ಸಿಲಿಕಾನ್ಸಿಟಿಯಲ್ಲೂ ಸುರಿದ ಮಳೆ, ಹಲವು ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ
ಮಲೆನಾಡು ನಗರದಲ್ಲಿ ಭಾರೀ ಮಳೆ, ಮುಳುಗಡೆಯಾದ ಕಾರು, ಬೈಕ್
ಮಳೆಗಾಗಿ ಕತ್ತೆಗಳ ಮದುವೆ, ಭಜಂತ್ರಿಯೊಂದಿಗೆ ಅಬ್ಬರದ ಮೆರವಣಿಗೆ
ಬಿರು ಬಿಸಿಲಿಗೆ ಬೆಂದು ಹೋಗುತ್ತಿದ್ದ ಕರುನಾಡಿನ ಮೇಲೆ ಮಳೆರಾಯ ಕರುಣೆ ತೋರಿ ತಂಪೆರೆದಿದ್ದಾನೆ. ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಆರಂಭವಾಗಿದೆ. ವರುಣ ದೇವನ ಅಬ್ಬರವೂ ಜೋರಾಗಿದೆ. ಹವಾಮಾನ ಇಲಾಖೆ ಮಾತ್ರ ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲೂ ಭರ್ಜರಿ ಮಳೆಯಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಇದೇ ಮೊದಲ ಸಲ ಗುಡುಗು ಸಹಿತ ಮಳೆಯಾಗಿದ್ದು, ನಗರದ ಹಲವೆಡೆ ರಸ್ತೆಗಳೇ ಕಾಣದಂತೆ ಮಳೆ ನೀರು ತುಂಬಿ ಹರಿಯುತ್ತಿತ್ತು. ಭಾರೀ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತ ವಾಗಿತ್ತು. ರಸ್ತೆ ಪಕ್ಕ ನಿಂತ ಬೈಕ್, ಕಾರುಗಳು ಮಳೆ ನೀರಿನಿಂದ ಮುಳುಗಡೆ ಆಗಿದ್ದವು. ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿ ಎಲ್ಲೆಡೆ ಮಳೆ ನೀರು ಹರಿದಾಡಿತ್ತು.
ಹಾಸನ, ಬೆಂಗಳೂರಿನಲ್ಲೂ ಮಳೆರಾಯ ಸಿಂಚನ..!
ಹಾಸನದಲ್ಲಿ ಭಾರೀ ಮಳೆ ಸುರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಒಂದೇ ದಿನದ ಮಳೆಗೆ ಹೊಯ್ಸಳ ನಗರದಲ್ಲಿ ರಸ್ತೆ ತುಂಬೆಲ್ಲ ಮಳೆನೀರು ಆವರಿಸಿದ್ದು, ಹಲವು ವಾಹನಗಳು ಮುಳುಗಡೆಯಾಗಿ ಜನ ಪರದಾಡಿದರು. ಇನ್ನು, ಸಿಲಿಕಾನ್ ಸಿಟಿಯೂ, ಭಾರೀ ಮಳೆಗೆ ಸಾಕ್ಷಿಯಾಗಿತ್ತು. ಹಲವು ಕಡೆ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು
ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದಲ್ಲೂ ವರುಣನ ಆರ್ಭಟ ಜೋರಾಗಿತ್ತು. ಸತತ ಒಂದು ಗಂಟೆ ಕಾಲ ಸುರಿದ ಮಳೆಗೆ ಅವಾಂತರಗಳೇ ಸೃಷ್ಟಿಯಾಗಿತ್ತು. ಬೈಕ್ಗಳು ನೀರಿನಲ್ಲಿ ಮುಳುಗಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಗಡಿ ಜಿಲ್ಲೆ ಚಾಮರಾಜನಗರದಲ್ಲು ತಂಪೆರೆದ ವರುಣ
ಗಡಿಜಿಲ್ಲೆಯಲ್ಲಿ ಕರುಣೆ ತೋರಿದ ವರುಣರಾಯ ಚಾಮರಾಜನಗರದಲ್ಲೂ ಭರ್ಜರಿ ದರ್ಶನ ತೋರಿದ್ದಾನೆ. ಕೃಷಿ ಚಟುವಟಿಕೆಗೆ ಬೇಕಿದ್ದ ಮಳೆ ಸುರಿದಿದ್ದು, ಮಳೆ ಕೊರತೆಯಿಂದ ಒಣಗುವ ಆತಂಕದಲ್ಲಿದ್ದ ಬೆಳೆಗಳಿಗೆ ಪುಷ್ಟಿ ಸಿಕ್ಕಂತಾಗಿದೆ.
ಅಥಣಿಯಲ್ಲಿ ಕತ್ತೆಗಳ ಮದುವೆ, ವರ್ಷಧಾರೆಗೆ ಮೊರೆ
ಇತ್ತ ಬೆಳಗಾವಿಯಲ್ಲಿ ಮಳೆ ಅಭಾವ ಸೃಷ್ಠಿಯಾಗಿರುವ ಬೆನ್ನಲ್ಲೆ ಮಳೆಗಾಗಿ ಪ್ರಾರ್ಥಿಸಿ ಅಥಣಿ ಗ್ರಾಮೀಣ ಭಾಗದ ಗಣೇಶ ನಗರದ ನಿವಾಸಿಗಳೆಲ್ಲ ಸೇರಿ ಮಳೆರಾಯನಿಗಾಗಿ ಕತ್ತೆಗಳ ಮದುವೆ ಮಾಡಿ ವರ್ಷಧಾರೆಗಾಗಿ ಮೊರೆಯಿಟ್ಟಿರುವ ಪ್ರಸಂಗ ನಡೆದಿದೆ. ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ’ ಎಂದು ಮದುವೆ ಮಂತ್ರ ಹೇಳಿ. ಜನರೆಲ್ಲ ಅಕ್ಷತೆ ಹಾಕಿ, ಮುತ್ತೈದೆಯರು ಸೋಬಾನೆ ಹಾಡು ಹೇಳಿ, ಆರತಿ ಮಾಡಿ ಹರಿಸಿದರು. ಬಾಜಾ ಭಜಂತ್ರಿ, ಡಿಜೆ ಸೌಂಡಿನೊಂದಿಗೆ ಅಬ್ಬರದಿಂದ ಮೆರವಣಿಗೆ ಮಾಡಲಾಯಿತು.
ಕೋಲಾರ ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದ್ದು, ಶ್ರೀನಿವಾಸಪುರ ಮತ್ತು ಚಿಂತಾಮಣಿಯ ಮುಖ್ಯರಸ್ತೆಯ ಅಂಡರ್ ಪಾಸ್ನಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದ್ದಾರೆ. ಮುಂಗಾರು ಕೈ ಕೊಟ್ಟಿದೆ ಎಂದು ಕಂಗೆಟ್ಟಿದ್ದ ಚಿಕ್ಕಬಳ್ಳಾಪುರದ ರೈತರ ಮೊಗದಲ್ಲಿ, ಮಳೆಯ ಅಬ್ಬರ ಮಂದಹಾಸ ಮೂಡಿಸಿದೆ.
ಸದ್ಯದ ಮಳೆಗೆ ಅನ್ನದಾತರು ಫುಲ್ ಖುಷ್ ಆಗಿದ್ದಾರೆ. ಬಿಸಿಲ ಶಾಖದಿಂದ ಜನರಿಗೆ ಮುಕ್ತಿ ಸಿಕ್ಕಿದ್ದು. ಜನ ವರುಣ ದೇವನಿಗೆ ಮೊದಲ ದಿನ ಥ್ಯಾಂಕ್ಸ್ ಹೇಳ್ತಾ ಇದ್ದಾರೆ. ಆದ್ರೆ ವರುಣನ ಆಟ ಇಷ್ಟಕ್ಕೆ ಮುಗ್ದಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಬಂದಿರುವ ಕಾರಣ ಇನ್ನೂ 5 ದಿನ ಮಳೆ ಇರಲಿದೆ ಅನ್ನೋದು ಹವಾಮಾನ ಇಲಾಖೆ ಎಚ್ಚರಿಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳಗಾವಿಯ ಅಥಣಿಯ ಗಣೇಶ ನಗರದಲ್ಲಿ ಅದ್ಧೂರಿಯಾಗಿ ಕತ್ತೆಗಳ ಮದುವೆ ಮಾಡಲಾಯ್ತು. ಸ್ವಾಮೀಜಿಯೊಬ್ಬರರು ಮಾಂಗಲ್ಯಂ ತಂತು ನಾನೇನಾ..ಅಂತ ಕತ್ತೆಗಳ ಕಲ್ಯಾಣಕ್ಕೆ ಮಂತ್ರ ಪಠಣೆಯನ್ನೂ ಮಾಡಿದ್ರು. ಬಳಿಕ ಬಾಜಾ ಭಜಂತ್ರಿ, ಡಿಜೆ ಸೌಂಡಿನೊಂದಿಗೆ ಕತ್ತೆಗಳನ್ನ ಊರೆಲ್ಲಾ ಮೆರವಣಿಗೆ ಮಾಡಲಾಯ್ತು. ಹೀಗೆ ಕತ್ತೆ ಮದುವೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ… pic.twitter.com/j08rrPdMyS
— NewsFirst Kannada (@NewsFirstKan) June 21, 2023