ಕ್ಲೋನಿಂಗ್ ತಂತ್ರಜ್ಞಾನದಿಂದ 3 ಹಸುಗಳನ್ನ ಸೃಷ್ಟಿಸಿದ ವಿಜ್ಞಾನಿಗಳು
ಚೀನಾದ 10 ಸಾವಿರ ತಳಿಗಳಲ್ಲಿ 5 ತಳಿಗಳಿಗೆ ಈ ಸಾಮರ್ಥ್ಯ
ಅಬೀಜ ತಂತ್ರಜ್ಞಾನ ಬಳಸಿಕೊಂಡು ಈ ಹಸುಗಳ ಸಂತಾನೋತ್ಪತ್ತಿ
ಒಂದು ಹಸು ದಿನಕ್ಕೆ ಎಷ್ಟು ಲೀಟರ್ ಹಾಲು ಕೊಡಬಹುದು. ಭಾರತದಲ್ಲಿ ಕಂಡುಬರುವ ದೇಶೀಯ ತಳಿಗಳು 50 ರಿಂದ 100 ಲೀಟರ್ವರೆಗೆ ಕೊಟ್ರೆ ಅದೇ ಹೆಚ್ಚು. ಆದ್ರೆ ಚೀನಾದಲ್ಲಿ ಭಾರಿ ಸಾಮರ್ಥ್ಯದ ಸೂಪರ್ ಹಸುಗಳನ್ನು ಸೃಷ್ಟಿಸಲಾಗಿದ್ಯಂತೆ. ಈ ಹಸುಗಳು ಸಾವಿರಾರು ಲೀಟರ್ ಹಾಲು ಕೊಡಲಿವೆಯಂತೆ.
ಭಾರತ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ. ಕೃಷಿ ಪ್ರಧಾನ ಭಾರತದಲ್ಲಿ ಶೇ.60ಕ್ಕೂ ಹೆಚ್ಚು ಮಂದಿಯ ಬದುಕಿಗೆ ಹೈನುಗಾರಿಕೆಯೇ ಆಧಾರ. ಭಾರತದಲ್ಲಿ ಹಳ್ಳಿಕಾರ್, ಅಮೃತ್ಮಹಲ್, ಕಂಗಾಯಮ್, ಅಂಬ್ಲಾಚೆರಿ, ಗಿರ್, ಸಾಹಿವಾಲ್ ಸೇರಿ ಅನೇಕ ದೇಶೀಯ ತಳಿಗಳು ಇವೆ. ಇವು ಅಬ್ಬಬ್ಬಾ ಅಂದ್ರೆ 50 ರಿಂದ 100 ಲೀಟರ್ವರೆಗೂ ಹಾಲು ಕೊಡುವ ಸಾಮರ್ಥ್ಯ ಹೊಂದಿವೆ.
ಬ್ರಿಟನ್‌ನ ಸಾಮಾನ್ಯ ಹಸುವೊಂದು ವರ್ಷಕ್ಕೆ ಸುಮಾರು 8,206 ಲೀಟರ್ ಹಾಲು ಕೊಡುವ ಸಾಮರ್ಥ್ಯ ಹೊಂದಿರುತ್ತವೆ. ಈಗ ಚೀನಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜೀವಿತಾವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಕೊಡುವ ಹೊಸ ಹಸುಗಳನ್ನ ಚೀನಾ ವಿಜ್ಞಾನಿಗಳು ಸೃಷ್ಟಿಸಿದ್ದಾರಂತೆ. ಚೀನಾದ ಈ ಹೊಸ ತಳಿಗಳು ಬ್ರಿಟನ್‌ನ ಹಸುಗಳಿಗೆ ಹೋಲಿಸಿದ್ರೆ ಎರಡುಪಟ್ಟು ಹೆಚ್ಚು ಹಾಲು ನೀಡ್ತವಂತೆ.

ಚೀನಾದ ನಿಂಗ್‌ಕ್ಸಿಯಾ ಹುಯಿ ಪ್ರಾಂತ್ಯದ ವಿಜ್ಞಾನಿಗಳು ಅಸಾಧಾರಣ ಪ್ರಮಾಣದಲ್ಲಿ ಹಾಲು ನೀಡುವ ಮೂರು ‘ಸೂಪರ್ ಹಸು’ಗಳನ್ನು ಸೃಷ್ಟಿಸಿದ್ದಾರೆ ಅಂತ ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ. ಇದು ಚೀನಾ ಡೇರಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲಿದ್ದು, ವಿದೇಶಿ ತಳಿಗಳ ಮೇಲೆ ಅವಲಂಬನೆಯನ್ನ ತಗ್ಗಿಸಲಿದೆ. ಜೊತೆಗೆ ಚೀನಾದಲ್ಲಿನ ಹಾಲಿನ ಕೊರತೆ ನೀಗಿಸಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

3 ಸೂಪರ್ ಹಸುಗಳನ್ನು ಚೀನಾ ವಿಜ್ಞಾನಿಗಳು ಸೃಷ್ಟಿಸಿದ್ದು ಈ ಹಸುಗಳು ಒಂದು ವರ್ಷಕ್ಕೆ 18 ಸಾವಿರ ಲೀಟರ್ ಹಾಲು ಕೊಡುವ ಸಾಮರ್ಥ್ಯವನ್ನು ಹೊಂದಿವೆಯಂತೆ. ಜೀವಿತಾವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಕೊಡುತ್ತೆ ಅಂತ ಹೇಳಲಾಗಿದೆ. ಬ್ರಿಟನ್ ಹಸುಗಳಿಗಿಂತ ಈ ಹಸುಗಳು 2 ಪಟ್ಟು ಹೆಚ್ಚು ಹಾಲು ಕೊಡಲಿವ್ಯಂತೆ. ಈ ಸೂಪರ್ ಹಸುಗಳು ಚೀನಾದ ಹಾಲು ಉತ್ಪಾದನೆಯನ್ನು ಮತ್ತಷ್ಟು ವೃದ್ಧಿಸಲಿದೆ ಎನ್ನಲಾಗಿದೆ. ಚೀನಾದ 10 ಸಾವಿರ ತಳಿಗಳಲ್ಲಿ 5 ತಳಿಗಳು ಮಾತ್ರ ಈ ಸಾಮರ್ಥ್ಯ ಹೊಂದಿದ್ದು ಇನ್ನು ಹೆಚ್ಚು ಸೂಪರ್ ತಳಿಗಳನ್ನು ಸೃಷ್ಟಿಸಲು ಚೀನಾ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಇದನ್ನು ಓದಿ: ಅಫ್ರಿದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕ್ ವೇಗಿ ಶಹೀನ್ ಅಫ್ರಿದಿ
ಚೀನಾದಲ್ಲಿ ಸದ್ಯ 3 ಸೂಪರ್ ಹಸುಗಳನ್ನು ಸೃಷ್ಟಿಸಲಾಗಿದ್ದು ಇನ್ನು 2-3 ವರ್ಷಗಳಲ್ಲಿ 1 ಸಾವಿರಕ್ಕೂ ಹೆಚ್ಚು ಸೂಪರ್ ಹಸುಗಳನ್ನು ಸೃಷ್ಟಿಸಲು ಯೋಜನೆ ರೂಪಿಸಿದ್ದೇವೆ ಅಂತ ಈ ಯೋಜನೆಯ ಮುಖ್ಯಸ್ಥ ಜಂಗ್ ಯಾಪಿಂಗ್ ಹೇಳಿದ್ದಾರೆ.

ಚೀನಾದ ನಾರ್ತ್ವೆಸ್ಟ್ ವಿವಿಯ ವಿಜ್ಞಾನಿಗಳು ಹೊಸ ತಳಿ ಸೃಷ್ಟಿಸಿದ್ದು ಇದಕ್ಕೆ ಸಮ್ಯಾಟಿಕ್ ಸೆಲ್ ನ್ಯೂಕ್ಲಿಯರ್ ವರ್ಗಾವಣೆ ತಂತ್ರಜ್ಞಾನ ಬಳಕೆ ಮಾಡಿದ್ದಾರೆ. ಅಬೀಜ ತಂತ್ರಜ್ಞಾನ ಬಳಸಿಕೊಂಡು ಈ ಹಸುಗಳ ಸಂತಾನೋತ್ಪತ್ತಿ ಮಾಡಿದ್ದಾರೆ. ನೆದರ್‌ಲ್ಯಾಂಡ್ ಮೂಲದ ಹಾಲ್‌ಸ್ಟೀನ್ ಫ್ರೀಸಿಯನ್ ತಳಿಯಿಂದ ಅಬೀಜ ಸಂತಾನ ಸೃಷ್ಟಿಸಲಾಗಿದೆ.
ಹಸುಗಳ ಕಿವಿಯ ಭಾಗದಿಂದ ಅಂಗಾಂಶವನ್ನು ಸಂಗ್ರಹಿಸಿ, ಮೊದಲ ಬ್ಯಾಚ್‌ನಲ್ಲಿ 120 ಅಬೀಜ ಭ್ರೂಣಗಳ ಸೃಷ್ಟಿಸಲಾಗಿತ್ತು. ಇವುಗಳಲ್ಲಿ ಶೇ 42ರಷ್ಟನ್ನು ಹಸುಗಳಿಗೆ ಯಶಸ್ವಿ ಗರ್ಭಧಾರಣೆ ಮಾಡಲಾಗಿದೆ. ಶೇ.17.5ರಷ್ಟು ಹಸುಗಳು 200 ದಿನದ ಬಳಿಕ ಗರ್ಭ ಧರಿಸಿದ್ದವು. ಹೊಸ ತಳಿಯ ಹಸುಗಳಿಂದ ಚೀನಾದಲ್ಲಿ ಹಾಲಿನ ಉತ್ಪಾದನೆ ಹೆಚ್ಚಲಿದೆ. ಭಾರತದಲ್ಲೂ ಇಂತಹ ಹೊಸ ತಳಿಗಳ ಆವಿಷ್ಕಾರ ನಡೆದ್ರೆ ಮತ್ತಷ್ಟು ಶ್ವೇತಕ್ರಾಂತಿ ನಡೆಯೋದ್ರಲ್ಲಿ ಅನುಮಾನವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ