newsfirstkannada.com

ಚೀನಾಗೆ ಅಪ್ಪಳಿಸಿದ ಡೊಕ್ಸುರಿ ಸೈಕ್ಲೋನ್; ರಕ್ಕಸ ಮಳೆಗೆ 30ಕ್ಕೂ ಹೆಚ್ಚು ಜನರು ಬಲಿ

Share :

31-07-2023

  ಬೀಜಿಂಗ್​ಗೆ ಅಪ್ಪಳಿಸದ ಭಾರೀ ಚಂಡಮಾರುತ

  20,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ

  3 ವಾರಗಳಲ್ಲಿ ಮೂರನೇ ಚಂಡಮಾರುತದ ಬಗ್ಗೆ ಎಚ್ಚರಿಕೆ

ವರುಣ ದೇವ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶದಾಟಿ ಪಕ್ಕದ ದೇಶದ ಮೇಲೂ ತನ್ನ ಕೆಂಗಣ್ಣು ಇಟ್ಟಿದ್ದಾನೆ. ತತ್ತರ, ಅವಾಂತರ, ಹಾಹಾಕಾರ, ಸೃಷ್ಟಿಸಿದ್ದಾನೆ, ಸದ್ಯ ಚೀನಾದಲ್ಲೂ ವರುಣದೇವನ ಮಹಾನರ್ತನ ಮುಂದುವರಿದಿದೆ.

ವರುಣ ದೇವ ತನ್ನ ಮಳೆಯ ಮೃದಂಗ ಭಾರಿಸುತ್ತಾ ಸಿಕ್ಕ ಸಿಕ್ಕ ಚೀನೀಯರನ್ನ ತುಳೀಯುತ್ತಾ, ಜನ ಜೀವವನ್ನ ಅಸ್ತವ್ಯಸ್ತಮಾಡಿದ್ದಾನೆ. ನಿನ್ನೆ ಒಂದೇ ದಿನ ಚೀನಾದ ರಾಜಧಾನಿ ಬೀಜಿಂಗ್​​ಗೆ ಭಾರೀ ಡೊಕ್ಸುರಿ ಚಂಡಮಾರುತವು ಅಪ್ಪಳಿಸಿದೆ. ಚಂಡಮಾರುತ ಅಪ್ಪಳಿಸಿದ ಪರಿಣಾಮ ಭಾರೀ ಮಳೆಯಾಗುತ್ತಿದ್ದು, ಡ್ರ್ಯಾಗನ್ ದೇಶ ತತ್ತರಿಸಿ ಹೋಗಿದೆ.

ಚೀನಾದಲ್ಲಿ ರಣಭೀಕರ ಮಳೆ.. 30ಕ್ಕೂ ಹೆಚ್ಚು ಜನ ಬಲಿ

ಫಿಲಿಪೈನ್ಸ್​​ಗೆ ಅಪ್ಪಳಿಸಿದ್ದ ಡೊಕ್ಸುರಿ ಸೈಕ್ಲೋನ್ ಚೀನಾದಲ್ಲೂ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಮೊನ್ನೆ ದಕ್ಷಿಣ ಫುಜಿಯಾನ್ ಪ್ರಾಂತ್ಯ ಪ್ರವೇಶಿಸಿತ್ತು. ಇದೀಗ ಉತ್ತರ ಚೀನಾದ ರಾಜಧಾನಿ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಪ್ರಕರಣಗಳು ಅಜಾನುಭಾಹು ಬರ ಸಿಡಿಲಿನ ವೇಗಕ್ಕೆ ಬೀಜಿಂಗ್ ಹೊರತುಪಡಿಸಿ ಹೆಬೈ ರಾಜಧಾನಿ ಶಿಜಿಯಾಜುವಾಂಗ್‌ನ ಭಾಗಗಳಿಂದ 20,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಚೀನಾ ದೇಶದ ಸರ್ಕಾರ ತಿಳಿಸಿದೆ.

ಫುಜಿಯಾನ್ನಲ್ಲಿ ಭಾರೀ ಮಳೆ, ಜನ ಜೀವನ ಅಸ್ತವ್ಯಸ್ತ

ಇನ್ನೂ ಡೊಕ್ಸುರಿ ಸೈಕ್ಲೋನ್ ಚೀನಾಗೆ ಬೃಹತ್ ಅಲೆಗಳನ್ನು ತಂದಿತು ಮತ್ತು ಗಂಟೆಗೆ 175 ಕಿಲೋಮೀಟರ್‌ಗಳಷ್ಟು ಆಗ್ನೇಯಕ್ಕೆ ಗಾಳಿಯನ್ನು ತಂದಿತು, ಇದು ಗಮನಾರ್ಹ ಹಾನಿಯನ್ನುಂಟುಮಾಡಿತು.

ಚೀನಾದ ಹವಾಮಾನ ಇಲಾಖೆ ಅಧಿಕಾರಿಗಳು ಖಾನುನ್ ಎಂಬ ಹೆಸರಿನ ಮತ್ತೊಂದು ಚಂಡಮಾರುತದ ಸಮೀಪಿಸುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಶೀಘ್ರವಾಗಿ ಬಲವನ್ನು ಪಡೆದುಕೊಳ್ಳುತ್ತದೆ ಮತ್ತು ಮುಂದಿನ ವಾರ ಚೀನಾದ ಜನನಿಬಿಡ ಕರಾವಳಿಯನ್ನು ಅಪ್ಪಳಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ ಡೊಕ್ಸುರಿಯು ಚಂಡಮಾರುತದಿಂದ ಡೌನ್‌ಗ್ರೇಡ್ ಆಗಿದ್ದರೆ, ಚೀನಾದ ಹವಾಮಾನ ಸಂಸ್ಥೆ ಉಷ್ಣವಲಯದ ಚಂಡಮಾರುತದ ಸ್ಥಿತಿಯಿಂದ ಖಾನುನ್ ಅನ್ನು ಟೈಫೂನ್‌ಗೆ ನವೀಕರಿಸಿದೆ.

ಅನಗತ್ಯವಾಗಿ ಮನೆಯಿಂದ ಹೊರ ಬಾರದಂತೆ ಸರ್ಕಾರ ಸೂಚನೆ

2011 ರ ನಂತರ ಇದೇ ಮೊದಲ ಬಾರಿಗೆ ಇಂತಹ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಗ್ರಂಥಾಲಯಗಳು ಮತ್ತು ವಸ್ತುಸಂಗ್ರಹಾಲಯಗಳು ಸೇರಿದಂತೆ ಬೀಜಿಂಗ್​ನಲ್ಲಿನ ಅನೇಕ ಜನಪ್ರಿಯ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಬೇಸಿಗೆಯಲ್ಲಿ ಚೀನಾವು ದಾಖಲೆಯ ತಾಪಮಾನ ಏರಿಕೆಗೆ ಸಾಕ್ಷಿಯಾಗಿತ್ತು. ಇದೀಗ ಚಂಡಮಾರುತವು ಭಾರೀ ಮಳೆ-ಪ್ರವಾಹ ಸೃಷ್ಟಿಸಿದೆ. ಗಂಟೆಗೆ 175 ಕಿಲೋ ಮೀಟರ್‌ ವೇಗದಲ್ಲಿ ಚಂಡಮಾರುತ ಉತ್ತರ ಚೀನಾಗೆ ಅಪ್ಪಳಿಸಿದೆ. ಫುಜಿಯಾನ್ ಪ್ರಾಂತ್ಯದಲ್ಲಿ 8,80,000 ಕ್ಕೂ ಹೆಚ್ಚು ಜನರು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದ್ದು, ಅನಗತ್ಯವಾಗಿ ಮನೆಯಿಂದ ಹೊರ ಬರದಂತೆ ಜನರಿಗೆ ಸರ್ಕಾರ ಸೂಚನೆ ನೀಡಿದೆ.

ಒಟ್ಟಾರೆ, ವಿಶ್ವದ ದೊಡಣ್ಣ ಆಗಬೇಕಂತ ಎಲ್ಲಿಲ್ಲದ ಕಸರತ್ತು ಮಾಡ್ತಿರೋ ಚೀನಾ ದೇಶ ಸದ್ಯ ಅವರ ದೇಶದ ಜನರನ್ನ ಪ್ರವಾಹದಿಂದ ಉಳಿಸಿಕೊಳ್ಳಲಿ ಅಂತ ನೆರೆ ರಾಷ್ಟ್ರಗಳು ಮಾತಾಡಿಕೊಳ್ಳುತ್ತಿದ್ದಾವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾಗೆ ಅಪ್ಪಳಿಸಿದ ಡೊಕ್ಸುರಿ ಸೈಕ್ಲೋನ್; ರಕ್ಕಸ ಮಳೆಗೆ 30ಕ್ಕೂ ಹೆಚ್ಚು ಜನರು ಬಲಿ

https://newsfirstlive.com/wp-content/uploads/2023/07/China-Rain.jpg

Load More