ಕುಡುಕ ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆಗೆ ನಿರ್ಧಾರ
ಮಕ್ಕಳಿಗೆ ವಿಷ ಕೊಟ್ಟು ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನ
8 ವರ್ಷದ ಮಗಳು ಸತ್ತರು ನೋಡಲು ಆಸ್ಪತ್ರೆಗೆ ಬಾರದ ಪಾಪಿ ತಂದೆ
ಚಾಮರಾಜನಗರ: ಕುಡುಕ ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ 8 ವರ್ಷದ ಮಗಳು ಸಿಂಧು ಸಾವನ್ನಪ್ಪಿದರೆ, ತಾಯಿ ಶೀಲಾ (25) ಮತ್ತು ಪುತ್ರ ಯಶವಂತನ (12) ಸ್ಥಿತಿ ಗಂಭೀರವಾಗಿದೆ.
ಮಾದೇಶ್ ವಿಪರೀತ ಕುಡಿಯುತ್ತಿದ್ದ, ಪ್ರತಿನಿತ್ಯ ಮದ್ಯಸೇವಿಸಿ ಬಂದು ಪತ್ನಿ ಶೀಲಾಗೆ ಕಿರುಕುಳ ನೀಡುತ್ತಿದ್ದ. ನಿನ್ನೆ ರಾತ್ರಿ ಕೂಡ ಗಂಡ ಹೆಂಡತಿ ಮಧ್ಯೆ ಜಗಳ ಆಗಿತ್ತು. ಇದರಿಂದ ಮನನೊಂದ ಶೀಲಾ ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನು ಕುಡಿದಿದ್ದಾಳೆ.
ಅತ್ತ ಸಾವಿಗೀಡಾದ ಪುತ್ರಿ ಮರಣ ಹೊಂದಿದರು, ಪುತ್ರ, ಪತ್ನಿ ಗಂಭೀರವಾಗಿದ್ದರು ಪಾಪಿ ತಂದೆ ಮಾದೇಶ್ ಆಸ್ಪತ್ರೆ ಬಂದಿಲ್ಲ. ಹೀಗಾಗಿ ಮಾದೇಶ್ ವಿರುದ್ದ ಶೀಲಾ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಶೀಲಾ ಮತ್ತು ಪುತ್ರ ಯಶ್ವಂತ್ ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ