newsfirstkannada.com

ಪಾಪಿ ಮಗನಿಂದ ತಂದೆ, ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ.. ತಂದೆ ಸಾವು, ತಾಯಿ ಗಂಭೀರ

Share :

14-08-2023

  12‌ ಲಕ್ಷ ರೂಪಾಯಿ ಹಣಕಾಸಿನ ವಿಚಾರ ಕೊಲೆಯಲ್ಲಿ ಅಂತ್ಯ

  ತಂದೆ ಸಾವು, ಮಂಗಳೂರು ಆಸ್ಪತ್ರೆಯಲ್ಲಿ ತಾಯಿಗೆ ಚಿಕಿತ್ಸೆ..!

  ಆಸ್ತಿ ಮಾರಾಟದ ಮಧ್ಯವರ್ತಿಯ ಕೊಲೆ ಮಾಡಿದ ಆರೋಪಿ

ಚಿಕ್ಕಮಗಳೂರು: ಆಸ್ತಿ ಮಾರಾಟದಿಂದ ಬಂದ ಹಣಕಾಸಿನ ವಿಚಾರಕ್ಕೆ ತನ್ನ ತಂದೆ, ತಾಯಿ ಮೇಲೆ ಮಗ ಮಚ್ಚಿನಿಂದ ಹಲ್ಲೆ ಮಾಡಿದ್ದು ತಂದೆ ಸಾವನ್ನಪ್ಪಿ, ತಾಯಿ ಸ್ಥಿತಿ ಗಂಭೀರವಾಗಿದೆ. ಇದೇ ವೇಳೆ ಮಧ್ಯವರ್ತಿ ಮೇಲೂ ಹಲ್ಲೆ ಮಾಡಿ ಆರೋಪಿ ಹತ್ಯೆಗೈದಿದ್ದಾನೆ. ಈ ಘಟನೆಯು ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ನಡೆದಿದೆ.

ತಂದೆ ಭಾಸ್ಕರ್ ಗೌಡ, ಆಸ್ತಿ ಮಾರಾಟದ ಮಧ್ಯವರ್ತಿ ಕಾರ್ತಿಕ್ (45) ಕೊಲೆಯಾದವರು. ತಾಯಿ ಮೇಲೂ ಹಲ್ಲೆ ಮಾಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಸಂತೋಷ್​ ಇಬ್ಬರನ್ನು ಕೊಲೆ ಹಾಗೂ ತಾಯಿ ಮೇಲೆ ಹಲ್ಲೆ ಮಾಡಿ ನೇರವಾಗಿ ಠಾಣೆಗೆ ಹೋಗಿದ್ದಾನೆ. ತಂದೆ-ತಾಯಿ ಹಾಗೂ ಜಮೀನು ಮಾರಾಟ ಮಾಡಲು ಮಧ್ಯಸ್ಥಿಕೆ ವಹಿಸಿದ್ದ ಮಧ್ಯವರ್ತಿ ಮೇಲೆ ಹಣಕಾಸಿನ ಬಗ್ಗೆ ಸಂಬಂಧಿಸಿದಂತೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಂದೆ, ಮಧ್ಯವರ್ತಿ ಮೃತಪಟ್ಟರೇ, ತಾಯಿ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಂತೋಷ್​ಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್​ ಮಧ್ಯಸ್ಥಿಕೆ ವಹಿಸಿದ್ದನು. ಇದರಿಂದ 12 ಲಕ್ಷ ರೂಪಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಹತ್ಯೆ ಬಳಿಕ ಆರೋಪಿ ನೇರ ಠಾಣೆಗೆ ಹೋಗಿದ್ದಾನೆ. ಬಾಳೂರು‌ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಪಿ ಮಗನಿಂದ ತಂದೆ, ತಾಯಿ ಮೇಲೆ ಮಾರಾಣಾಂತಿಕ ಹಲ್ಲೆ.. ತಂದೆ ಸಾವು, ತಾಯಿ ಗಂಭೀರ

https://newsfirstlive.com/wp-content/uploads/2023/08/CKM-_MONEY_-MURDER_1.jpg

Load More