25 ವರ್ಷಕ್ಕಿಂತ ಕಡಿಮೆ ಇರೋ ಯುವತಿಯರ ಮದುವೆಯಾದ್ರೆ ಮಾತ್ರ
ಮದುವೆಯಾಗೋ ನವಜೋಡಿಗೆ ನಗದು ಬಹುಮಾನ ಘೋಷಣೆ
ಯುವ ಸಮೂಹಕ್ಕಾಗಿಯೇ ಹೊಸ ಯೋಜನೆ ಜಾರಿಗೆ ತಂದ ಸರ್ಕಾರ
ಬೀಜಿಂಗ್: ಮದುವೆಯಾಗೋ ನವ ಜೋಡಿಗೆ ಚೀನಾ ಸರ್ಕಾರ ಬಂಪರ್ ಆಫರ್ ಒಂದನ್ನ ಘೋಷಣೆ ಮಾಡಿದೆ. ಆದ್ರೆ ವಧುವಿನ ವಯಸ್ಸು 25 ಅಥವಾ ಅದಕ್ಕಿಂತ ಕೆಳಗಿರಬೇಕು. 25 ವರ್ಷಕ್ಕಿಂತ ಕಡಿಮೆ ಇರುವ ಯುವತಿಯರನ್ನು ಮದುವೆಯಾದರೆ ಮಾತ್ರ ಈ ಆಫರ್ ಯುವಕರಿಗೆ ದಕ್ಕುತ್ತದೆ. 25 ವರ್ಷಕ್ಕಿಂತ ಕಡಿಮೆ ಇರೋ ಯುವತಿಯರ ಮದುವೆಯಾದ್ರೆ ಅಂತಹ ಯುವಕರಿಗೆ ಸರ್ಕಾರವೇ 1,000 ಯುವಾನ್ ಅಂದ್ರೆ ಭಾರತದ ಲೆಕ್ಕದಲ್ಲಿ ಹೇಳುವುದಾದರೆ 11,321 ರೂಪಾಯಿಯನ್ನು ನೀಡುವುದಾಗಿ ಹೇಳಿದೆ.
ಚೀನಾದ ಕಾನೂನುಬದ್ಧ ವಿವಾಹದ ವಯಸ್ಸಿನ ಮಿತಿಯು ಪುರುಷರಿಗೆ 22 ಮತ್ತು ಮಹಿಳೆಯರಿಗೆ 20 ಆಗಿದೆ. ಆದರೆ ಇತ್ತೀಚೆಗೆ ಮದುವೆಯಾಗುವ ಸಂಖ್ಯೆಯು ಕಾಲ ಕ್ರಮೇಣ ಕುಸಿಯುತ್ತಿದೆ. ಇದು ಚೀನಾದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ. 2022ರಲ್ಲಿ ಚೀನಾದಲ್ಲಿ ಮದುವೆಯಾದವರ ಸಂಖ್ಯೆ 6.8 ಮಿಲಿಯನ್ ಇತ್ತು. 1986ರಿಂದ ಈವರೆಗೆ ಇದು ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. 2021ಕ್ಕೆ ಹೋಲಿಸಿದರೆ ಬರೋಬ್ಬರಿ 8,00,000 ಕಡಿಮೆಯಾಗಿದೆ. ಜೊತೆಗೆ ಈ ಅಧಿಕೃತ ನೀತಿಗಳಿಂದಾಗಿ ಒಂಟಿ ಮಹಿಳೆಯರಿಗೆ ಮಕ್ಕಳನ್ನು ಹೇರಲು ಕಷ್ಟಕರವಾಗಿದೆ. ಹೀಗಾಗಿ ಚೀನಾ ಸರ್ಕಾರ ಯುವ ಸಮೂಹವನ್ನು ಮದುವೆಯಾಗಲು ಪ್ರೇರೇಪಿಸುತ್ತಿದೆ. ಅದಕ್ಕಾಗಿ ಹೊಸದೊಂದು ನೀತಿಯನ್ನು ಜಾರಿಗೆ ತರಲಾಗಿದೆ.
ಜನನ ಪ್ರಮಾಣದಲ್ಲಿ ಬದಲಾವಣೆ ಮಾಡಲು ಚೀನಾ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. 25 ವರ್ಷಕ್ಕಿಂತ ಕಡಿಮೆ ಇರುವ ಯುವತಿಯರನ್ನು ಮದುವೆಯಾದರೆ ಸರ್ಕಾರವೇ 1,000 ಯುವಾನ್ ಅಂದ್ರೆ ಭಾರತದ ಲೆಕ್ಕದಲ್ಲಿ ಹೇಳುವುದಾದರೆ 11,321 ರೂಪಾಯಿ ಉಡುಗೊರೆಯಾಗಿ ನೀಡುತ್ತದೆ. ಇದರ ಜೊತೆಗೆ ಈ ಯೋಜನೆ ಕೇವಲ 11,321 ರೂಪಾಯಿಗೆ ಮಾತ್ರ ಸೀಮಿತವಾಗಿಲ್ಲ. ಈ ಜೋಡಿ ಸರಿಯಾದ ಸಮಯಕ್ಕೆ ಮಗು ಮಾಡಿಕೊಂಡರೆ ಆ ಮಗುವಿನ ಆರೈಕೆ, ಶಿಕ್ಷಣ ಸೇರಿದಂತೆ ಇತರೆ ಖರ್ಚು ವೆಚ್ಚಗಳಲ್ಲೂ ಸರ್ಕಾರ ಸಬ್ಸಿಡಿ ನೀಡಲಿದೆ. ಕುಟುಂಬ ಹಾಗೂ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಜನನ ಪ್ರಮಾಣ ಉತ್ತೇಜಿಸಲು ಚೀನಾ ಸರ್ಕಾರ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ