newsfirstkannada.com

ಭಾರತದ ಮೇಲೆ ಮತ್ತೆ ಚೀನಾ ಮಸಲತ್ತು; ನೇಪಾಳ-ಭೂತಾನ್ ಎತ್ತಿಕಟ್ಟಿದ ಡ್ರ್ಯಾಗನ್ ರಾಷ್ಟ್ರಹೇಳಿದ್ದೇನು?

Share :

06-09-2023

    ಭೂತಾನ್, ನೇಪಾಳಕ್ಕೆ ಭಾರತದ ಕೊಡುಗೆ ಪ್ರಶ್ನಿಸಿದ ಚೀನಾ

    ನೆರೆಯ ರಾಷ್ಟ್ರಗಳ ಮಧ್ಯೆ ಕಿಚ್ಚು ಇಡಲು ಬಂದ ರಾಯಭಾರಿ

    ಜಿ20 ಶೃಂಗಸಭೆ ನಡೆಯುತ್ತಿರುವುದು ಚೀನಾಕ್ಕೆ ಸಹಿಸಲಾಗ್ತಿಲ್ಲ

ನವದೆಹಲಿ: ಭಾರತದಲ್ಲಿ ಜಿ20 ಶೃಂಗಸಭೆ ನಡೆಯುವ ವೇಳೆಯೇ ನೆರೆಯ ರಾಷ್ಟ್ರಗಳನ್ನು ಎತ್ತಿಕಟ್ಟುವ ಕೆಲಸ ಚೀನಾದ ರಾಯಭಾರಿ ಚೆನ್ ಸಾಂಗ್ ಅವರು ಮಾಡಿದ್ದಾರೆ. ಸದ್ಯ ಇವರು ನೇಪಾಳ ಪ್ರವಾಸದಲ್ಲಿದ್ದಾರೆ.

ನೇಪಾಳದ ಕಠ್ಮಂಡುವಿನ ನ್ಯೂ ಬನೆಸ್ವರ್‌ನಲ್ಲಿನ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಚೀನಾದ ರಾಯಭಾರಿ ಚೆನ್​ ಸಾಂಗ್, ನೇಪಾಳ ಮತ್ತು ಭೂತಾನ್​ ಅನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದು ಈ 2 ದೇಶಗಳಿಗೆ ಭಾರತದ ಕೊಡುಗೆ ಏನು ಇಲ್ಲ. ಈ ಹಿಮಾಲಯದ ರಾಷ್ಟ್ರಗಳಿಗೆ ಚೀನಾ ವ್ಯಾಪಾರ-ವ್ಯವಹಾರದಲ್ಲಿ ಉತ್ತಮವಾದ ಪಾಲುದಾರ ಎಂದು ತಮ್ಮ ಬೆನ್ನು ಅನ್ನು ತಾವೇ ತಟ್ಟಿಕೊಂಡು ಸಂತಸಗೊಂಡಿದ್ದಾರೆ. ಅಲ್ಲದೇ ಭಾರತದ ಜೊತೆ ನೋಡಿ ಹೆಜ್ಜೆಯನ್ನಿಡುವಂತೆ ನೇಪಾಳಕ್ಕೆ ಚೆನ್​ ಸಾಂಗ್ ಹೇಳಿದ್ದಾರೆ ಎನ್ನಲಾಗಿದೆ.

ಭಾರತದಿಂದ ನೇಪಾಳ ಮತ್ತು ಭೂತಾನ್​ಗೆ ಯಾವ ರೀತಿಯಾಗಿ ಸಹಾಯವಾಗಿದೆ. ಆರ್ಥಿಕವಾಗಿ ಎಷ್ಟು ಸಹಾಯ ಮಾಡಿದೆ. ಈ ಎರಡು ದೇಶಗಳು ಅಭಿವೃದ್ಧಿ ಹೊಂದಲು ಭಾರತದ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ದುರದೃಷ್ಟವಶಾತ್ ಭಾರತವನ್ನು ನೆರೆಯ ರಾಷ್ಟ್ರವಾಗಿ ಪಡೆದಿದ್ದೀರಿ. ಇದು ದೊಡ್ಡ ಮಾರ್ಕೆಟ್ ಅನ್ನು ಹೊಂದಿದೆ. ಹೀಗಾಗಿ ನೀವು ಅಭಿವೃದ್ಧಿ ಹೊಂದಲಾಗುತ್ತಿಲ್ಲ ಎಂದು ನೇಪಾಳ-ಭಾರತದ ನಡುವೆ ಹುಳಿ ಹಿಂಡುವ ಕೆಲಸವನ್ನು ಚೀನಾ ರಾಯಭಾರಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ನಾಡಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು ವಿಶ್ವದ ಅಗ್ರಗಣ್ಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಭಾರತದ ಕೀರ್ತಿ, ಮಹತ್ವ ವಿಶ್ವಕ್ಕೆ ಗೊತ್ತಾಗಲಿದೆ. ಇದನ್ನು ಸಹಿಸಿಕೊಳ್ಳಲಾಗದ ಚೀನಾವು ಭಾರತದ ಮೇಲೆ ಗೂಬೆ ಕೂರಿಸೋ ಕೆಲಸ ಮಾಡುತ್ತಿದೆ. ಅಲ್ಲದೇ ಈ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಷಿ ಜಿನ್​ ಪಿಂಗ್​ ಗೈರಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಮೇಲೆ ಮತ್ತೆ ಚೀನಾ ಮಸಲತ್ತು; ನೇಪಾಳ-ಭೂತಾನ್ ಎತ್ತಿಕಟ್ಟಿದ ಡ್ರ್ಯಾಗನ್ ರಾಷ್ಟ್ರಹೇಳಿದ್ದೇನು?

https://newsfirstlive.com/wp-content/uploads/2023/09/CHINA.jpg

Load More