುರೆಮುಖ ಅರಣ್ಯ ವ್ಯಾಪ್ತಿಯ ನೇತ್ರಾವತಿ ಪೀಕ್​ಗೆ ಚಾರಣಕ್ಕೆಂದು ಹೋಗುತ್ತಿದ್ದರು. ಆದರೆ, ಮಾರ್ಗ ಮಧ್ಯೆ ರಕ್ಷಿತ್​ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಳಸ ಪೊಲೀಸರು ಗುಡ್ಡದ ತುದಿಯಿಂದ ಮೃತದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಕ್ಕಿಂಗ್​ಗೆ ಬಂದಿದ್ದ ಮೈಸೂರು ಮೂಲದ ಪ್ರವಾಸಿಗ ಚಿಕ್ಕಮಗಳೂರಲ್ಲಿ ಹಠಾತ್ ಸಾವು -ಕಾರಣ..?

https://newsfirstlive.com/wp-content/uploads/2023/07/CKM_HEART_ATTACK.jpg

Load More