ಟೊಮ್ಯಾಟೋ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ರೈತ
‘ಕೆಂಪುರಾಣಿ’ ಕೊಟ್ಟ ಹಣದಲ್ಲಿ ಚಿನ್ನದಂಗಡಿ ಓಪನ್!
ರೈತರ ಬಾಳು ಬೆಳಗಿದ ಟೊಮ್ಯಾಟೋ, ಬಡತನ ದೂರ!
ತರಕಾರಿ ಮಾರ್ಕೆಟ್ನಲ್ಲಿ ಮಹಾರಾಣಿಯಾಗಿ, ಅಡುಗೆಮನೆ ಸಾಮ್ರಾಜ್ಯಕ್ಕೆ ಅಧಿಪತಿಯಾಗಿದ್ದ ಕೆಂಪುರಾಣಿಯ ಬೆಲೆ ಅಟ್ಟಕ್ಕೇರಿದೆ. ನಾನೆ ಎಲ್ಲಾ, ನಾನಿಲ್ಲದೇ ಅಡುಗೆಯೇ ಇಲ್ಲ ಅಂತ ಕೆಂಪು ತರಕಾರಿಯ ಬೆಲೆ ಏರಿಕೆಯಾಗಿದೆ. ಜೊತೆಗೆ ಸಾಲ ಸೋಲ ಮಾಡಿ ಕೈ ಸುಟ್ಟುಕೊಳ್ತಿದ್ದ ಅದೆಷ್ಟೋ ರೈತರ ಜೇಬನ್ನು ಈ ಕೆಂಪು ಸುಂದರಿ ತುಂಬಿಸಿದ್ದಾಳೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ.
ಪ್ರತಿ ಮನೆಗಳ ಕಿಚನ್ನಲ್ಲಿ ಈ ರೆಡ್ ಬ್ಯೂಟಿ ಇದ್ದೇ ಇರ್ತಾಳೆ. ಇವಳು ಇಲ್ಲಾ ಅಂದ್ರೆ ಅಡುಗೆ ಮಾಡೋದು ಕಷ್ಟ. ಆದರೀಗ ಮನೆಯಲ್ಲಿ ಟೊಮ್ಯಾಟೋ ಚಟ್ನಿ ಮಾಡುವಂತಿಲ್ಲ. ಟೊಮ್ಯಾಟೋ ರೈಸ್ ತಿನ್ನುವಂತಿಲ್ಲ. ಟೊಮ್ಯಾಟೋ ಸಾಂಬಾರ್ ಬಗ್ಗೆ ಅಂತೂ ಯೋಚ್ನೆ ಮಾಡೋ ಹಾಗಿಲ್ಲ. ಅಷ್ಟರ ಮಟ್ಟಿಗೆ ಕೆಂಪುರಾಣಿಯ ಬೆಲೆ ಏರಿಕೆಯಾಗಿದೆ. ರೆಡ್ ಬ್ಯೂಟಿಗೆ ಈಗ ಚಿನ್ನದ ಬೆಲೆ ಬಂದಿದೆ. ಟೊಮ್ಯಾಟೋ ಬೆಲೆ ಏರುತ್ತಾ ಶತಕ ಬಾರಿಸಿ ದ್ವಿಶತಕದತ್ತ ದಾಪುಗಾಲಿಟ್ಟಿತ್ತು. ಟೊಮ್ಯಾಟೋ ಕೊಳ್ಳುವ ಗ್ರಾಹಕರ ಜೇಬನ್ನ ಸುಟ್ಟಿತ್ತು. ಆದ್ರೆ, ರೈತರ ಬಾಳನ್ನ ಈ ಕೆಂಪುರಾಣಿ ಹಸನಾಗಿಸಿದ್ದಾಳೆ. ಬರಿದಾಗಿದ್ದ ಜೇಬನ್ನ ಗರಿ ಗರಿ ನೋಟಿನಿಂದ ತುಂಬಿಸಿದ್ದಾಳೆ.

ದೇಶದೆಲ್ಲೆಡೆ ಈಗ ಟೊಮ್ಯಾಟೋ ಅಂದ್ರೆ ರೆಡ್ ಡೈಮಂಡ್ ಎನ್ನುವಂತಾಗಿದೆ. ಇದೇ ಬೆಳೆಯನ್ನ ಬೆಳೆದು ರೈತನೋರ್ವ ಲಕ್ಷ ಲಕ್ಷ ಲಾಭ ಗಳಿಸಿದ್ದಾನೆ. ಟೊಮ್ಯಾಟೋದಿಂದ ಬಂದ ಹಣದಲ್ಲೇ ಚಿನ್ನದ ವ್ಯಾಪಾರವನ್ನೇ ಆರಂಭಿಸಿದ್ದಾನೆ. ಟೊಮ್ಯಾಟೋದ ಚಿನ್ನದ ಬೆಲೆ ಆತನ ಬಾಳನ್ನೇ ಈಗ ಚಿನ್ನವಾಗಿಸಿಬಿಟ್ಟಿದೆ.
ಚಿಂತಾಮಣಿ ತಾಲೂಕಿನ ನಲಮಾಚನಹಳ್ಳಿ ನಿವಾಸಿಯಾದ ಚಂದ್ರಶೇಖರ್ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಇನ್ನೂ ಈಗ ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿರುವ ಕಾರಣ 50 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ. ಇದೀಗ ಟೊಮ್ಯಾಟೋ ಮಾರಾಟದಿಂದ ಭರ್ಜರಿ ಲಾಭ ಗಳಿಸಿದ್ದ ಚಂದ್ರಶೇಖರ್ ಚಿನ್ನದ ವ್ಯಾಪಾರಕ್ಕೆ ಕೈ ಹಾಕಿದ್ದಾರೆ. ಇತ್ತ ರೆಡ್ ಚಿನ್ನವನ್ನ ಮಾರಾಟ ಮಾಡಿದ್ದ ದುಡ್ಡಿನಲ್ಲಿ ಅಸಲಿ ಚಿನ್ನಜ ಮಳಿಗೆಯನ್ನೇ ತೆರೆದಿದ್ದಾರೆ. ಚಿಂತಾಮಣಿ ನಗರದ ಆಚಾದ್ ಚೌಕ್‌ನಲ್ಲಿ ರೈತ ಚಂದ್ರಶೇಖರ್ ಚಿನ್ನದಂಗಡಿಯನ್ನೇ ಓಪನ್ ಮಾಡಿದ್ದಾರೆ.
ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು
ಚಂದ್ರಶೇಖರ್ ಮೂಲತಃ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದವರು. 2009ನೇ ಇಸವಿಯಿಂದಲೂ ಟೊಮ್ಯಾಟೊ ಬೆಳೆಯುತ್ತಿದ್ದಾರೆ. ಈ ಮದ್ಯೆ ಹಲವು ಬಾರಿ ಟೊಮ್ಯಾಟೋ ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಆದ್ರೆ ಈ ಬಾರಿ ಟೊಮ್ಯಾಟೋಗೆ ಬಂಗಾರದ ಬೆಲೆ ಬಂದಿದ್ದು ಈತನ ಬಾಳನ್ನೇ ಬಂಗಾರವಾಗಿಸಿದೆ. ತನ್ನ ಒಂದೂವರೆ ಎಕರೆಯಲ್ಲಿ ಭರ್ಜರಿ ಟೊಮ್ಯಾಟೋ ಬೆಳೆದು ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸಿದ್ದಾನೆ. ಈಗಾಗಲೇ ಚಿನ್ನದಂಗಡಿಯಲ್ಲಿ ಕೆಲಸ ಮಾಡಿದ ಅನುಭವವಿದ್ದ ಚಂದ್ರಶೇಖರ್‌ಗೆ ತಾನೇಕೆ ಚಿನ್ನದಂಗಡಿ ತೆರೆಯಬಾರದು ಎಂಬ ಯೋಚನೆ ಬಂದಿತ್ತು. ಹೀಗೆ ಯೋಚಿಸುತ್ತಾ ಕೊನೆಗೆ ಬಂಗಾರದ ಬ್ಯುಸಿನೆಸ್‌ಗೂ ಇಳಿದೇ ಬಿಟ್ಟಿದ್ದಾರೆ. ಚಿಂತಾಮಣಿಯಲ್ಲಿ ನಕ್ಷತ್ರ ಅನ್ನೋ ಹೆಸರಿನಲ್ಲಿ ಚಿನ್ನದಂಗಡಿ ತೆರೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಒಟ್ಟಾರೆ, ಗಗನಕ್ಕೇರಿದ್ದ ಟೊಮ್ಯಾಟೋ ಬೆಲೆ ಸದ್ಯ ಕೊಂಚ ಇಳಿಕೆಯಾಗಿದ್ದು, ಗ್ರಾಹಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಆದ್ರೆ, ಬಂಗಾರದ ಬೆಲೆ ಬಂದಿರೋದ್ರಿಂದ ಅದೆಷ್ಟೋ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ.. ಬಡತನವನ್ನ ದೂರವಾಗಿದೆ. ಅದೇ ರೀತಿ ಚಿಂತಾಮಣಿಯ ರೈತ ಚಂದ್ರಶೇಖರ್ ಅವರ ಬದುಕು ಟೊಮ್ಯಾಟೋದಿಂದ ಬಂಗಾರ ಆಗಿರೋದು ಖುಷಿಯ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ