ವಿದ್ಯಾಭ್ಯಾಸ ಅನುಭವವನ್ನು ಹೆಚ್ಚಿಸಲು BEL ಶಾಲೆಯಲ್ಲಿ ಹೊಸ ಪ್ರಯತ್ನ
ವಾಸ್ತವತೆಯನ್ನು ಕಣ್ಮುಂದೆ ತರುವಂತಹ ಶಾಲಾ ಮಕ್ಕಳ ನಾಟಕ ಪ್ರದರ್ಶನ
ಆಕರ್ಷಕವಾದ ಉಡುಗೆ-ತೊಡುಗೆಗಳು ತೊಟ್ಟ ಕಂಗೊಳಿಸಿದ ವಿದ್ಯಾರ್ಥಿಗಳು
ಬೆಂಗಳೂರು: ಗೌತಮ ಬುದ್ಧನ ಅಂಧಕಾರದಿಂದ ನಿರ್ವಾಣಕ್ಕೆ ಪಯಣ ಎಂಬ ಶೀರ್ಷಿಕೆಯಲ್ಲಿ ಎಂದೂ ಮರೆಯಲಾಗದಂತ ಅಸಾಧಾರಣವಾದ ಈ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರಧಾನ ಅಧಿಕಾರಿ, ಭಾರತ್ ಎಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆಗಳ ಸಚಿವ ಶ್ರೀ. ನರಸಿಂಹ ಕುಮಾರ್ ಈ ಕುರಿತು ಮಾತಾಡಿದ್ದಾರೆ. ಮಕ್ಕಳ ಶಿಕ್ಷಣದ ಅಭಿವೃದ್ಧಿಗೊಳಿಸಲು ಶಾಲೆಯನ್ನು ಅವರ ವಶಕ್ಕೆ ಕೊಟ್ಟು ಸಂತೋಷವನ್ನು ವ್ಯಕ್ತಪಡಿಸಿದರು. ವಿದ್ಯಾಭ್ಯಾಸ ಅನುಭವವನ್ನು ಹೆಚ್ಚಿಸಲು ನಡೆಸುತ್ತಿರುವ ಹೊಸ ಪ್ರಯತ್ನಗಳ ಕ್ರಿಯೆಗಳನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಗೌರವ ಅಧ್ಯಕ್ಷರಾದ ಡಾ. ಅಲಿಖ್ವಾಜಾರವರು ಮಕ್ಕಳು ಕಲಿಕೆಯನ್ನು ಹಾಗೂ ಚಟುವಟಿಕೆಗಳ ಮೂಲಕ ಅನುಭವದ ಮೌಲ್ಯಗಳನ್ನು ಕಲಿಯುತ್ತಿದ್ದಾರೆ. ಇದು ಅವರ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಬಿ.ಇ.ಎಲ್. ಆಂಗ್ಲ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಮಿಸ್. ಸ್ವಾತಿ ಕದಂಬಿಯವರು, ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿ, ಎಲ್ಲ ಉಪಸ್ಥಿತರಲ್ಲಿ ಗೌರವವನ್ನು ಉಂಟುಮಾಡುವ ಉತ್ಸಾಹಭರಿತ ಭಾಷಣವನ್ನು ಮಾಡಿದರು. ನಂತರ ಅನನ್ಯ ನಾಟಕವು 11 ಭಾಗಗಳಲ್ಲಿ ವಿಭಾಗಗೊಂಡ ಮನೋಹರವಾದ ಚಿತ್ರಣ. ಮೊದಲ ಐದು ಭಾಗಗಳು ಸಿದ್ಧಾರ್ಥನ ಹಿನ್ನೆಲೆಯನ್ನು ಚಿತ್ರಿಸಿದ್ದವು. ಅನಂತರದ ಆರು ಭಾಗಗಳು ಅವನ ಅದ್ವಿತೀಯ ಗೌತಮ ಬುದ್ಧನಾಗುವಿಕೆ ವಿವರಿಸಿದ್ದವು. ಕೊನೆಗೆ ಅವನ ನಿರ್ವಾಣವನ್ನು ಪ್ರತಿಬಿಂಬಿಸಿತು. ಈ ನಾಟಕವು ಪ್ರೇಕ್ಷಕ ಬಂಧುಗಳನ್ನು ಸಮಾರು. ಕ್ರಿಸ್ತಪೂರ್ವ 400ರ ಪ್ರಾಚೀನ ಯುಗಕ್ಕೆ ಕೊಂಡೊಯ್ದಿತು. ಈ ಪ್ರದರ್ಶನಗಳು ವಾಸ್ತವತೆಯನ್ನು ಕಣ್ಮುಂದೆ ತರುವಂತಹ ಆನಂದದಾಯಕವಾಗಿತ್ತು.
ಮನೋಹರವಾದ ಸಂವಾದಗಳು, ಆಕರ್ಷಕವಾದ ಸಾಂಪ್ರದಾಯಿಕ ಉಡುಗೆ -ತೊಡುಗೆಗಳು ಜೊತೆಗೆ ಸಂಗೀತದ ಮೆರಗು ಮತ್ತು ಅದ್ವಿತೀಯ ಪೀಠೋಪಕರಣಗಳ ಅಲಂಕರಣ, ಸೌಂದರ್ಯಪೂರ್ಣವಾಗಿ ಕಟ್ಟಲಾದ ನಾಟಕಕ್ಕೆ ನಾಯಕರಾಗಿದ್ದ ಪ್ರತಿ ನಟರು ಕಥೆಯು ಕಣ್ಮುಂದೆ ನೈಜವಾಗಿ ನಡೆಯುತ್ತಿದೆ ಎಂಬುವಂತೆ ತಮ್ಮ ಚಿತ್ರದ ನಟನಾ ಕಲೆಯನ್ನು ಪ್ರದರ್ಶಿಸಿದರು. ಈ ವಾರ್ಷಿಕೋತ್ಸವದ ನಾಟಕ ಪ್ರದರ್ಶನದಲ್ಲಿ ಕಂಡು ಬಂದ ಪ್ರತಿಯೊಂದು ವಿಷಯವು ನಮ್ಮ ಸನಾತನ ಕಾಲದ ಇತಿಹಾಸ, “ಆಸೆಯೇ ದುಃಖಕ್ಕೆ ಮೂಲ ಕಾರಣ”, “ಮನುಷ್ಯ ಹುಟ್ಟುವಾಗಲು ಖಾಲಿ ಕೈ ಹೋಗುವಾಗಲೂ ಖಾಲಿ ಕೈ ಯಲ್ಲೇ ಹೋಗುತ್ತಾನೆ” ಎಂಬುವಂತ ಅತ್ಯುತ್ತಮವಾದ ವಾಸ್ತವತೆಯ ಸಂದೇಶವನ್ನು ಸಾರುವ ವೈವಿಧ್ಯಮಯ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ