newsfirstkannada.com

ಗೃಹಲಕ್ಷ್ಮೀ ಯೋಜನೆ.. 100 ರೂಪಾಯಿ ಲಂಚ ಪಡೆದ ಆರೋಪ.. ಗ್ರಾಮ ಒನ್ ಕಚೇರಿ ‘ಲಾಕ್’..!

Share :

30-07-2023

    ಗೃಹಲಕ್ಷ್ಮೀ ಯೋಜನೆ ಅರ್ಜಿ ಸ್ವೀಕಾರದ ವೇಳೆ ಲಂಚ ಸ್ವಾಹಃ

    ಎಷ್ಟೇ ಎಚ್ಚರಿಕೆ ಕೊಟ್ಟರೂ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ

    ಕಂಪ್ಯೂಟರ್ ಆಪರೇಟರ್ ವಿರುದ್ಧ ಎಫ್ಐಆರ್ ದಾಖಲು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿನ ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಅರ್ಜಿ ನೊಂದಣಿಗೆ ಅಜೀತ್ ಇದ್ಲಿಯು, ಸುಶೀಲಾ ಕಾಂಬಳೆ ಎಂಬುವವರ ಬಳಿ 100 ರೂಪಾಯಿ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೂರು ಬಂದ ಹಿನ್ನೆಲೆ, ಸ್ಥಳಕ್ಕೆ ರೆವಿನ್ಯೂ ಇನ್ಸ್‌ಪೆಕ್ಟರ್ ಭೇಟಿ ನೀಡಿದ್ದು, ಗ್ರಾಮ ಒನ್ ಕೇಂದ್ರದ ಲಾಗ್‌ಇನ್ ಐಡಿ ರದ್ದು ಮಾಡಲಾಗಿದೆ.

ಜೊತೆಗೆ ಕೇಂದ್ರವನ್ನು ಸೀಜ್ ಮಾಡಿ ಸಿಬ್ಬಂದಿ ಅಜೀತ್ ಇದ್ಲಿ ವಿರುದ್ಧ ಕುಡಚಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಅಜೀತ್ ಇದ್ಲಿ ವಿರುದ್ಧ ಐಪಿಸಿ ಸೆಕ್ಷನ್ 1860(U/s 406, 420)ರಡಿ ಪ್ರಕರಣ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮೀ ಯೋಜನೆ.. 100 ರೂಪಾಯಿ ಲಂಚ ಪಡೆದ ಆರೋಪ.. ಗ್ರಾಮ ಒನ್ ಕಚೇರಿ ‘ಲಾಕ್’..!

https://newsfirstlive.com/wp-content/uploads/2023/07/LAXMI-3.jpg

Load More