ಚೀನಾದ ಮನವಿಗೆ ಭಾರತ ಅಸ್ತು ಎನ್ನುತ್ತಾ?
ಬ್ರಿಕ್ಸ್ ಶೃಂಗಸಭೆಯಲ್ಲಿ ಉಭಯ ನಾಯಕರು ಮುಖಾಮುಖಿ
ಗಲ್ವಾನ್ ಸಂಘರ್ಷದ ಬಳಿಕ 2ನೇ ಬಾರಿಗೆ ನಾಯಕರ ಭೇಟಿ
BRICS Summit: ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಭೇಟಿ ವಿಚಾರ ಮುನ್ನಲೆಗೆ ಬಂದಿದೆ. ಚೀನಾ-ಭಾರತದ ಜೊತೆ ಮಾತುಕತೆಗೆ ಒಲವು ತೋರಿಸಿದ್ದು, ಮೋದಿಯೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲು ಮನವಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಶಿ ಜಿನ್‌ಪಿಂಗ್ ಅವರೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸುವಂತೆ ಚೀನಾ ನಿಯೋಗ ಮೋದಿಗೆ ಮನವಿ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಇಬ್ಬರ ನಡುವೆ ಅನೌಪಚಾರಿಕ ಮಾತುಕತೆ ನಡೆದಿದೆ. ವರದಿಗಳ ಪ್ರಕಾರ, ಚೀನಾದ ಕಡೆಯಿಂದ ದ್ವಿಪಕ್ಷೀಯ ಸಭೆಗೆ ಮನವಿ ಮಾಡಲಾಗಿದೆ. ಆದಾಗ್ಯೂ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ‘ಲೀಡರ್ಸ್ ಲಾಂಜ್’ನಲ್ಲಿ ಮೋದಿ ಮತ್ತು ಶಿ ಜಿನ್‌ಪಿಂಗ್ ನಡುವೆ ಅನೌಪಚಾರಿಕ ಸಂಭಾಷಣೆ ನಡೆದಿದೆ.
ಎರಡು ವಾರಗಳ ಬಳಿಕ ದೆಹಲಿಯಲ್ಲಿ ಜಿ-20 ಸಭೆ
ನವದೆಹಲಿಯಲ್ಲಿ ನಡೆಯಲಿರುವ ಜಿ-20 ಸಭೆಗೆ ಇನ್ನೆರಡು ವಾರಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಜಿನ್‌ಪಿಂಗ್ ಔಪಚಾರಿಕ ಮಾತುಕತೆ ಮಹತ್ವ ಪಡೆದುಕೊಂಡಿದೆ. ಇನ್ನು ಜಿ-20 ಸಭೆಯು ಸೆಪ್ಟೆಂಬರ್ 8 ರಿಂದ 10ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬಿಡನ್ ದೆಹಲಿಗೆ ಬರಲಿದ್ದಾರೆ. ಚೀನಾ ಮತ್ತು ರಷ್ಯಾ ಕೂಡ ಜಿ-20 ಸದಸ್ಯ ರಾಷ್ಟ್ರಗಳಾಗಿವೆ. ಆದರೆ ಚೀನಾ ಅಧ್ಯಕ್ಷರು ಜಿ-20 ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬರುತ್ತಾರೋ, ಇಲ್ಲವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವರ್ಷ ಸಂಕ್ಷಿಪ್ತ ಸಭೆ
ಮೇ 2020ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆ ನಡೆದಿತ್ತು. ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತ-ಚೀನಾ ದೇಶಗಳ ಸೇನಾ ಮಟ್ಟದಲ್ಲಿ ಸಭೆಗಳು ನಡೆದಿದ್ದವು. ಅದಾದ ಬಳಿ 2022, ನವೆಂಬರ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಮೋದಿ ಮತ್ತು ಜಿನ್‌ಪಿಂಗ್ ಮುಖಾಮುಖಿ ಆಗಿದ್ದರು. ಇದೀಗ ಜಿನ್‌ಪಿಂಗ್ ಜೊತೆ ಗಲ್ವಾನ್ ಸಂಘರ್ಷದ ಬಳಿಕ ಎರಡನೇ ಮುಖಾಮುಖಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ